• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೇರಳದಲ್ಲಿ ಮತ್ತೆ ನಿಫಾ ವೈರಸ್ ಭೂತ!

ಪ್ರತಿಧ್ವನಿ by ಪ್ರತಿಧ್ವನಿ
July 22, 2024
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಿಶೇಷ
0
ಕೇರಳದಲ್ಲಿ ಮತ್ತೆ ನಿಫಾ ವೈರಸ್ ಭೂತ!
Share on WhatsAppShare on FacebookShare on Telegram

ಕರ್ನಾಟಕದ ನೆರೆಯ ರಾಜ್ಯವಾಗಿರುವ ಕೇರಳದಲ್ಲಿ(Kerala) ಮತ್ತೆ ನಿಫಾ ವೈರಸ್‌ (Nipha Virus) ಹೆಚ್ಚಾಗಿದೆ. ಈಗಾಗಲೇ ರಾಜ್ಯದಲ್ಲಿ ಹೈ ಅಲರ್ಟ್​​ ಘೋಷಿಸಲಾಗಿದೆ. ಇನ್ನು ಕೇರಳದಲ್ಲಿ ನಿಫಾ ವೈರಸ್​ ಹೆಚ್ಚಾಗುತ್ತಿದ್ದಂತೆ ಕರ್ನಾಟಕದಲ್ಲೂ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಈಗಾಗಲೇ ಡೆಂಗ್ಯೂ (Dengue) ಭೀತಿ ತಲೆದೂರಿದೆ. ಈ ಮಧ್ಯೆ ನಿಫಾ ವೈರಸ್​ ಆತಂಕವೂ ಹೆಚ್ಚಾಗಿದೆ.

ADVERTISEMENT

ಇನ್ನು ಕರ್ನಾಟಕದಲ್ಲಿ ನಿಫಾ ವೈರಸ್​ಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಕೇರಳಾದಿಂದ ಕರ್ನಾಟಕಕ್ಕೆ ದಿನನಿತ್ಯ ಸಂಚಾರ ಮಾಡುವ ಪ್ರಯಾಣಿಕರ ಮೇಲೆ ಹದ್ದಿನ‌ ಕಣ್ಣಿಡಲಾಗಿದೆ. ಜೊತೆಗೆ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತ ಮುಂದಾಗಿದೆ.

ಮೈಸೂರಿನ ಎಚ್.ಡಿ ಕೋಟೆಯ ಬಾವಲಿ ಚೆಕ್ ಪೋಸ್ಟ್(Bavali Check Post of HD Kote, Mysore) ಬಳಿ ಕಟ್ಟೆಚ್ಚರ ಹಾಕಿದ್ದು, ಕೇರಳಾದಿಂದ ರಾಜ್ಯಕ್ಕೆ ಪ್ರವೇಶಿಸುವ ಎಲ್ಲಾ ಕಡೆ ತೀವ್ರ ನಿಗಾ ವಹಿಸಲಾಗಿದೆ. ಈ ಮೂಲಕ ರಾಜ್ಯಕ್ಕೆ ನಿಫಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ.

ಇನ್ನು ಈಗಾಗಲೇ 14 ವರ್ಷದ ಬಾಲಕ ನಿಫಾ ವೈರಸ್​ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾನೆ. ಪಾಂಡಿಕ್ಕಾಡ್‌ (Pandikkad) ಮೂಲದ ಬಾಲಕನಾಗಿದ್ದು, ಈತನ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್​ನಲ್ಲಿ (Quarantine) ಇಡಲಾಗಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Health Minister Veena George) ಮಾಹಿತಿ ನೀಡಿದ್ದಾರೆ.

ಬಾಲಕ ಸಾವನ್ನಪ್ಪಿದ ಬೆನ್ನಲ್ಲೇ ಕೇರಳ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಬಾಲಕನ ಸಂಪರ್ಕ ಹೊಂದಿದ್ದ, ಜೊತೆಗಿದ್ದವರನ್ನು ಕ್ವಾರಂಟೈನ್​ನಲ್ಲಿಡುವಂತೆ ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಇದು ಐದನೇ ಬಾರಿ ನಿಫಾ ದೃಢಪಟ್ಟಿದೆ. ಮೇ-ಜೂನ್ 2018 ರ ಅವಧಿಯಲ್ಲಿ, ಕೋಝಿಕ್ಕೋಡ್ ಮತ್ತು ಮಲಪ್ಪುರಂ (Kojikkod and Malappuram) ಜಿಲ್ಲೆಗಳಲ್ಲಿ 18 ಜನರಿಗೆ ನಿಫಾ ದೃಢಪಟ್ಟಿತ್ತು. ಈ ವರ್ಷ ಮೊದಲ ಬಾರಿಗೆ ವೈರಸ್ ಪತ್ತೆಯಾಗಿದೆ. 2018 ರಲ್ಲಿ ಒಬ್ಬ ರೋಗಿಯು ಮಾತ್ರ ಬದುಕುಳಿದರು. ನಂತರ ನಿಫಾ 2019, 2021 ಮತ್ತು 2023 ರಲ್ಲಿ ಮತ್ತೆ ಕೇರಳದಲ್ಲಿ ವರದಿಯಾಗಿದೆ.

2021 ರಲ್ಲಿ, ಕೋಝಿಕ್ಕೋಡ್‌ನಲ್ಲಿ 12 ವರ್ಷದ ಬಾಲಕ ಸೋಂಕಿನಿಂದ ಸಾವನ್ನಪ್ಪಿದನು. 2023 ರಲ್ಲಿ, ಆರು ಪ್ರಕರಣಗಳು ವರದಿಯಾಗಿವೆ ಮತ್ತು ಇಬ್ಬರು ಸಾವನ್ನಪ್ಪಿದರು. ಇದೀಗ 2024ರಲ್ಲಿಯೂ ನಿಫಾ ವೈರಸ್​ ಪತ್ತೆಯಾಗಿದೆ. ಪ್ರತಿ ಸಂದರ್ಭದಲ್ಲಿ, ರಾಜ್ಯವು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಕ್ರಮವನ್ನು ತೆಗೆದುಕೊಳ್ಳುತ್ತಲೇ ಇದೆ. ಇನ್ನು ಈ ಸೋಂಕು ಬಾವಲಿಗಳಿಂದ ಹರಡುತ್ತದೆ ಎಂದು ನಂಬಲಾಗಿದೆ, ಆದರೆ ನಿಖರವಾದ ಮೂಲ ಇನ್ನೂ ದೃಢೀಕರಿಸಲಾಗಿಲ್ಲ.

Tags: Dengue FeverKarnatakaKeralanipha virus
Previous Post

KRS ಜಲಾಶಯ ವೀಕ್ಷಿಸಿದ ಡಿಕೆಶಿ..!

Next Post

ನಯನ ಮೋಟಮ್ಮ ಮಾತಿಗೆ ಹೆದರಿಕೊಂಡು ಓಡಿ ಹೋದ ಬಿಜೆಪಿಗರು..!

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

ಸಿದ್ದರಾಮಯ್ಯ ಲವ್ ಸ್ಟೋರಿ ಮರುಚರ್ಚೆ: ‘ಭಾಗ್ಯ’ ಯೋಜನೆಗಳ ಅರ್ಥ ಏನು? ಸಿಎಂ ಸ್ಪಷ್ಟನೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
Next Post

ನಯನ ಮೋಟಮ್ಮ ಮಾತಿಗೆ ಹೆದರಿಕೊಂಡು ಓಡಿ ಹೋದ ಬಿಜೆಪಿಗರು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada