ಅತ್ಯಾಚಾರ ಮತ್ತು ಅಪಹರಣದ ಆರೋಪಿಯಾಗಿ ಭಾರತದಿಂದ ತಲೆಮರೆಸಿಕೊಂಡು ಪ್ರತ್ಯೇಕ ರಾಷ್ಟ್ರದ ಕಲ್ಪನೆ ನೀಡಿರುವ ಬಿಡದಿಯ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಈ ಮತ್ತೆ ಸುದ್ದಿಯಾಗಿದ್ದಾರೆ.
4 ವರ್ಷಗಳ ಹಿಂದೆ ಭಾರತದಿಂದ ನಾಪತ್ತೆಯಾಗಿ ವಿದೇಶದಲ್ಲಿ ನೆಲೆಸಿರುವ ಸ್ವಯಂ ಘೋಷಿತ ದೇವ ಮಾನವ ಈಕ್ವೆಡಾರ್ ಕರಾವಳಿಯಲ್ಲಿ ದ್ವೀಪವೊಂದನ್ನು ಖರೀದಿಸಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿಕೊಂಡಿದ್ದಾರೆ. ಈಗ ತಮ್ಮ ಆಶ್ರಮದಲ್ಲಿಯೇ ಕನ್ನಡ ಚಲನಚಿತ್ರದ ಗೀತೆಯೊಂದಕ್ಕೆ ವಾದ್ಯ ನುಡಿಸುವ ಮೂಲಕ ಜನರನ್ನು ನಿಬ್ಬೆರಾಗಿಸಿದ್ದಾರೆ.
ನಿತ್ಯಾನಂದ ಕೈಲಾಸ ದೇಶದಲ್ಲಿ ಕನ್ನಡದ ನಟ ಶಿವರಾಜ್ ಕುಮಾರ್ ಅಭಿಯನದ ಜೋಗಯ್ಯ ಸಿನಿಮಾದ ಹಾಡು ಸದ್ದು ಮಾಡಿದೆ. ಜೋಗಯ್ಯ ಹಾಡಿಗೆ ಡ್ರಮ್ಸ್ ಬಾರಿಸುವ ಮೂಲಕ ಸ್ವಯಂ ಘೋಷಿತ ದೇವ ಮಾನವ ಗಮನಸೆಳೆದಿದ್ದಾರೆ. ಈ ಭಜನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.
ಕೈಲಾಸ ದೇಶದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಜೋಗಯ್ಯ ಸಿನಿಮಾದ ʼಅವನ್ಯಾರೋ ಜೋಗಯ್ಯ.. ಜೋಗಯ್ಯ..ʼ ಕೇಳಿ ಬಂದಿದೆ. ಈ ವೇಳೆ ಸ್ವತಃ ಸ್ವಯಂ ಘೋಷಿತ ದೇವ ಮಾನವ ಜೋಗಯ್ಯ ಹಾಡಿಗೆ ಡ್ರಮ್ಸ್ ಬಾರಿಸಿದ್ದಾರೆ. ಡ್ರಮ್ಸ್ ಸದ್ದು ಮೊಳಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ಹಾಜರಿದ್ದ ಭಕ್ತರು ಕರತಾಡನ ಮಾಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಕೈಲಾಸ ದೇಶದ ಅಧಿಕೃತ ಎನ್ನಲಾದ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಭಾನುವಾರ (ಆಗಸ್ಟ್ 13) ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಮಾಡಲಾಗಿದೆ. ವಿಡಿಯೊಗೆ “ದೈವಿಕ ಬೀಟ್‌ಗಳ ಲಯಕ್ಕೆ ತಲೆದೂಗಲು ಸಜ್ಜಾಗಿ” ಎಂದು ಶೀರ್ಷಿಕೆ ಬರೆಯಲಾಗಿದೆ. ನಿತ್ಯಾನಂದ ಡ್ರಮ್ ಬಾರಿಸಿರುವ 51 ಸೆಕೆಂಡುಗಳ ಈ ವಿಡಿಯೊಗೆ ಸದ್ಯ ಶಿವರಾಜ್ಕುಮಾರ್ ಅಭಿಮಾನಿಗಳು ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ತಾಳಕ್ಕೆ ತಕ್ಕಂತೆ ಸ್ವಯಂ ಘೋಷಿತ ದೇವ ಮಾನವ ಡ್ರಮ್ಸ್ ಬಾರಿಸಿದ್ದಾರೆ. ಇದರ ಜತೆಗೆ ಇವರು ಇತರ ಕೆಲ ಹಾಡುಗಳಿಗೂ ಡ್ರಮ್ಸ್ ಬಾರಿಸಿದ್ದಾರೆ.
ಕಳೆದ ವರ್ಷ ನಿತ್ಯಾನಂದ ತನ್ನ ಹೊಸ ದೇಶ ಕೈಲಾಸದಲ್ಲಿ 1 ಲಕ್ಷ ಜನರಿಗೆ ವಾಸಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದರು. ಅಂತಾರಾಷ್ಟ್ರೀಯ ವಲಸೆ ದಿನಾಚರಣೆ ಸಂದರ್ಭದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದ ಾವರು ಕೈಲಾಸ ದೇಶಕ್ಕೆ ಮುಂದಿನ ದಿನಗಳಲ್ಲಿ ಕನಿಷ್ಠ 1 ಲಕ್ಷ ಜನರನ್ನಾದರೂ ಆಕರ್ಷಿಸಲು ಯೋಜಿಸುತ್ತಿದ್ದೇನೆ ಎಂದು ಹೇಳಿದ್ದರು.
ಕೈಲಾಸ ದೇಶಕ್ಕೆ ರಿಸರ್ವ್ ಬ್ಯಾಂಕ್, ಪಾಸ್ಪೋರ್ಟ್, ಧ್ವಜ, ಚಿಹ್ನೆ ಮತ್ತು ವೆಬ್ಸೈಟ್ ಸಹ ಇದೆ. ಅಲ್ಲದೆ ಈಗಾಗಲೇ ಕೈಲಾಸ ಪ್ರವಾಸ ಕೈಗೊಳ್ಳುವವರಿಗೆ ವೀಸಾ ವಿತರಣೆಯನ್ನು ಸಹ ಆರಂಭಿಸಲಾಗಿದೆ.
ನಿತ್ಯಾನಂದ ಸ್ಥಾಪಿಸಿರುವುದಾಗಿ ಹೇಳಿರುವ ಕೈಲಾಸ ದೇಶ ಕೇವಲ ಕಾಲ್ಪನಿಕ, ಅಂಥದ್ದೊಂದು ದೇಶದ ವಿಶ್ವದಲ್ಲಿ ಅಸ್ತಿತ್ವದಲ್ಲಿ ಇಲ್ಲ ಎಂದು ಇತ್ತೀಚೆಗೆ ವಿಶ್ವ ಸಂಸ್ಥೆ ಹೇಳಿತ್ತು.
ಈ ಸುದ್ದಿ ಓದಿದ್ದೀರಾ? ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ, ನಟ ಉಪೇಂದ್ರ ವಿರುದ್ಧ ದೂರು ದಾಖಲು
ಬಳಿಕ ವಿಶ್ವಸಂಸ್ಥೆಯಲ್ಲಿ ಪ್ರತಿನಿಧಿಗಳ ಕಳುಹಿಸಿ ಮತ್ತೆ ಸ್ವಯಂ ಘೋಷಿತ ದೇವ ಮಾನವ ಸಂಚಲನ ಸೃಷ್ಟಿಸಿದ್ದರು. ಇತ್ತೀಚೆಗೆ ನಿತ್ಯಾನಂದನ ಕೈಲಾಸದಲ್ಲಿ ನಟಿ ರಂಜಿತಾ ಪ್ರಧಾನಿ ಎಂಬ ಘೋಷಣೆಯನ್ನು ಮಾಡಿದ್ದರು.
2005ರ ಸೂಪರ್ ಹಿಟ್ ʼಜೋಗಿʼ ಸಿನಿಮಾ ಕಥೆಯನ್ನು ಮುಂದುವರೆಸಿ ನಿರ್ದೇಶಕ ಪ್ರೇಮ್ ʼಜೋಗಯ್ಯʼ ತಯಾರಿಸಿದ್ದರು. ವಿ. ಹರಿಕೃಷ್ಣ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿದ್ದವು . ಚಿತ್ರದ ಆರಂಭದಲ್ಲೇ ಬರುವ ಶೀರ್ಷಿಕೆ ಗೀತೆ ಸಿನಿರಸಿಕರ ಮನಗೆದ್ದಿತ್ತು. ಶಿವಣ್ಣ ಅಗೋರಿ ಅವತಾರದಲ್ಲಿ ಹೆಜ್ಜೆ ಹಾಕಿದ್ದರು. ಇದೇ ಹಾಡು ಈಗ ನಿತ್ಯಾನಂದನ ಕೈಲಾಸ ದೇಶದಲ್ಲಿ ಸದ್ದು ಮಾಡಿದೆ. ಸ್ವತ: ಜೋಗಿ ಪ್ರೇಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದರು. ಶಂಕರ್ ಮಹದೇವನ್ ಗಾಯನದಲ್ಲಿ ಹಾಡು ಸಿನಿರಸಿಕರಿಗೆ ಇಷ್ಟವಾಗಿತ್ತು.