ಹಾಸನ (Hassan) ದಳಪತಿಗಳ ಭದ್ರಕೋಟೆ.. ಈ ಏಳು ಸುತ್ತಿನ ಭದ್ರ ಕೋಟೆಯನ್ನ ಕಬ್ಬ ಮಾಡಲು ಕಾಂಗ್ರೆಸ್ (congress) ಪಾಳಯ ಹೊಂಚು ಹಾಕಿ ಕುಳಿತಿದ್ರೆ, ಮತ್ತೊಂದೆಡೆ ಮೈತ್ರಿ ನಾಯಕರ ಮಧ್ಯೆ ಮುನಿಸು ಭುಗಿಲೆದ್ದಿದೆ.. ಅಸಮಾಧಾನಿತ ನಾಯಕರಿಗೆ ಸಮಾಧಾನಕ್ಕೆ ಮುಲಾಮು ಹಚ್ಚಲು ಮುಂದಾಗಿದ್ದ ಬಿಜೆಪಿ(Bjp) ನಾಯಕರಿಗೆ ಹಾಸನ ಸವಾಲಾಗಿ ಪರಿಣಮಿಸಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ (JDS) ಸಮ್ಮಿಶ್ರ ಸರ್ಕಾರವಿದ್ದಾಗ ಪ್ರೀತಂಗೌಡ (preetham gowda) ಮನೆ ಮೇಲೆ ಕಲ್ಲುತೂರಾಟ ನಡೆದಿತ್ತು.. ಈ ವೇಳೆ ಬಿಜೆಪಿ ಪಕ್ಷದ ಹಲವು ಕಾರ್ಯಕರ್ತರು ಗಾಯಗೊಂಡಿದ್ರು.. ಅಲ್ಲದೇ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದ ಆರೋಪ ಸಹ ಕೇಳಿಬಂದಿತ್ತು.. ಹೆಚ್.ಡಿ.ರೇವಣ್ಣ (HD revanna) ಮತ್ತು ಪ್ರೀತಂಗೌಡ ಪರಸ್ಪರ ಆರೋಪ, ಪ್ರತ್ಯಾರೋಪಗಳ ವಾಗ್ಯುದ್ದಕ್ಕೆ ಇಳಿದಿದ್ರು.. ಈ ಹಿನ್ನೆಲೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಬಿಜೆಪಿ ಕಾರ್ಯಕರ್ತರು ಒಲ್ಲೆ ಎನ್ನುತ್ತಿದ್ದು ರಾಜ್ಯದ ನಾಯಕರೇ ಹೇಳಿದ್ರೂ ಜಿಲ್ಲಾ ನಾಯಕರು ಡೋಂಟ್ ಕೇರ್ ಎನ್ನುತ್ತಿದ್ದಾರೆ.

ಇತ್ತ ಎಲೆಕ್ಷನ್ ಪ್ರಚಾರದಿಂದ ಪ್ರೀತಂಗೌಡ ಅಂತರ ಕಾಯ್ದುಕೊಂಡ್ರೆ ಅತ್ತ ಸಿಮೆಂಟ್ ಮಂಜು ಸಹ ಸೈಲೆಂಟ್ ಆಗಿದ್ದಾರೆ.. ಈ ಹಿನ್ನೆಲೆ ದಳಪತಿಗಳಿಗೆ ಭದ್ರ ಕೋಟೆಯೇ ತಲೆನೋವಾಗಿದ್ದು, ಹಾಸನದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಗೊಂದಲ ಮುಂದುವರೆದಿದ್ದು, ಈ ಬಗ್ಗೆ ಅಮಿತ್ ಶಾ (Amit sha) ಅವರ ಗಮನಕ್ಕೂ ತಂದಿದ್ದೇವೆ ಅಂತ ದೇವೇಗೌಡರು (Devegowda) ಹೇಳಿದ್ದಾರೆ.. ಹಾಸನಕ್ಕೆ ಚುನಾವಣಾ ಉಸ್ತುವಾರಿ ಮೋಹನ್ ದಾಸ್ ಎಂಟ್ರಿಯಾದ್ರೂ ಸಹ ಜೆಡಿಎಸ್ ಭದ್ರಕೋಟೆಯಲ್ಲಿ ಮೈತ್ರಿ ಮುಸುಕಿನ ಗುದ್ದಾಟ ಮುಗಿಯದಂತಾಗಿದೆ.












