ಮುಂಬೈ: ಲಾಕರ್ ನಲ್ಲಿರುವ ಚಿನ್ನಾಭರಣಗಳಿಗೆ ಹಾನಿಯಾದರೆ ಬ್ಯಾಂಕ್ ಗಳು ಬಾರೀ ಮೊತ್ತದ ಪರಿಹಾರ ನೀಡಬೇಕಾಗುತ್ತದೆ ಎಂದು ಆರ್ ಬಿಐ ಆದೇಶ ನೀಡಿ ಕೆಲವು ಹೊಸ ನಿಯಮಗಳನ್ನು ತಿಳಿಸಿದೆ
ಲಾಕರ್ ಗಳಿಗೆ ಗ್ರಾಹಕರು ವರ್ಷಕ್ಕೆ ಇಂತಿಷ್ಟು ಪರಿಹಾರ ನೀಡುತ್ತಾರೆ. ಆದರೆ ಇನ್ನು ಮುಂದೆ ಆರ್ ಬಿಐ ಆದೇಶದ ಪ್ರಕಾರ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡುಂತಿಲ್ಲ. ಗ್ರಾಹಕರ ಜೊತೆ ಲಾಕರ್ ವಿಚಾರವಾಗಿ ಬ್ಯಾಂಕ್ ಗಳು ನಿರಂಕುಶವಾಗಿ ವರ್ತನೆ ಮಾಡುವಂತಿಲ್ಲ. ಒಂದು ವೇಳೆ ಲಾಕರ್ ನಲ್ಲಿರುವ ಚಿನ್ನಾಭರಣ ಸೇರಿದಂತೆ ಯಾವುದೇ ವಸ್ತು ಕಳೆದು ಹೋದರೆ ಬ್ಯಾಂಕ್ ಗ್ರಾಹಕನಿಗೆ ಶೇಕಡಾ 100 ರಷ್ಟು ಪರಿಹಾರ ನೀಡಬೇಕು ಎಂದು ಆರ್ ಬಿಎ ಹೊಸ ನಿಯಮವನ್ನು ಪ್ರಕಟಿಸಿದೆ.
ಖಾಲಿ ಇರುವ ಲಾಕರ್ ಗಳು ಹಾಗೂ ವೈಟಿಂಗ್ ಲಿಸ್ಟ್ ನಲ್ಲಿರುವ ಲಾಕರ್ ಗಳ ವಿವರವನ್ನು ಬ್ಯಾಂಕ್ ಗಳು ಪಾರದರ್ಶಕವಾಗಿ ಪ್ರಕಟಿಸಬೇಕು. ಲಾಕರ್ ರೂಮ್ ನಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಆರ್ ಬಿಐ ಆದೇಶ ನೀಡಿದೆ. ಸದ್ಯದ ನಿಯಮದ ಪ್ರಕಾರ ಬ್ಯಾಂಕ್ ಗಳು ಲಾಕರ್ ಗಳಿಗೆ ಇಂತಿಷ್ಟು ಹಣ ನಿಗದಿ ಮಾಡಿದೆ.
ಎಸ್ ಬಿಐ 2,000 ರೂಪಾಯಿಯಿಂದ 12,000
ಕ್ಯಾನರಾ ಬ್ಯಾಂಕ್ 2,000 ರೂಪಾಯಿಯಿಂದ 10,000 ರೂಪಾಯಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ 1,250 ರೂಪಾಯಿಯಿಂದ 10,000 ರೂಪಾಯಿ
ಐಸಿಐಸಿಐ ಬ್ಯಾಂಕ್ 1,200 ರೂಪಾಯಿಯಿಂದ 5,000 ರೂಪಾಯಿ
ಎಚ್ ಡಿಎಫ್ ಸಿ 3,000 ರೂಪಾಯಿಯಿಂದ 20,000 ರೂಪಾಯಿ