ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನ ಟೀಕಿಸುವ ಭರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಾಂಬೆಯಲ್ಲಿದ್ದ 17 ಶಾಸಕ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರನ್ನ ವೇಶ್ಯೆಗೆ ಹೋಲಿಕೆ ಮಾಡುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೂರು ವರ್ಷ ಏನು ಮಾಡಲಾಗಲಿಲ್ಲ. ಈಗ ಚುನಾವಣೆ ಸಮೀಪ ಇರುವಾಗ ಗೆಲ್ಲೋದಿಲ್ಲ ಎಂದು ಗೊತ್ತಾಗಿದೆ, ಅದಕ್ಕೆ ಈ ವಿಚಾರ ತೆಗೆದಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕುಳಿತು ಅಧಿಕಾರ ನಡೆಸುತ್ತಾರೆ ಎಂಬ ಒಂದೇ ಕಾರಣಕ್ಕೆ ಪಕ್ಷ ಬಿಡಬೇಕಾಯಿತು. ಅಂದು ಅವರು ಸರಿಯಾಗಿದ್ದರೆ ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯಬಹುದಾಗಿತ್ತು.
ಜೆಡಿಎಸ್ ಶಾಸಕರಾಗಲಿ, ಕಾರ್ಯಕರ್ತರಾಗಲಿ ನಮ್ಮದೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಪರಿಸ್ಥಿತಿಯೂ ಇರಲಿಲ್ಲ. ಈ ಎಲ್ಲಾ ತಪ್ಪುಗಳನ್ನ ಮುಚ್ಚಿಹಾಕಿಕೊಳ್ಳಲು ಎಲೆಕ್ಷನ್ ಟೈಮ್‌ನಲ್ಲಿ ಈ ವಿಚಾರ ತೆಗೆದಿದ್ದಾರೆ. ಈ ಬಗ್ಗೆ ತನಿಖೆಗೆ ಕುಮಾರಸ್ವಾಮಿ ದೂರು ನೀಡಲಿ, ಮುಖ್ಯಮಂತ್ರಿಗಳ ಪರಮಾಧಿಕಾರದಲ್ಲಿ ಯಾವ ತನಿಖೆ ಬೇಕಾದರೂ ಆಗಲಿ. ಆರೋಪ ಮಾಡುವವರು ಬರವಣಿಗೆಯಲ್ಲಿ ಒಂದು ದೂರನ್ನು ಸಿಎಂಗೆ ನೀಡಲಿ ಎಂದು ಸವಾಲು ಹಾಕಿದರು.