ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಅನುದಾನ

ಪ್ರಮುಖವಾಗಿ ಕೃಷಿ ಸಾಲಗಳಿಗಾಗಿ 20 ಲಕ್ಷ ಕೋಟಿ ರೂ. ವಿತರಣೆ ಗುರಿ ಇಟ್ಟುಕೊಂಡಿದೆ., ಸಿರಿಧಾನ್ಯಗಳ ಬೆಳೆಗಳಿಗೆ ಸಹಕಾರ – ಶ್ರೀ ಅನ್ನ ಯೋಜನೆ, ಕೃಷಿಧಾನ್ಯ ಸಂಗ್ರಹಾಗಾರಗಳ ವಿಕೇಂದ್ರೀಕರಣ, ಕೃಷಿಗಾಗಿ ಡಿಜಿಟಲ್ ಸರ್ಕಾರಿ ಮೂಲ ಸೌಕರ್ಯ, ಕೃಷಿ ರಂಗಕ್ಕೆ ಸಾಲ ಸೌಲಭ್ಯ, ಮಾರ್ಕೆಟಿಂಗ್ ಸೌಲಭ್ಯ, ಕೃಷಿ ಸ್ಟಾರ್ಟ್‍ಪ್‍ಗಳಿಗೆ ಬೆಂಬಲ, ಪ್ರತ್ಯೇಕ ನಿಧಿ, ಬೆಳೆಗಳ ರಕ್ಷಣೆಗಾಗಿ ಕೃಷಿ ಕೇಂದ್ರಿತ ಸೇವೆ ಆರಂಭ, ಹತ್ತಿ ಬೇಸಾಯ ಹೆಚ್ಚಿಸಲು ಪ್ರತ್ಯೇಕ ಕ್ರಮ, ಮಾರ್ಕೆಟಿಂಗ್ ಸೌಲಭ್ಯ, ರಸಗೊಬ್ಬರ ಸಬ್ಸಿಡಿ ಮೊತ್ತ 1.75 ಲಕ್ಷ ಕೋಟಿಗೆ ಇಳಿಕೆ (ಕಳೆದ ವರ್ಷ 2.25 ಲಕ್ಷ ಕೋಟಿ ಕೊಟ್ಟಿತ್ತು) ಮತ್ತು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ ಮತ್ತಷ್ಟು ಬೆಂಬಲ ನೀಡುವುದಾಗಿ ಘೋಷಿಸಿ ಕೃಷಿ ಕ್ಷೇತ್ರದ ಬೆಳವಣಿಗೆ ಬಜೆಟ್‍ನಲ್ಲಿ ಅನುದಾನ ನೀಡಲಾಗಿದೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಂಡಿಸಿದ ಬಜೆಟ್‍ನ ಗಾತ್ರ 45 ಲಕ್ಷ 3 ಸಾವಿರದ 97 ಕೋಟಿ ರೂಪಾಯಿ. ಇದು ಕಳೆದ ವರ್ಷಕ್ಕೆ ಹೋಲಿಸಿದ್ರೆ 6 ಲಕ್ಷ ಕೋಟಿ ಜಾಸ್ತಿ ಮೊತ್ತವಾಗಿದೆ. ಈ ಬಜೆಟ್‍ನಲ್ಲಿ ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಅನುದಾನ ನಿಗದಿ ಮಾಡಿದೆ ಎನ್ನುವುದನ್ನು ನೋಡುವುದಾದರೆ.
ಯಾವ್ಯಾವ ವಲಯಕ್ಕೆ ಎಷ್ಟೆಷ್ಟು ಅನುದಾನ
ರಕ್ಷಣಾ ವಲಯ – 5.94 ಲಕ್ಷ ಕೋಟಿ ರೂ.
ರಸ್ತೆ, ಹೆದ್ದಾರಿ – 2.70 ಲಕ್ಷ ಕೋಟಿ ರೂ.
ರೈಲ್ವೇ ವಲಯ – 2.41 ಲಕ್ಷ ಕೋಟಿ ರೂ.
ಆಹಾರ ಇಲಾಖೆ – 2.06 ಲಕ್ಷ ಕೋಟಿ ರೂ.
ಗೃಹ – 1.96 ಲಕ್ಷ ಕೋಟಿ ರೂ.
ಗ್ರಾಮೀಣಾಭಿವೃದ್ಧಿ – 1.60 ಲಕ್ಷ ಕೋಟಿ ರೂ.
ಕೃಷಿ ಕಲ್ಯಾಣ – 1.25 ಲಕ್ಷ ಕೋಟಿ ರೂ.
ದೂರಸಂಪರ್ಕ – 1.23 ಲಕ್ಷ ಕೋಟಿ ರೂ.

ಬಜೆಟ್‍ನ ಇತರೆ ಪ್ರಮುಖಾಂಶ:
ಆರೋಗ್ಯ ವಲಯಕ್ಕೆ 7,200 ಕೋಟಿ ರೂ., ಆಯುಷ್ಮಾನ್ ಭಾರತ್‍ಗಾಗಿ 646 ಕೋಟಿ ರೂ.
ಸ್ವದೇಶಿ ಉತ್ಪನ್ನಗಳ ಮಾರಾಟಕ್ಕೆ ದೇಶಾದ್ಯಂತ ಯೂನಿಟಿ ಮಾಲ್
ದೇಶಾದ್ಯಂತ ಹೊಸದಾಗಿ 50 ಏರ್‌ಪೋರ್ಟ್, ಹೆಲಿಪ್ಯಾಡ್
ಪಿಎಂ ಕೌಶಲ್ ಯೋಜನೆಯಡಿ 4 ಲಕ್ಷ ಮಂದಿಗೆ ಟ್ರೈನಿಂಗ್
ಮತ್ತೆ ಮೂರು ವರ್ಷ ನೀತಿ ಆಯೋಗ ವಿಸ್ತರಣೆ
5ಜಿ ಅಪ್ಲಿಕೇಷನ್‍ಗಳ ಅಭಿವೃದ್ಧಿಗಾಗಿ 100 ಲ್ಯಾಬ್
ಖಾಸಗಿ ಹೂಡಿಕೆ ಆಕರ್ಷಿಸಲು ಪ್ರತ್ಯೇಕ ವಿಭಾಗ
ಇ-ಕೋರ್ಟ್‍ಗಳ ಸ್ಥಾಪನೆಗೆ 7 ಸಾವಿರ ಕೋಟಿ ರೂ.
ರಾಷ್ಟ್ರೀಯ ಸಹಕಾರ ಡೇಟಾ ಬೇಸ್‍ಗಾಗಿ 2,516 ಕೋಟಿ ರೂ.ಫಿನ್‍ಟೆಕ್ ಸೇವೆಗಳಿಗಾಗಿ ಡಿಜಿಲಾಕರ್ ಕೆವೈಸಿ ಸರಳೀಕರಣ
ಲ್ಯಾಬ್‍ಗಳಲ್ಲಿ ವಜ್ರ ತಯಾರಿಸಲು ಐಐಟಿಗಳಿಗೆ ಪ್ರತ್ಯೇಕ ನಿಧಿ
ಕೃತಕ ಬುದ್ದಿಮತ್ತೆಯ ಅಭಿವೃದ್ಧಿಗಾಗಿ ವಿಶೇಷ ಅನುದಾನ
ಮೇಕ್ ಇನ್ ಇಂಡಿಯಾ, ಮೇಕ್ ಎ ವರ್ಕ್ ಮಿಷನ್ ಶುರು
ವಿಶ್ವಕರ್ಮ ಯೋಜನೆಯಡಿ ವಿಶ್ವಕರ್ಮ ಸಮುದಾಯಕ್ಕೆ ಸಹಾಯಧನ
ದೇಶಾದ್ಯಂತ ಹೊಸದಾಗಿ 157 ನರ್ಸಿಂಗ್ ಕಾಲೇಜ್ ಸ್ಥಾಪನೆ
ಶಿಕ್ಷಕರ ತರಬೇತಿಗಾಗಿ ಡಿಜಿಟಲ್ ಶಿಕ್ಷಣ ವಿಧಾನ
ಯುವಕರು ಮಕ್ಕಳಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರೆರಿ
ಪಂಚಾಯತ್, ವಾರ್ಡ್ ಮಟ್ಟದಲ್ಲಿ ಗ್ರಂಥಾಲಯಗಳ ಸ್ಥಾಪನೆ
ದೇಶಾದ್ಯಂತ ಏಕಲವ್ಯ ಮಾಡೆಲ್ ಸ್ಕೂಲ್, 38,800 ಶಿಕ್ಷಕರ ನೇಮಕ
ದೇಶದ 50 ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿಶೇಷ ಅನುದಾನ
ದೇಖೋ ಅಪ್ನಾ ದೇಶ್ ಯೋಜನೆ ಪ್ರಾರಂಭ.