ಬೀದರ್: ವಿಜಯಪುರ (Vijayapura) ನಂತರ ಬೀದರ್ (Bidar) ಹಾಗೂ ಯಾದಗಿರಿ (yadgir) ಜಿಲ್ಲಾ ರೈತರಿಗೆ (Farmers) ವಕ್ಪ್ ಬೋರ್ಡ್ ಬಿಸಿ ತಟ್ಟಿದೆ. ಬೀದರ್ ಜಿಲ್ಲೆಯ 960ಕ್ಕೂ ಅಧಿಕ ಎಕರೆ ಭೂಮಿಯ ಪಹಣಿಯಲ್ಲಿ (Pahani) ವಕ್ಪ್ ಬೋರ್ಡ್ (Wakf Board) ಆಸ್ತಿ ಎಂದು ನಮೂದಾಗಿದೆ.
ಬೀದರ್ ಜಿಲ್ಲೆಯ ರೈತರ ಭೂಮಿ ಮೇಲೂ ವಕ್ಪ್ ವಕ್ರದೃಷ್ಟಿ..!.
ಗಡಿಜಿಲ್ಲೆ ಬೀದರ್ ಅನ್ನದಾತರಿಗೂ ವಕ್ಪ್ ಬೋರ್ಡ್ ಬಿಸಿ ತಟ್ಟಿದೆ. 960ಕ್ಕೂ ಅಧಿಕ ಎಕರೆ ರೈತರ ಭೂಮಿಯ ಪಹಣಿಯಲ್ಲಿ ವಕ್ಪ್ ಬೋರ್ಡ್ ಆಸ್ತಿ ಎಂದು ನಮೂದಾಗಿದೆ. ಬೀದರ್ ಜಿಲ್ಲೆಯ ಚಟ್ನಳ್ಳಿ ಗ್ರಾಮದ ಜಮೀನು ವಕ್ಪ್ಗೆ ಸೇರ್ಪಡೆಯಾಗಿದೆ. 2013ರಲ್ಲಿ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ ಮಂಡಳಿ ಹೆಸರು ನಮೂದಾಗಿದ್ದು, ಪಹಣಿಯ ಕಾಲಂ ನಂ.11ರಲ್ಲಿ ವಕ್ಪ್ ಬೋರ್ಡ್ ಹೆಸರು ಬಂದಿದ್ದು, ರೈತರು ಕಂಗಾಲಾಗಿದ್ದಾರೆ.
2013ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ.ಪಿ.ಜಾಫರ್ ಮಾಡಿದ ಆದೇಶಕ್ಕೆ ರೈತರ ಬದುಕು ದುಸ್ಥರವಾಗಿದೆ. ಈ ಭೂಮಿಯನ್ನು ಹಲವು ವರ್ಷಗಳಿಂದ ಆ ರೈತರೆ ಉಳುಮೆ ಮಾಡ್ತಿದ್ದು, 1, 2, 5 ಎಕರೆ ಕೃಷಿ ಭೂಮಿ ನಂಬಿ ಬದುಕುತ್ತಿದ್ದ ರೈತರ ಬದುಕು ಅಂತಂತ್ರವಾಗಿದೆ. ಇದರೊಂದಿಗೆ ರೈತರಿಗೆ ಯಾವುದೇ ಬ್ಯಾಂಕ್ನಲ್ಲಿ ಸಾಲ ಸಿಗುತ್ತಿಲ್ಲ. ಜೊತೆಗೆ ಈ ವಿಷಯವಾಗಿ ಮನೆಯಲ್ಲಿ ಜಮೀನು ಇಲ್ಲ ಎಂದು ಕನ್ಯೆ ಕೂಡ ಯುವಕರಿಗೆ ಸಿಗುತ್ತಿಲ್ಲ ಎನ್ನಲಾಗಿದೆ.
ಚಟ್ನಳ್ಳಿ ಗ್ರಾಮದ ರೈತರಾದ ಹನುಮಂತ ಬಿರಾದಾರ ಮತ್ತು ಶಂಕ್ರಪ್ಪ ಬಿರಾದಾರ ಅವರು ಜೀವನಾದ್ರೂ ಬಿಡ್ತೀವೆ, ಭೂಮಿ ಬಿಟ್ಟು ಕೊಡಲ್ಲ ಅಂತಿದ್ದು, ಇದರೊಂದಿಗೆ ಅನ್ನದಾತರೂ ಪಹಣಿಯಲ್ಲಿರೋ ವಕ್ಪ್ ಬೋರ್ಡ್ ಹೆಸರು ತೆಗೆದುಹಾಕುವಂತೆ ಆಗ್ರಹಿಸುತ್ತಿದ್ದು, ಇಲ್ಲದೆ ಹೋದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.