ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮದೇ ಪಕ್ಷದ ನಾಯಕರನ್ನು ಟೀಕಿಸುವುದರಲ್ಲಿ ಹೆಸರುವಾಸಿ. ಈ ಬಾರಿ “ಆರ್ಥಿಕ ಬೆಳವಣಿಗೆಯ ಗುರಿಗಳನ್ನು ಸಾಧಿಸುವಲ್ಲಿ ಮೋದಿ ಸರ್ಕಾರ ವಿಫಲರಾಗಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಷ್ಟ್ರೀಯ ಭದ್ರತೆಯು ಭಾರಿ ದುರ್ಬಲಗೊಂಡಿದೆ, ಪ್ರಧಾನಿ ಮೋದಿ ಚೀನಾದ ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.
“8 ವರ್ಷಗಳ ಅಧಿಕಾರಾವಧಿಯಲ್ಲಿ ಮೋದಿ ಅವರು ಆರ್ಥಿಕ ಬೆಳವಣಿಗೆಯ ಗುರಿಗಳನ್ನು ಸಾಧಿಸಲು ವಿಫಲರಾಗಿದ್ದಾರೆ. ಇದರ ಜೊತೆಗೆ, 2016 ರಿಂದ ವಾರ್ಷಿಕ ಅಭಿವೃದ್ಧಿ ದರವು ಕುಸಿಯುತ್ತಿದೆ. ರಾಷ್ಟ್ರೀಯ ಭದ್ರತೆಯು ಭಾರಿ ದುರ್ಬಲಗೊಂಡಿದೆ. ಮೋದಿಗೆ ಚೀನಾದ ಬಗ್ಗೆ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಚೇತರಿಸಿಕೊಳ್ಳಲು ಅವಕಾಶವಿದೆ ಆದರೆ ಅದು ಹೇಗೆ ಎಂದು ಅವರಿಗೆ ತಿಳಿದಿದೆಯೇ? ” ಎಂದು ಟ್ವೀಟ್ ಮಾಡುವ ಮೂಲಕ ಮೋದಿಗೆ ಟಾಂಗ್ ನೀಡಿದ್ದಾರೆ.
ಈ ಸಮಸ್ಯೆಗಳನ್ನು ಪರಿಹರಿಸಲು ನೀವು ಏನು ಸಲಹೆ ನೀಡುತ್ತೀರಿ ಎಂದು ಟ್ವೀಟ್ಟಿಗರು ಅವರನ್ನು ಕೇಳಿದಾಗ, “ಪ್ರಾಚೀನ ಋಷಿಗಳು ಸಲಹೆ ನೀಡಿದರೆ ಪಡೆದ ಜ್ಞಾನವನ್ನು ಶ್ರದ್ಧೆಯಿಂದ ಹಂಚಬೇಕು ಎಂದು ಅದನ್ನು ನಾನು ಮಾಡುತ್ತುದ್ದೇನೆ ಆದರೆ ಅದನ್ನು ಸ್ವೀಕರಿಸಬೇಕಲ್ಲ ಎಂದು ಹೇಳಿದ್ದಾರೆ.
ಪ್ರಸ್ತುತ ಪ್ರಧಾನಿಗೆ ಉತ್ತಮ ಪರ್ಯಾಯವಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ ಅವರ ಬೆಂಬಲಿಗರೊಬ್ಬರೊಂದಿಗೆ ಬಿಜೆಪಿ ಸಂಸದರು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು, “ಬ್ರಿಟಿಷ್ ಸಾಮ್ರಾಜ್ಯಶಾಹಿ ಹೇಳಿದ್ದು ಅದನ್ನೇ: ಬ್ರಿಟಿಷರನ್ನು ತೊರೆದರೆ ಭಾರತವು ಕುಸಿಯುತ್ತದೆ.” ಎಂದು ಟೀಕಿಸಿದ್ದಾರೆ.
ಮತ್ತೊರ್ವ ಟ್ವೀಟಿಗ, ‘ ಸ್ವಾಮಿ ಅವರೇ. ನೀವು ಪ್ರಧಾನಿ ಮೋದಿ ಅವರಿಗೆ ಈ ವಿಚಾರಗಳನ್ನು ತಲುಪಿಸಿ. ಅವರು ಒಪ್ಪದಿದ್ದರೂ ವಿವರಿಸಿ ಹೇಳುವ ನಿಮ್ಮ ಕೆಲಸ ನೀವು ಮಾಡಿ’ ಎಂದು ಕೇಳಿದಾಗ.
ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ನಾನು 2015 ರಿಂದ 2019 ರವರೆಗೆ ಇದೇ ಪ್ರಯತ್ನ ಮಾಡಿದೆ. ಆದರೆ ಅವರು ಅರ್ಥಶಾಸ್ತ್ರದ ಬಗ್ಗೆ ಜ್ಞಾನ ಹೊಂದಿಲ್ಲ. ಚೀನಾ ಮತ್ತು ಅದರ ಮಿತ್ರ ರಾಷ್ಟ್ರ ರಷ್ಯಾವನ್ನು ಏಕೆ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ತಿಳಿದ ನಂತರ ಎಲ್ಲ ಕೈಬಿಟ್ಟೆ’ ಎಂದು ಹೇಳಿದ್ದಾರೆ.