• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಖಾಸಗೀಕರಣದ ಏಕಸ್ವಾಮ್ಯ ಸೃಷ್ಟಿಸುವ ಬದಲು, ಆಡಳಿತವನ್ನು ಸುಧಾರಿಸಿ – ರಘುರಾಮ್‌ ರಾಜನ್

Any Mind by Any Mind
September 11, 2021
in ದೇಶ
0
ಖಾಸಗೀಕರಣದ ಏಕಸ್ವಾಮ್ಯ ಸೃಷ್ಟಿಸುವ ಬದಲು, ಆಡಳಿತವನ್ನು ಸುಧಾರಿಸಿ – ರಘುರಾಮ್‌ ರಾಜನ್
Share on WhatsAppShare on FacebookShare on Telegram

ನಮಗೆ ಬ್ಯಾಂಕ್​ಗಳೂ ಸೇರಿದಂತೆ ಸಾರ್ವಜನಿಕ ವಲಯದ ಉದ್ಯಮಗಳ ಅವಶ್ಯಕತೆ ಇದೆ. ಒಂದು ವೇಳೆ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದರೆ, ಖಾಸಗಿಯವರ ಏಕಸ್ವಾಮ್ಯ ಉಂಟಾಗಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ADVERTISEMENT

 ‘ನವ ಆರ್ಥಿಕತೆ – ಪ್ರಪಂಚದ ಮರುವಿನ್ಯಾಸ’ (new economy – redesign the world) ಎಂಬ ವಿಷಯದ ಕುರಿತು clubhouse.com ನಲ್ಲಿನಡೆದ ಒಂದು ಚರ್ಚಾ ಗುಂಪಿನಲ್ಲಿ ಭಾಗವಹಿಸಿದ್ದ ರಾಜನ್‌, ಇನ್ನು ಮುಂದೆ ಖಾಸಗಿ ವಲಯದ ಏಕಸ್ವಾಮ್ಯ ಆಗಬಹುದು, ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳನ್ನು ಸರ್ಕಾರ ಖಾಸಗಿ ವಲಯಕ್ಕೆ ಸಮರ್ಪಕ ನಿಯಂತ್ರಣವಿಲ್ಲದೆ ನೀಡಿದರೆ, ಅದು ಖಾಸಗಿ ವಲಯದ ಏಕಸ್ವಾಮ್ಯ ಆಗಬಹುದು, ಏಕಸ್ವಾಮ್ಯದ ಖಾಸಗಿ ವಲಯವು ಸಾರ್ವಜನಿಕರನ್ನು ಹಿಂಡಬಹುದು ಎಂದು ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಲಯದಿಂದ ದುರ್ಬಳಕೆ ಆಗಬಾರದು, ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕ್​ಗಳನ್ನು ಹಿಡಿದಿಡಲು ಒಲವು ತೋರುತ್ತಿದೆ. ಆದರೆ ಪ್ರತಿಭಾವಂತರನ್ನು ನೇಮಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಉತ್ತಮ ಮ್ಯಾನೇಜ್​ಮೆಂಟ್​ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬ್ಯಾಂಕ್​ಗಳೇ ಪ್ರಾಯೋಜಿಸಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ (NIBM) ನಂತಹ ಸಂಸ್ಥೆಗಳಿಂದಲೂ ಬ್ಯಾಂಕ್​ಗಳಿಗೆ ನೇಮಿಸಿಕೊಳ್ಳಲು ಸಾಧ್ಯವಿಲ್ಲ. “ನಾವು ಸಾರ್ವಜನಿಕ ಬ್ಯಾಂಕ್​ಗಳ ಕೈಕಾಲು ಕಟ್ಟಿ ಹಾಕುತ್ತಿದ್ದೇವೆ. ಸಾರ್ವಜನಿಕ ವಲಯವು ಸ್ವತ್ತುಗಳ ಬಳಕೆ ಏಕೆ ಮಾಡಿಕೊಳ್ಳಬಾರದು ಎಂದು ನನಗೆ ಅರ್ಥವಾಗುತ್ತಿಲ್ಲ,  ಖಾಸಗಿ ವಲಯವು ವ್ಯವಸ್ಥೆಯನ್ನು ದುರ್ಬಳಕೆ ಮಾಡದಂತೆ ನಿಬಂಧನೆಗಳು ಮತ್ತು ನಿಯಮಗಳನ್ನು ರೂಪಿಸಲಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು,” ಎಂದು ರಾಜನ್ ಹೇಳಿದ್ದಾರೆ.

“ಇದು ತುಂಬ ಆತಂಕಕಾರಿ ಪರಿಸ್ಥಿತಿ. ನಾವು ಖರ್ಚು ಮಾಡುವುದಿಲ್ಲ ಎಂದು ಹೇಳುವುದು ತಪ್ಪು. ನಿಮಗೆ ಎಲ್ಲಿ ಖರ್ಚು ಬೇಕೋ ಅಲ್ಲಿ ಖರ್ಚು ಮಾಡುವುದು ಮುಖ್ಯ. ಸಂಪನ್ಮೂಲಗಳನ್ನು ಹೆಚ್ಚಿಸುವ ಜತೆಗೆ ಅಗತ್ಯವಿರುವ ಕಡೆ ಖರ್ಚು ಮಾಡುವ ಕಡೆಗೆ ನಿರ್ದೇಶಿಸಬೇಕು. ನಾವು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಹೆಚ್ಚು ಖರ್ಚು ಮಾಡಬೇಕಾಗಿದೆ. ಇದು ಖಂಡಿತವಾಗಿಯೂ ಬಹಳ ಸಂಕೀರ್ಣವಾದ ಸಮಸ್ಯೆ. ಮುಂದಿನ ಕೆಲವು ವರ್ಷಗಳಲ್ಲಿ ನಮ್ಮ ಶ್ರಮ ಈ ಕ್ಷೇತ್ರಗಳನ್ನೇ ಕೇಂದ್ರೀಕರಿಸಿರಬೇಕು,” ಎಂದು ರಾಜನ್ ಹೇಳಿದ್ದಾರೆ.

“ಉತ್ತಮ ಆಡಳಿತ ಮತ್ತು ಉತ್ತಮ ನಿಯಮಗಳ ಮೂಲಕ ಖಾಸಗೀಕರಣದಂತೆಯೇ ಸಾರ್ವಜನಿಕ ವಲಯಗಳನ್ನು ನಿರ್ವಹಿಸಬಹುದು ಎಂದು ಹೇಳಿರುವ ಅವರು, ಆರೋಗ್ಯ ಮತ್ತು ಶಿಕ್ಷಣದ ಮೇಲೆ ಸಾಕಷ್ಟು ಗಮನಹರಿಸಿಲ್ಲ ಮತ್ತು ಈ ಕ್ಷೇಥ್ರಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸಿದ್ದಕ್ಕಾಗಿ ಸರ್ಕಾರವನ್ನು ಟೀಕಿಸಿದ್ದಾರೆ.

“ಹಣ ಎಲ್ಲಿ ಹೋಯಿತು? ಜಿಡಿಪಿಗೆ ನಮ್ಮ ಸಾಲವು ಶೇಕಡಾ 90ಕ್ಕಿಂತ ಹೆಚ್ಚು, ಮತ್ತು ಜನರು ಬಡತನಕ್ಕೆ ಜಾರಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ. ಜನರ ಸಾಮರ್ಥ್ಯವನ್ನು ಹೆಚ್ಚಿಸಲು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ನಾವು ಹಣವನ್ನು ಖರ್ಚು ಮಾಡುತ್ತೇವೆ ಎಂಬ ಭರವಸೆ ಇತ್ತು. ನಮ್ಮ ಆದ್ಯತೆಗಳನ್ನು ಸರಿಯಾಗಿ ಪಡೆದುಕೊಂಡಿದ್ದೇವೆಯೇ? ಪರಿಸ್ಥಿತಿ ಹದಗೆಡುತ್ತಿವೆ,” ಎಂದು ರಾಜನ್ ಹೇಳಿದ್ದಾರೆ.

ಚರ್ಚೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್, ನಮ್ಮ ಸರ್ಕಾರವು ಖಾಸಗಿ ಹಾಗೂ ಸಹಕಾರಿ ವಲಯದ ಪಾತ್ರವನ್ನು ಗುರುತಿಸುತ್ತದೆ. ಆದರೆ ಸಾರ್ವಜನಿಕ ಸರಕುಗಳು ಮತ್ತು ಸೇವೆಗಳು, ರಸ್ತೆಗಳು, ಮೂಲಸೌಕರ್ಯಗಳು ಸರ್ಕಾರದೊಂದಿಗೆ ಇರಬೇಕು ಎಂದು ಹೇಳಿದ್ದಾರೆ.

“ನಮಗೆ ಬಂಡವಾಳದ ಅಗತ್ಯವಿದೆ, ಹಾಗೂ (ಸಾರ್ವಜನಿಕ ಮತ್ತು ಖಾಸಗಿ ನಡುವೆ) ಜಂಟಿ ಉದ್ಯಮಗಳು ಬೇಕಾಗುತ್ತವೆ. ಏಕೆಂದರೆ ನಾವು ಎರಡೂ ಕಡೆ ಅತ್ಯುತ್ತಮವಾದುದನ್ನು ನೋಡುತ್ತೇವೆ. ಜಾಗತಿಕ ಮತ್ತು ರಾಷ್ಟ್ರೀಯ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಸಹ ಕೆಲವು ದಕ್ಷತೆಗಳನ್ನು ತರುತ್ತವೆ. ಆದರೆ ನಾವು ಕೋರ್ ಮತ್ತು ಕಾರ್ಯತಂತ್ರದ ಸ್ವತ್ತುಗಳ ಹಣ ಗಳಿಕೆ ಮತ್ತು ವಿಮಾನ ನಿಲ್ದಾಣಗಳು, ಬಂದರುಗಳು ಮುಂತಾದ ಭದ್ರತೆ-ಸಂಬಂಧಿತ ಸ್ವತ್ತುಗಳನ್ನು ನಗದೀಕರಣ ಮಾಡುವುದನ್ನು ವಿರೋಧಿಸುತ್ತೇವೆ. ನಮ್ಮ ಮುಖ್ಯಮಂತ್ರಿಗಳು (ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್) ಇಂತಹ ಹಣ ಗಳಿಕೆಯ ವಿರುದ್ಧ ಪ್ರಧಾನಿಗೆ ಪತ್ರ ಬರೆದಿದ್ದಾರೆ,” ಎಂದು ತ್ಯಾಗರಾಜನ್ ಹೇಳಿದ್ದಾರೆ.

ಎಂ.ಕೆ. ಸ್ಟಾಲಿನ್ ಮತ್ತು ಪಳನಿವೇಲ್‌ ತ್ಯಾಗರಾಜನ್

ಸ್ಯಾಮ್ ಪಿತ್ರೋಡಾ ಮಾತನಾಡಿ, ಖಾಸಗಿ ವ್ಯಕ್ತಿಗಳಿಗೆ ಸಂಪೂರ್ಣ ಮಾರಾಟ ಮಾಡುವ ಬದಲು, ಸರ್ಕಾರವು ಸಾರ್ವಜನಿಕರಿಗೆ ಷೇರು ಮಾರಾಟದ ಮೂಲಕ ತನ್ನ ಹೋಲ್ಡಿಂಗ್ ಅನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಈ ಮಾತಿಗೆ ರಘುರಾಮ್ ರಾಜನ್ ಕೂಡಾ ಒಪ್ಪಿಗೆ ವ್ಯಕ್ತಪಡಿಸಿದ್ದಾರೆ.

“ನಾವು ಆಡಳಿತವನ್ನು ಸುಧಾರಿಸುವತ್ತ ಏಕೆ ಗಮನಹರಿಸಬಾರದು? ಸಾರ್ವಜನಿಕ ಸಮಸ್ಯೆಗಳ ಮೂಲಕ ಖಾಸಗೀಕರಣ ಮಾಡಬಹುದು, ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬಹುದು. ಈ ರೀತಿ ಐಸಿಐಸಿಐ ಖಾಸಗಿ ಸಂಸ್ಥೆಯಾಗಿದೆ, ಆದರೆ ಇದು ಹೆಚ್ಚಿನ ಪಕ್ಷ ಸಾರ್ವಜನಿಕ ಬ್ಯಾಂಕ್​ನಂತೆಯೇ ಆಗಿದೆ,” ಎಂದು ರಾಜನ್ ಹೇಳಿದರು. ಬ್ಯಾಂಕಿಂಗ್‌ನಲ್ಲಿಯೂ ಖಾಸಗಿ ವಲಯಕ್ಕೆ ಸಾಕಷ್ಟು ಪ್ರಮಾಣದ ಸ್ಪರ್ಧೆ ಇದೆ ಎಂದು ಅವರು ಉಲ್ಲೇಖಿಸಿದ್ದಾರೆ.

Tags: BJPCongress PartyCovid 19Improve governanceprivatizationRaghuram Rajanಎಂ.ಕೆ. ಸ್ಟಾಲಿನ್ಖಾಸಗೀಕರಣನರೇಂದ್ರ ಮೋದಿಬಿಜೆಪಿರಘುರಾಮ್ ರಾಜನ್
Previous Post

ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ ಅತ್ಯಾಚಾರ: 33 ಗಂಟೆಗಳ ಸುದೀರ್ಘ ಚಿಕಿತ್ಸೆಯ ನಂತರ ಸಂತ್ರಸ್ತೆ ಸಾವು

Next Post

ಜಾತಿಗಣತಿ ಸಂಘರ್ಷ; ಯಾವುದೇ ನಿಲುವಿಗೆ ಬಾರದೆ ದೂರ ಉಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಲಿಂಗಾಯತ ನಾಯಕರು

Related Posts

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
0

"ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. (Deputy Chief...

Read moreDetails

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

November 18, 2025

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

November 18, 2025

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

November 18, 2025
Next Post
ಜಾತಿಗಣತಿ ಸಂಘರ್ಷ; ಯಾವುದೇ ನಿಲುವಿಗೆ ಬಾರದೆ ದೂರ ಉಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಲಿಂಗಾಯತ ನಾಯಕರು

ಜಾತಿಗಣತಿ ಸಂಘರ್ಷ; ಯಾವುದೇ ನಿಲುವಿಗೆ ಬಾರದೆ ದೂರ ಉಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಲಿಂಗಾಯತ ನಾಯಕರು

Please login to join discussion

Recent News

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
Top Story

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
November 18, 2025
Top Story

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

by ಪ್ರತಿಧ್ವನಿ
November 18, 2025
Top Story

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

by ಪ್ರತಿಧ್ವನಿ
November 18, 2025
Top Story

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
November 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

November 18, 2025

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada