~ ಡಾ. ಜೆ ಎಸ್ ಪಾಟೀಲ
ಹಿಂದಿಯೇತರರ ಮೇಲೆ ಹಿಂದಿ ಹೇರಿಕೆ ಆರಂಭವಾಗಿದ್ದು ೧೯೨೦ ರಷ್ಟು ಹಿಂದೆ ಮಹಾತ್ಮ ಗಾಂಧಿಯವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ ಸ್ಥಾಪಿಸಿದ ಕಾಲಘಟ್ಟದಿಂದ. ಸಂವಿಧಾನ ಅಂಗೀಕರಿಸಿದ ದಿನದಿಂದ ಇಂದಿನ ವರೆಗೆ ಕಲಿಕಾ ಮಾಧ್ಯಮ ಮತ್ತು ಭಾಷಾ ಸೂತ್ರಗಳ ಬಗೆಗಿನ ಗೊಂದಲಗಳಿಗೆ ಇಂದಿಗೂ ತೆರೆ ಬಿದ್ದಿಲ್ಲ. ತೆರೆ ಬೀಳುವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಸಂವಿಧಾನ ಅಂಗೀಕರಿಸುವ ಸಂದರ್ಭದಲ್ಲಿ ಹಿಂದಿಗೆ ರಾಷ್ಟ್ರಭಾಷೆಯ ಸ್ಥಾನಮಾನ ಕೊಡುವ ಪ್ರಸ್ಥಾಪ ಬಂದಾಗ ವ್ಯಕ್ತವಾದ ಹಿಂದಿಯೇತರ ಅದರಲ್ಲೂ ದಕ್ಷಿಣ ಭಾರತೀಯ ನಾಯಕರ ಪ್ರಬಲ ವಿರೋಧವನ್ನು ಪರಿಗಣಿಸಿ ಹಿಂದಿಯನ್ನು ರಾಷ್ಟ್ರಭಾಷೆಯ ದರ್ಜೆ ನೀಡಲಾಗಲಿಲ್ಲ. ಆದರೆ ಅದನ್ನು ಆಡಳಿತ ಭಾಷೆ ಮಾಡುವ ಪ್ರಸ್ಥಾವನೆ ಮುಂದಿಡಲಾಗಿ ಆಗಲೂ ಕೂಡ ಅದನ್ನು ದಕ್ಷಿಣದ ನಾಯಕರು ವಿರೋಧಿಸಿದರು. ಆಗ ಹಿಂದಿಯು ಹಿಂದಿ ಭಾಷಿಕ ರಾಜ್ಯಗಳಿಗೆ ಮಾತ್ರ ಆಡಳಿತ ಭಾಷೆಯಾಗಿˌ ಹಿಂದಿಯೇತರ ರಾಜ್ಯಗಳೊಂದಿಗೆ ಕೇಂದ್ರವು ಇಂಗ್ಲೀಷಿನಲ್ಲಿ ವ್ಯವಹರಿಸಬೇಕು ಎನ್ನುವ ಟಿಪ್ಪಣಿ ಸೇರಿಸಲಾಯಿತು.
ಹೀಗಾಗಿ ಅಂದು ಒಪ್ಪಿಕೊಂಡಿರುವ ಆಡಳಿತಾತ್ಮಕ ತ್ರೀಭಾಷಾ ಸೂತ್ರವನ್ನು ಮುಂದಿಡುತ್ತ ಹಿಂದಿ ಭಾಷೆಯನ್ನು ಹಿಂದಿಯೇತರರ ಮೇಲೆ ಅಕ್ರಮವಾಗಿ ಹೇರುವ ಹಿಂದಿ ಭಾಷಿಕ ಕಾಜಕಾರಣಿಗಳ ಕೆಲಸ ಇಂದಿಗೂ ಮುಂದುವರೆದಿದೆ. ಆದರೆ ಅಂದಿನ ಹಿಂದಿ ಭಾಷಿಕ ನಾಯಕರು ತಮ್ಮ ವಂಚಕತನವನ್ನು ನಮಗರಿವಿಲ್ಲದಂತೆ ಸಂವಿಧಾನದಲ್ಲಿ ಸೇರಿಸಿದರು. ಅದ್ಯಾವುದೆಂದರೆ ಸಂವಿಧಾನದ ೧೭ ನೇ ಭಾಗದ ೩೪೩ ಮತ್ತು ೩೪೪ ನೇ ವಿಧಿಗಳಯನ್ವಯ ಕೇಂದ್ರ ಸರಕಾರವು ಆಡಳಿತ ಭಾಷಾ ಆಯೋಗ ರಚಿಸಬಹುದು ಮತ್ತು ೨೦ ಜನ ಸಂಸದರು ಹಾಗು ೧೦ ಜನ ರಾಜ್ಯಸಭಾ ಸದಸ್ಯರನ್ನೊಳಗೊಂಡ ಜಂಟಿ ಸಂಸದೀಯ ಸಮಿತಿಯನ್ನು ರಚಿಸಿ ಕಾಲಕಾಲಕ್ಕೆ ಹಿಂದಿ ಭಾಷೆಯ ಆಡಳಿತಾತ್ಮಕ ಆಗುಹೋಗುಗಳನ್ನು ಪರಿಶೀಲಿಸಬೇಕು ಎನ್ನುವುದು. ಸಂವಿಧಾನದ ಅದೇ ಭಾಗದ ೩೫೧ ನೇ ವಿಧಿಯನ್ವಯ ಹಿಂದಿ ಭಾಷೆಯ ಬೆಳವಣಿಗೆಗೆ ಕೇಂದ್ರ ಸರಕಾರ ಸದಾ ಕೆಲಸ ಮಾಡಬೇಕು ಎನ್ನುವ ಮಾತನ್ನೂ ಸೇರಿಸಲಾಗುತ್ತದೆ. ಅವರು ಹಿಂದಿಯನ್ನು ಅಧಿಕೃತವಾಗಿ ರಾಷ್ಟ್ರಭಾಷೆ ಮಾಡಲಾಗದ್ದಕ್ಕೆ ಹೀಗೆ ಮಾಡಿದರು.
ಹಿಂದಿ ಕೂಡ ಭಾರತದ ಉಳಿದ ೨೨ ಭಾಷೆಗಳಂತೆ ಒಂದು ಭಾಷೆಯಾಗಿದ್ದಾಗ್ಯೂ ಕೂಡ ಭಾರತದ ಬೇರಾವುದೇ ಪ್ರಾಚೀನ ಭಾಷೆಗಳಿಗೆ ನೀಡದ ವಿಶೇಷ ಸವಲತ್ತನ್ನು ಸಂವಿಧಾನದಲ್ಲಿ ಸೇರಿಸುವ ಹಿಂದಿ ಭಾಷಿಕ ರಾಜಕಾರಣಿಗಳ ಕುಠಿಲ ತಂತ್ರ ನಾವು ಅರಿಯದೆ ಹೋದೆವು. ಆ ಸಂವಿಧಾನದತ್ತ ಅಂಶವನ್ನಿತ್ತುಕೊಂಡೇ ಕೇಂದ್ರವು ಹಿಂದಿ ಹೇರಿಕೆಯ ಹುನ್ನಾರವನ್ನು ಅಂದಿನಿಂದ ಮಾಡುತ್ತ ಬಂದಿದೆ. ಅಷ್ಟಕ್ಕೂ ಈ ಹಿಂದಿ ಭಾಷೆಯ ಇತಿಹಾಸವಾದರೂ ಎಂಥದ್ದು ಎಂದು ಒಮ್ಮೆ ನೋಡಿದರೆˌ ಅದು ಇತ್ತೀಚಿನ ೩೦೦-೫೦೦ ವರ್ಷಗಳಷ್ಟು ಹಳೆಯ ತನ್ನದೇ ಆತ ಲಿಪಿ ಹೊಂದಿರದ ಒಂದು ಅಪೂರ್ಣ ಭಾಷೆ. ಅಷ್ಟಕ್ಕೂ ದೇಶದಲ್ಲಿ ಹಿಂದಿ ಭಾಷೆ ಮಾತನಾಡುವವರ ಸಂಖ್ಯೆ ಕೇವಲ ೩೪ %. ಆ ಹಿಂದಿಯಲ್ಲೂ ಬಿಹಾರಿˌ ಭೋಜಪುರಿˌ ರಾಜಾಸ್ತಾನಿ, ಡೋಗ್ರಿ ಮುಂತಾದ ಭಾಷೆಗಳು ಸೇರಿಕೊಂಡಿವೆ. ಇಂದು ದೇಶದ ೨೯ ರಾಜ್ಯಗಳು ಮತ್ತು ೮ ಕೇಂದ್ರಾಡಳಿತ ಪ್ರದೇಶಗಳ ಪೈಕಿ ೨೧ ರಾಜ್ಯಗಳು ಮತ್ತು ಬಹುತೇಕ ಕೇಂದ್ರಾಡಳಿತ ಪ್ರದೇಶಗಳ ಜನ ಹಿಂದಿ ಭಾಷಿಕರಲ್ಲ ಎನ್ನುವ ಸತ್ಯ ಸಂಗತಿ ಬಹಳಷ್ಟು ಜನರಿಗೆ ಗೊತ್ತಿಲ್ಲ.
ಅದಾಗ್ಯೂ ಹಿಂದಿಯನ್ನು ಅಕ್ರಮವಾಗಿ ಹಿಂದಿಯೇತರ ಜನಗಳ ಮೇಲೆ ಹೇರುತ್ತಿರುವುದು ಒಂದು ಹುನ್ನಾರವೆ ಸರಿ. ಹಿಂದಿ ಭಾಷಿಕರಿಗೆ ಹಿಂದಿಯೇತರ ರಾಜ್ಯಗಳಿಗೆ ಸುಲಭವಾಗಿ ವಲಸೆ ಹೋಗಿ ಉದ್ಯೋಗˌ ವ್ಯವಹಾರಗಳನ್ನು ವಿಸ್ತರಿಸಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹಿಂದಿಯನ್ನು ಅಕ್ರಮವಾಗಿ ಹೇರಲಾಗುತ್ತಿದೆ. ಹಿಂದಿ ಭಾಷಿಕ ಪ್ರದೇಶಗಳ ಜನರು ಅತಿ ದಡ್ಡರು ಮತ್ತು ಅಲ್ಲಿನ ಜನಸಂಖ್ಯಾ ಸಾಂಧ್ರತೆ ಹೆಚ್ಚಿದ್ದು ˌ ಸಂಪನ್ಮೂಲಗಳು ಕಡಿಮೆ. ಆ ಭಾಗದಿಂದ ತೆರಿಗೆ ಸಂಗ್ರಹವೂ ಅತಿ ಕಡಿಮೆ. ಹಿಂದಿ ಭಾಷಿಕರು ಬದುಕುತ್ತಿರುವುದೇ ದಕ್ಷಿಣ ಭಾರತೀಯರ ತೆರಿಗೆ ಹಣದಲ್ಲಿ. ಈ ಪರಾವಲಂಬಿತನವನ್ನು ಗಟ್ಟಿಗೊಳಿಸುವ ಹುನ್ನಾರ ಒಂದುಕಡೆಗಾದರೆ ಈಗ ಅಧಿಕಾರದ ಚುಕ್ಕಾಣಿ ಹಿಡಿದಿರುವ ಫ್ಯಾಸಿಷ್ಟ ಮನಸ್ಥಿತಿಯ ಜನ ಒಂದೇ ದೇಶˌ ಒಂದೇ ಭಾಷೆˌ ಒಂದೇ ಸಂಸ್ಕ್ರತಿˌ ಒಂದೇ ಧರ್ಮ ಎನ್ನುವ ಅಕ್ರಮ ಘೋಷವಾಕ್ಯಗಳ ಮೂಲಕ ಭಾರತದ ಬಹು ಸಂಸ್ಕ್ರತಿˌ ಪ್ರಾದೇಶಿಕ ಅಸ್ಮಿತೆಗಳನ್ನು ಅಳಿಸಿ ಹಾಕಿ ಏಕ ಸಂಸ್ಕ್ರತಿ ಹೇರುವ ಮೂಲಕ ಫ್ಯಾಸಿಷ್ಟ ಹಿತಾಸಕ್ತಿಗೆ ಹವಣಿಸುತ್ತಿದೆ.
ಇಡೀ ದೇಶಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ಅಂದರೆ ಏನು ಎಂದು ಕಲಿಸಿಕೊಟ್ಟವರು ಕನ್ನಡಿಗರು. ಇಂದು ಕನ್ನಡಿಗರು ಕಟ್ಟಿದ ಬ್ಯಾಂಕುಗಳು ಹಿಂದಿ ಭಾಷಿಕರ ಬ್ಯಾಂಕುಗಳಲ್ಲಿ ಮಿಲಿನಹೊಂದಿ ತಮ್ಮ ಅಸ್ಥಿತ್ವವನ್ನು ಈಗಾಗಲೇ ಕಳೆದುಕೊಂಡಿವೆ. ಇಂದು ಬ್ಯಾಂಕುಗಳಲ್ಲಿ ˌ ಪೋಸ್ಟ್ ಆಫಿಸುಗಳಲ್ಲಿ ಮತ್ತು ರೈಲ್ವೆ ಇಲಾಖೆಗಳಲ್ಲಿ ಕನ್ನಡಿಗರನ್ನು ದೀಪ ಹಚ್ಚಿ ಹುಡುಕಬೇಕಿದೆ. ಹಿಂದಿ ಭಾಷೆ ಎಂಬ ರಕ್ಕಸ ತನ್ನ ಕದಂಬ ಬಾಹುಗಳನ್ನು ಚಾಚುತ್ತ ಭಾರತದ ಪ್ರಾದೇಶಿಕತೆಯನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ದಕ್ಷಿಣ ಭಾರತೀಯರು ಮತ್ತು ಇತರ ಹಿಂದಿಯೇತರ ಭಾಷಿಕರೆಲ್ಲ ಎಚ್ಚತ್ತುಕೊಳ್ಳದಿದ್ದರೆ ಮುಂದೊಂದು ದಿನ ಅಪಾಯ ತಪ್ಪಿದ್ದಲ್ಲ. ತಮಿಳುನಾಡುˌ ಆಂದ್ರˌ ತೆಲಂಗಾಣˌ ಕೇರಳದವರಲ್ಲಿ ಸಾಕಷ್ಟು ಈ ಕುರಿತು ಜಾಗ್ರತೆ ಮೊದಲಿನಿಂದಲೂ ಇದೆ. ಆದರೆ ಕನ್ನಡಿಗರಲ್ಲಿ ಆ ಬಗೆಯ ಭಾಷಾ ಅಸ್ಮಿತೆ ವಿರಳ. ಇಡೀ ದಕ್ಷಿಣ ಭಾರತದಲ್ಲಿರುವ ೧೨೯ ಸಂಸತ್ ಸ್ಥಾನಗಳ ಪೈಕಿ ಆರ್ಯಪ್ರಣೀತ ಸಂಸ್ಕ್ರತ ˌ ಹಿಂದಿˌ ಹಿಂದೂ ಎಂದು ಹಲಬುವ ಬಿಜೆಪಿ ಪಕ್ಷದ ಸಂಸತ್ ಸದಸ್ಯರ ಸಂಖ್ಯೆ ಕೇವಲ ೨೯ ಎನ್ನುವುದನ್ನು ನಾವು ಗಮನಿಸಬೇಕು.
ಈ ೨೯ ರಲ್ಲಿ ಕರ್ನಾಟಕದಿಂದಲೇ ೨೫ ಜನ ಸಂಸದರು ಹಿಂದಿˌ ಹಿಂದೂ ಎನ್ನುವ ಬಿಜೆಪಿ ಪಕ್ಷದವರು. ಕರ್ನಾಟಕ ಹೊರತುಪಡಿಸಿ ದಕ್ಷಿಣದ ಇತರ ರಾಜ್ಯಗಳು ಫ್ಯಾಸಿಷ್ಟ ಪಕ್ಷವನ್ನು ಬೆಳೆಯಲು ಬಿಟ್ಟಿಲ್ಲ. ಆದರೆ ಬಸವಣ್ಣ ˌ ಕುವೆಂಪುರ ಕನ್ನಡದ ನೆಲದಲ್ಲಿ ಫ್ಯಾಸಿಷ್ಟ ಪಕ್ಷ ಸೊಕ್ಕಿಸಿದ ಕನ್ನಡಿಗರು ಅಭಿಮಾನ ಶೂನ್ಯರು ಮತ್ತು ಅಸ್ಮಿತೆಹೀನರು. ಎಲ್ಲಿಯವರೆಗೆ ಹಿಂದಿˌ ಹಿಂದೂ ಎನ್ನುವ ಯಾವುದೇ ಪಕ್ಷವನ್ನು ಕನ್ನಡಿಗರು ಬೆಂಬಲಿಸುತ್ತಾರೊ ಅಲ್ಲಿಯವರೆಗೆ ಕನ್ನಡಿಗರ ಉದ್ಧಾರ ಅಸಾಧ್ಯ. ಶಿಕ್ಷಣ ನೀತಿಯನ್ನು ರೂಪಿಸಿದ ೧೯೫೨ ರ ಮೊದಲಿಯಾರ್ ಆಯೋಗದಿಂದ ಆರಂಭವಾದ ಈ ತ್ರಿಭಾಷಾ ಸೂತ್ರ ೧೯೬೮ ರ ಕೊಠಾರಿ ಆಯೋಗದಿಂದ ಹಿಡಿದು ೧೯೮೬ ಮತ್ತು ಇಂದಿನ ೨೦೨೦ರ ಹೊಸ ಶಿಕ್ಷಣ ನೀತಿಯ ವರೆಗೆ ಬದಲಾಗಲೇ ಇಲ್ಲ. ೧೯೯೦-೯೧ ರಲ್ಲಿ ರಚಿಸಲಾಗಿದ್ದ ರಾಮಮೂರ್ತಿ ಆಯೋಗದ ಶಿಫಾರಸ್ಸುಗಳು ಹೊರಬರಲಿಲ್ಲ. ನಾವು ಕೇವಲ ಹಿಂದಿ ಹೇರಿಕೆಯನ್ನು ವೀರೋಧಿಸುವ ಬದಲಾಗಿ ಸಂವಿಧಾನದ ೩೪೩, ೩೪೪ ಮತ್ತು ೩೫೧ನೇ ವಿಧಿಗಳನ್ನು ರದ್ದುಪಡಿಸಲು ದೊಡ್ಡ ಮಟ್ಟದ ಹೋರಾಟ ಆರಂಭಿಸಬೇಕಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೧ ನೇ ಕಲಂನ್ನು ರದ್ದು ಪಡಿಸಲು ಫ್ಯಾಸಿಷ್ಟರು ತೋರಿದ ಕಾಳಜಿ ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ವಿಧಿಗಳನ್ನು ರದ್ದುಪಡಿಸಲು ಏಕೆ ತೋರುತ್ತಿಲ್ಲ? ಹಿಂದಿಯೇತರ ರಾಜ್ಯಗಳ ಒಂದು ಪ್ರಬಲ ಒಕ್ಕೂಟವನ್ನು ರಚಿಸಿಕೊಂಡು ಕೇಂದ್ರದ ಮೇಲೆ ಹಿಂದಿಗೆ ವಿಶೇಷ ಸ್ಥಾನಮಾನ ನೀಡಿರುವ ಆ ಸಂವಿಧಾನದ ವಿಧಿಗಳನ್ನು ರದ್ದು ಪಡಿಸಲು ನಾವು ಸಾಂಘಿಕವಾದ ಹೋರಾಟ ಮಾಡಬೇಕಿದೆ. ಹೆಚ್ಚಿನ ಮಾನವ ಸಂಪನ್ಮೂಲ ಸೂಚ್ಯಂಕ ಹೊಂದಿರುವˌ ಕಡಿಮೆ ಜನ ಸಾಂಧ್ರತೆ ಹೊಂದಿರುವˌ ಹೆಚ್ಚು ಸಾಕ್ಷರರಾಗಿರುವ ಮತ್ತು ಗರಿಷ್ಠ ತೆರಿಗೆ ಪಾವತಿಸುವ ದಕ್ಷಿಣದ ರಾಜ್ಯಗಳ ಜನರು ಹಿಂದಿ ಹೇರಿಕೆಯನ್ನು ಗಟ್ಟಿ ಧನಿಯಲ್ಲಿ ವಿರೋಧಿಸಬೇಕಿದೆ. ಹಿಂದಿˌ ಹಿಂದೂ ಎಂದು ಹಲಬುವ ರಾಜಕೀಯ ಪಕ್ಷಗಳನ್ನು ಮೂಲೆಗುಂಪು ಮಾಡಬೇಕಿದೆ. ಇದೇ ಸೆಪ್ಟೆಂಬರ್ ೧೪ ರಂದು ಕೇಂದ್ರ ಸರಕಾರವು ಹಿಂದಿ ದಿವಸ್ ಆಚರಣೆ ಮಾಡಿತು. ಇತರ ಎಲ್ಲ ಭಾಷೆಗಳಂತೆ ಒಂದು ಸಾಮಾನ್ಯ ಭಾಷೆಯಾದ ಹಿಂದಿಗೆ ಯಾಕೀ ಆದ್ಯತೆ ಎಂದು ನಾವು ಪ್ರಶ್ನಿಸಬೇಕಿದೆ.
ಈ ಹಿಂದೆ ಕೇಂದ್ರದ ಗೃಹಮಂತ್ರಿ ಅಮಿತ್ ಶಾ ಅವರು ನೆಹರೂ ಅವರು ಸ್ಥಾಪಿಸಿದ ಏಮ್ಸ್ ಆಸ್ಪತ್ರೆಯ ಮಂಚದ ಮೇಲೆ ಮಲಗಿಕೊಂಡೇ ಹಿಂದಿ ಕಡ್ಡಾಯ ಎಂದು ಫರಮಾನು ಹೊರಡಿಸಿದ್ದು ಫ್ಯಾಸಿಷ್ಟರ ದಬ್ಬಾಳಿಕೆಯನ್ನು ಸಾಂಕೇತಿಸುತ್ತದೆ. ನಾವೆಲ್ಲ ದಕ್ಷಿಣ ಭಾರತೀಯರು ಈ ಅನುತ್ಪಾದಕ ಹಿಂದಿ ಜನರು ಹೇರಲು ಹವಣಿಸುತ್ತಿರುವ ಹಿಂದಿ ಭಾಷೆಯನ್ನು ಸಾಂಘಿಕವಾಗಿ ವಿರೋಧಿಸಬೇಕಿದೆ. ಒಂದು ದೇಶˌ ಒಂದೇ ಭಾಷೆ ಎಂದು ಹೇಳುವ ಫ್ಯಾಸಿಷ್ಟರಿಗೆ ಒಂದು ದೇಶˌ ಒಂದೇ ಜಾತಿˌ ಹಾಗು ಜಾತಿ ವ್ಯವಸ್ಥೆ ತೊಲಗಲಿ ಎಂದು ಗಟ್ಟಿ ಧನಿಯಲ್ಲಿ ಹೇಳಬೇಕಿದೆ. ಹಿಂದಿˌ ಹಿಂದೂ ಎಂದು ಹಾರಾಡುವ ದುಷ್ಟ ಶಕ್ತಿಗಳಿಗೆ ಭಾರತದ ಬಹುತ್ವವನ್ನು ಎತ್ತಿ ಹಿಡಿಯಲು ದ್ರಾವಿಡ ಅಸ್ಮಿತೆಯ ಸಾಂಘಿಕ ಬಲಪ್ರದರ್ಶನವನ್ನು ಮಾಡಿಸಬೇಕಿದೆ. ಎಲ್ಲಿಯವರೆಗೆ ದಕ್ಷಿಣದ ರಾಜ್ಯಗಳಲ್ಲಿ ಹಿಂದಿಪರ ಮಾತನಾಡುವ ದುಷ್ಟ ಪಕ್ಷಗಳಿಗೆ ನಾವು ಮನ್ನಣೆ ನೀಡುವುದನ್ನು ನಿಲ್ಲಿಸುವುದಿಲ್ಲವೊ ಅಲ್ಲಿಯವರೆಗೆ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಾದ ತಮಿಳುˌ ತೆಲಗುˌ ಮಲಯಾಳಿ ಮತ್ತು ಕನ್ನಡ ಭಾಷೆಗಳನ್ನು ನಾವು ಉಳಿಸಿಕೊಳ್ಳಲಾರೆವು.
~ ಡಾ. ಜೆ ಎಸ್ ಪಾಟೀಲ.