ಇಂದಿನಿಂದ ಎರಡು ದಿನಗಳ ಕಾಲ ಪ್ರಧಾನಿ ಮೋದಿ (Pm modi) ಜಪಾನ್ (Japan) ಪ್ರವಾಸ ಕೈಗೊಳ್ಳಲಿದ್ದಾರೆ. ಜಪಾನ್ ನ ಟೋಕಿಯೊಗೆ (Tokyo) ತಲುಪಿದ ನಂತರ ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಭಾರತ ಮತ್ತು ಜಪಾನ್ ತಮ್ಮ ಅಭಿವೃದ್ಧಿ ಸಹಕಾರವನ್ನು ಬಲಪಡಿಸುವುದನ್ನು ಮುಂದುವರಿಸುತ್ತಿರುವುದರಿಂದ, ಜಪಾನ್ ಭೇಟಿಯ ಸಮಯದಲ್ಲಿ ಪ್ರಧಾನಿ ಇಶಿಬಾ ಮತ್ತು ಇತರರೊಂದಿಗೆ ತೊಡಗಿಸಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಹೀಗಾಗಿ ಸದ್ಯ ಭಾರತ ಹಾಗೂ ಜಪಾನ್ ನಡುವಿನ ಅಸ್ತಿತ್ವದಲ್ಲಿರುವ ಪಾಲುದಾರಿಕೆಗಳನ್ನು ಗಾಢವಾಗಿಸಲು ಮತ್ತು ಸಹಯೋಗದ ಹೊಸ ಮಾರ್ಗಗಳನ್ನು ಅನ್ವೇಷಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನು ಪ್ರಧಾನಿ ಟೋಕಿಯೋಗೆ ಇಳಿಯುತ್ತಿದ್ದಂತೆ ಅವರಿಗೆ ಅದ್ಧೂರಿ ಸ್ವಾಗತ ಕೂರಲಾಗಿದ್ದು, ಭಾರತದ ಸಂಸ್ಕೃತಿ ಅನಾವರಣಗೊಂಡಿದೆ. ಜಪಾನ್ ನಲ್ಲಿ ನೆಲೆಸಿರುವ ಭಾರತೀಯರು ನಮೋ ವನ್ನು ಸಂತಸದಿಂದ ಬರಮಾಡಿಕೊಂಡಿದ್ದಾರೆ.