ಬಹುಕೋಟಿ ಐಎಮ್‌ಎ ಹಗರಣ ಸಂಬಂಧಿಸಿದಂತೆ ಕರ್ನಾಟಕ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ವಿಚಾರಣೆ ನಡೆಸಿದ್ದು, ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಭಾನುವಾರ ಬೆಳಿಗ್ಗೆ ಸಿಬಿಐ ರೋಷನ್ ಬೇಗ್ ಅವರ ವಿಚಾರಣೆ ಆರಂಭಿಸಿದ್ದು, ವಿಚಾರಣೆ ಬಳಿಕ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಂಗ ಬಂಧನಕ್ಕೊಳಗಾದ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿದೆ.
Also Read: IMA ಹಗರಣ: ಹಣ ಕಳೆದುಕೊಂಡವರು ಡಿ. 24 ರೊಳಗೆ ಅರ್ಜಿ ಸಲ್ಲಿಸಲು ಸೂಚನೆ
ಹಗರಣದ ಮುಖ್ಯ ಆರೋಪಿ ಮನ್ಸೂರ್ ಅಲಿಖಾನ್ ಬಂಧನಕ್ಕೂ ಮುನ್ನ ರೋಷನ್ ಬೇಗ್ ಅವರ ಹೆಸರೂ ಉಲ್ಲೇಖಿಸಿದ್ದು, ಮನ್ಸೂರ್ ನಿಂದ ಐಷರಾಮಿ ಕಾರುಗಳನ್ನು, ಸುಮಾರು 200 ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ರೋಷನ್ ಪಡೆದಿದ್ದರು ಎಂಬ ಆರೋಪ ಇದೆ.
ಎಸ್‌ಐಟಿ ಕೂಡಾ ರೋಷನ್ ಬೇಗ್ ಅವರನ್ನು ವಿಚಾರಣೆ ನಡೆಸಿತ್ತು. ಬಳಿಕ ಪ್ರಕರಣ ಸಿಬಿಐಗೆ ವರ್ಗಾವಣೆ ಆಗಿತ್ತು.
Also Read: IMA ಹಗರಣ: IPS ಸೇರಿದಂತೆ 5 ಅಧಿಕಾರಿಗಳ ವಿಚಾರಣೆ ನಡೆಸಲು ಸಿಬಿಐಗೆ ಅನುಮತಿ