ಸ್ವದೇಶೀ ಎಂಬ ಪರಿಕಲ್ಪನೆಯು ಬಹುತೇಕ ವಿಶ್ವದ ಎಲ್ಲ ದೇಶಗಳಿಗೂ ಅಪ್ಯಾಯಮಾನವಾದ ಸಿದ್ದಾಂತವೇ ಆಗಿದೆ. ಆದರೆ ಎಲ್ಲ ದೇಶಗಳೂ ಸ್ವದೇಶೀಯವಾಗೇ ಸ್ವಾವಲಂಬನೆ ಸಾಧಿಸಲು ಸಾಧ್ಯವೇ ಆಗಲಾರದು. ಏಕೆಂದರೆ ವಿಜ್ಞಾನ ತಂತ್ರಜ್ಞಾನವು ಬೆಳೆದಂತೆಲ್ಲ ಮನುಷ್ಯನ ಬದುಕು ಅನುಕೂಲ ಮತ್ತು ಸುಲಭವಾಗುತ್ತಲೇ ಬಂದಿದೆ. ಹೀಗಾಗಿ ಉನ್ನತ ತಂತ್ರಜ್ಞಾನಕ್ಕೆ ಅಥವಾ ಕೃಷಿ ಅಥವಾ ಕೈಗಾರಿಕಾ ವಸ್ತುಗಳಿಗೆ ಮತ್ತೊಂದು ದೇಶವನ್ನು ಅವಲಂಬಿಸಲೇಬೇಕಿದೆ.
ನಮ್ಮ ದೇಶದಲ್ಲಿ ಒಂದು ಕಾಲದಲ್ಲಿ ಮಹಾತ್ಮ ಗಾಂಧೀಜಿಯವರ ಕಲ್ಪನೆಯ ಕೂಸಾಗಿದ್ದ ಸ್ವದೇಶೀ ಸಿದ್ದಾಂತವನ್ನು ಸ್ವದೇಶೀ ಜಾಗರಣ ಮಂಚ್ (SJM) ಎಂಬ ಸಂಘಟನೆಯು 1990 ರ ದಶಕದಲ್ಲಿ ಪುನರುಜ್ಜೀವಗೊಳಿಸಲು ಪ್ರಯತ್ನಿಸಿತು. ಆದರೆ ಆ ಸಮಯದಲ್ಲಿ ಆ ಸಿದ್ದಾಂತವು ದೇಶದ ನೀತಿ ನಿರೂಪಕರಿಗೆ ಆ ಸಿದ್ದಾಂತವೇ ಅಪದ್ದವಾಗಿ ಕಂಡಿತ್ತು. 1991 ರಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣಕ್ಕೆ ದೇಶವು ತೆರೆದುಕೊಂಡಾಗ ವಿದೇಶೀ ಬಂಡವಾಳ ಹೂಡಿಕೆಯೇ ಹರಿದು ಬಂದಿದ್ದು ಈಗ ಇತಿಹಾಸ. ಅಂದು ಅಪಥ್ಯ ವಾಗಿದ್ದ ಸಿದ್ದಾಂತವು ಮೂರು ದಶಕಗಳ ಅಲ್ಪಾವಧಿಯಲ್ಲಿ, ದೇಶದ ನೀತಿ ನಿರೂಪಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವುದು ನಿಜಕ್ಕೂ ಅಚ್ಚರಿಯ ವಿಷಯ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಸಿದ್ದಾಂತವು ಪ್ರಧಾನ ಮಂತ್ರಿ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ ‘ಆತ್ಮನಿರ್ಭಾರ ಭಾರತ್ (ಸ್ವಾವಲಂಬಿ ಭಾರತ)’ ದ ಕರೆಯಲ್ಲಿ ಪ್ರತಿಫಲನವನ್ನು ಕಂಡುಕೊಂಡಿದೆ. ಈ ಸಿದ್ದಾಂತದ ಸ್ಥಾಪಕ ಸಂಸ್ಥೆ SJM ಮಹಾರಾಷ್ಟ್ರದ ನಾಗ್ಪುರದಲ್ಲಿ 1991 ರ ನವೆಂಬರ್ 22 ರಂದು ಸ್ಥಾಪಿತವಾಯಿತು. ಅಸಾಧಾರಣ ಸಾಂಸ್ಥಿಕ ಕೌಶಲ್ಯ ಕ್ಕೆ ಹೆಸರುವಾಸಿಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS ) ಪ್ರಚಾರಕ ದತ್ತೋಪಂತ್ ತೆಂಗಡಿ ಅವರು SJM ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಂಸ್ತೆ ಆರಂಭಗೊಂಡ ಮೊದಲ ಐದು ವರ್ಷಗಳಲ್ಲಿ, ಉದಾರೀಕರಣದ ಹೆಸರಿನಲ್ಲಿ ಜಾಗತೀಕರಣದ ವಿರುದ್ಧ ತನ್ನ ನಿಲುವನ್ನು ಪ್ರಚಾರಿಸಿತು. ಆದರೆ ಜಾಗತೀಕರಣದ ತೊಂದರೆಯು ಇನ್ನೂ ಜನರಿಗೆ ಮತ್ತು ಆಳುವವರಿಗೆ ಬಾಧಿಸದ ಕಾರಣದಿಂದಾಗಿ ಸರ್ಕಾರದ ನೀತಿ ನಿರೂಪಣೆಯ ನಿರ್ಧಾರ ತೆಗೆದುಕೊಳ್ಳುವವರ ಮೇಲೆ ಪ್ರಭಾವ ಬೀರಲು ನಮಗೆ ಸಾಧ್ಯವಾಗಲಿಲ್ಲ.
ಜಾಗತೀಕರಣದ ಪ್ರತಿಪಾದಕರು ಇದಿಂದಾಗಿ ದೇಶಕ್ಕೆ ಏನೂ ತೊಂದರೆಯು ಆಗುವುದಿಲ್ಲ ಎಂದು ವಾದಿಸುತಿದ್ದರು ಎಂದು SJM ನ ಸಹ-ಸಂಚಾಲಕ ಅಶ್ವನಿ ಮಹಾಜನ್ ಹೇಳುತ್ತಾರೆ. ಉದಾರೀಕರಣ ಮತ್ತು ಜಾಗತೀಕರಣವು ಆ ಸಮಯದಲ್ಲಿ ಅಂತಹ ಆಕರ್ಷಕ ಪರಿಕಲ್ಪನೆಗಳಾಗಿತ್ತು. ಏಕೆಂದರೆ ನೂತನ ಉನ್ನತ ತಂತ್ರಜ್ಞಾನವು ದೇಶದಲ್ಲಿ ಜನಪ್ರಿಯವೇ ಆಗಿತ್ತು. ದೇಶದಲ್ಲಿ SJM ನಂತಹ ಕೆಲವನ್ನು ಹೊರತುಪಡಿಸಿ ಎಲ್ಲರೂ ಜಾಗತೀಕರಣದ ಪರವೇ ಇದ್ದರು. ಸಮಯ ಕಳೆದಂತೆ, ಜಾಗತೀಕರಣದ ತೊಂದರೆಯು ಹೆಚ್ಚು ಹೆಚ್ಚು ಗೋಚರಿಸುತ್ತಿದ್ದಂತೆ, ಜನರು ಜಾಗತೀಕರಣದಿಂದ ಹಿಂದೆ ಸರಿಯಲು ಆರಂಭಿಸಿದರು.
1996 ರ ಹೊತ್ತಿಗೆ, SJM ದೇಶಧ ಆರ್ಥಿಕ ನೀತಿಯ ಬಗ್ಗೆ ಭಿನ್ನಾಭಿಪ್ರಾಯದ ಪ್ರಮುಖ ಧ್ವನಿಯಾಗಿತ್ತು. ಅದೇ ವರ್ಷ, ಇದು ತನ್ನ ಮಾಸಿಕ ಪತ್ರಿಕೆ ಸ್ವದೇಶಿ ಪತ್ರಿಕಾ ವನ್ನು ಇಂಗ್ಲಿಷ್ ಮತ್ತು ಹಿಂದಿ ಎಂಬ ಎರಡು ಭಾಷೆಗಳಲ್ಲಿ ಪ್ರಾರಂಭಿಸಿತು. ಸಂಪನ್ಮೂಲ-ಸಮೃದ್ಧ ಸಂಸ್ಥೆಯಲ್ಲದಿದ್ದರೂ, ನಾವು ಪತ್ರಿಕೆಯ ಒಂದು ಸಂಚಿಕೆಯನ್ನು ಮುದ್ರಣ ಮಾಡುವುದನ್ನು ನಿಲ್ಲಿಸಲಿಲ್ಲ , ಕೋವಿಡ್ -19 ರ ಸಮಯದಲ್ಲಿ, ನಾವು ಡಿಜಿಟಲ್ ಹೋಗಲು ನಿರ್ಧರಿಸಿದ್ದೇವೆ, ಎಂದು ಮಹಾಜನ್ ಹೇಳುತ್ತಾರೆ.
1998 ರಿಂದ 2004 ರವರೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡರ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸರ್ಕಾರವು ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಆಗ ಸರ್ಕಾರದ ಬಂಡವಾಳ ಹಿಂತೆಗೆತವನ್ನು ಬಲವಾಗಿಯೇ ವಿರೋಧಿಸಿದ್ದು SJM . ರಾಜಕೀಯ ತಜ್ಞರು ಆಗ ಇದನ್ನು ಸರ್ಕಾರದ ಮೇಲೆ ಪ್ರಭಾವ ಬೀರಲು RSS ಕಾರ್ಯ ತಂತ್ರವೆಂದು ಆರೋಪಿಸಿದರು. ವಾಜಪೇಯಿ ಯುಗದಲ್ಲಿ ಸಕ್ರಿಯರಾಗಿದ್ದ ಮತ್ತು SJM ನ ದೃಢ ವಾದ ಕಾರ್ಯತಂತ್ರದಲ್ಲಿ ಮುಂಚೂಣಿಯಲ್ಲಿದ್ದ ಹಲವಾರು SJM ಕಾರ್ಯಕರ್ತರ ಪ್ರಕಾರ, ಆಗ ಇದ್ದ ಸಮಸ್ಯೆಯೆಂದರೆ ವಾಜಪೇಯಿ ಸರ್ಕಾರದ ಅಧಿಕಾರಾವಧಿಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಹೊಂದಿರಲಿಲ್ಲವಾದ್ದರಿಂದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಿತ್ತು. ಅಲ್ಲದೆ, ವಾಜಪೇಯಿ ಸರ್ಕಾರದ ಪ್ರಮುಖ ಸಂಪುಟ ಸದಸ್ಯರಲ್ಲಿ – ಹಣಕಾಸು ಸಚಿವ ಯಶ್ವಂತ್ ಸಿನ್ಹಾ, ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಮತ್ತು ಬಂಡವಾಳ ಹಿಂತೆಗೆತ ಸಚಿವ ಅರುಣ್ ಶೌರಿ ಯಾರೊಬ್ಬರೂ ಕೂಡ RSS ಹಿನ್ನೆಲೆಯಿಂದ ಬಂದವರಾಗಿರಲಿಲ್ಲ. ಆದ್ದರಿಂದ, ದೇಶದ ಆರ್ಥಿಕ ಪ್ರಮುಖ ನೀತಿ, ನಿರ್ಧಾರ ತೆಗೆದುಕೊಳ್ಳುವುದು ‘ಸ್ವದೇಶಿ’ ತತ್ವಗಳಿಗೆ ಬದ್ಧವಾಗಿಲ್ಲ. ಈ ಕುರಿತು ಅಂದೇ
SJM ಅನೇಕ ವಿಷಯಗಳ ಬಗ್ಗೆ ಪ್ರತಿಭಟನೆ ನಡೆಸಿತ್ತು.

ನಂತರ 2004 ರಿಂದ 2014 ರವರೆಗೆ ಕಾಂಗ್ರೆಸ್ಸಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಸರ್ಕಾರವು ದೇಶದಲ್ಲಿ ಅಧಿಕಾರದಲ್ಲಿತ್ತು. ಅದರ ಮೊದಲ ಅವಧಿಯಲ್ಲಿ, ಎಡ ಪಕ್ಷಗಳ ಪ್ರಭಾವವು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಕುಂಠಿತಗೊಳಿಸಿತು. SJM ಯುಪಿಏ ಸರ್ಕಾರದ ಉಚಿತ ಪಡೆದುಕೊಳ್ಳುವ ಹಕ್ಕು ಎಂಬ ವಿಧಾನವನ್ನು ವಿರೋಧಿಸಿತು, ಉಚಿತವಾಗಿ ನೀಡುವುದು ಜನರ ಕಾರ್ಯಕ್ಷಮತೆಯನ್ನು ಕುಂದಿಸುತ್ತದೆ ಎಂದು SJM
ಪ್ರತಿಪಾದಿಸಿತು. ಇದರ ಬದಲಿಗೆ ಜನರಲ್ಲಿ ಸಾಮರ್ಥ್ಯ ವೃದ್ದಿಸುವ ಮತ್ತು ಸಾಮರ್ಥ್ಯವನ್ನು ಸೃಷ್ಟಿಸಲು ಇದು ಮುಂದಾಯಿತು. ಯುಪಿಎ ಸರ್ಕಾರದ ಎರಡನೇ ಅಧಿಕಾರಾವಧಿಯಲ್ಲಿ, SJM ಸರ್ಕಾರದ ವಿರುದ್ದ ತೀವ್ರ ಪ್ರತಿಭಟನೆ ದಾಖಲಿಸಿತು.
ನಂತರ ಬಂದ ಮೋದಿ ಸರ್ಕಾರವು ತನ್ನ ಆರ್ಥಿಕ ನೀತಿಯಲ್ಲಿ SJM ನ ನಿಲುವನ್ನು ಅನುಸರಿಸಲು ಆರಂಭಿಸಿತು. ಮೋದಿ ಸರ್ಕಾರವು ಜಿನೆಟಿಕಲಿ ಮೋಡಿಫೈಡ್ (ಜಿಎಂ) ಬೆಳೆಗಳ ವಾಣಿಜ್ಯ ಉತ್ಪಾದನೆಗೆ ಅವಕಾಶ ನೀಡುವುದಿಲ್ಲ, ವಿದೇಶಿ ಕರೆನ್ಸಿಗಳಲ್ಲಿ ಸಾರ್ವಜನಿಕ ಬಾಂಡ್ ವಿತರಣೆಯ ಮೂಲಕ ಹಣವನ್ನು ಸಂಗ್ರಹಿಸುವ ಆಲೋಚನೆಯನ್ನು ಬದಿಗೊತ್ತಿದೆ. ಅಲ್ಲದೆ ಯೋಜನಾ ಆಯೋಗವನ್ನು ರದ್ದುಪಡಿಸಿ ನೀತಿ ಆಯೋಗವನ್ನು ಆಸ್ತಿತ್ವಕ್ಕೆ ತಂದಿದೆ. ಇದಲ್ಲದೆ ದೇಶದ ಆಮದುಗಳನ್ನು ನಿರ್ಬಂಧಿಸಲು ಸುಂಕ ಮತ್ತು ಸುಂಕ ರಹಿತ ಅಡೆತಡೆಗಳನ್ನು ವಿಧಿಸುವುದು.
RSS ಹಿನ್ನೆಲೆಯಿಂದ ಬಂದಿರುವ ಮೋದಿ SJM ನ ಕಲ್ಪನೆಗೆ ರೂಪ ಕೊಟ್ಟರು. ಜುಲೈ 2014 ರಲ್ಲಿ, ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡ ಎರಡು ತಿಂಗಳ ನಂತರ, SJM ಜಿಎಂ ಬೆಳೆಗಳ ವಿಷಯವನ್ನು ಚರ್ಚೆಗೆ ತಂದಿತು ನಂತರ ಇಲ್ಲಿಯವರೆಗೆ, ಭಾರತದಲ್ಲಿ ಯಾವುದೇ ಜಿಎಂ ಬೆಳೆಯ ವಾಣಿಜ್ಯ ಉತ್ಪಾದನೆಗೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂಬುದನ್ನು ಗಮನಿಸಬಹುದು. ಅಕ್ಟೋಬರ್ 2014 ರಲ್ಲಿ, ಹೊಸ ಭೂಸ್ವಾಧೀನ ಕಾನೂನು ಜಾರಿಗೆ ತರಲಾಯಿತು. ಇದರಿಂದ ಆಹಾರ ಸುರಕ್ಷತೆಯ ಮೇಲೆ ಆಗುವ ಸಂಭವನೀಯ ಪರಿಣಾಮ, ಅದರ ಸಾಮಾಜಿಕ-ಆರ್ಥಿಕ ಪರಿಣಾಮ, ಮತ್ತು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾದ ರೈತರ ಒಪ್ಪಿಗೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ SJM ತನ್ನ ಕಳವಳವನ್ನು ವ್ಯಕ್ತಪಡಿಸಿತು. ಅದೇ ವಿಷಯದ ಬಗ್ಗೆ ಮೂರು ಬಾರಿ ಸುಗ್ರೀವಾಜ್ಞೆಯನ್ನು ತರಲಾಯಿತಾದರೂ ನಂತರ ಅದು ಸದ್ದಿಲ್ಲದೆ ಅಂಚಿಗೆ ತಳ್ಳಲ್ಪಟ್ಟಿತು.
ರಿಸರ್ವ್ ಬ್ಯಾಂಕಿನ ಗವರ್ನರ್ ಗಳಾದ ರಘುರಾಮ್ ರಾಜನ್ ಮತ್ತು ಅವರ ಉತ್ತರಾಧಿಕಾರಿ ಉರ್ಜಿತ್ ಪಟೇಲ್ – ಮತ್ತು ನೀತಿ ಅಯೋಗದ ಮೊದಲ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅವರು SJM ನ ‘ಸ್ವದೇಶಿ’ಪರಿಕಲ್ಪನೆಗೆ ವಿರುದ್ದವೇ ಆಗಿದ್ದರು. ಆದರೆ SJM ಪ್ರಭಾವದಿಂದಾಗಿ ನಂತರ ಸರ್ಕಾರದ ಯಾವುದೇ ಉನ್ನತ ಸ್ಥಾನವನ್ನು ಹೊಂದಲು ಆಗಲಿಲ್ಲ. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ (ಆರ್ಸಿಇಪಿ) ಸೇರ್ಪಡೆಗೊಳ್ಳದಿರುವ ಮೋದಿ ಸರ್ಕಾರದ ನಿರ್ಧಾರವನ್ನು SJM ಶ್ಲಾಘಿಸಿದೆ. ಈ ಒಪ್ಪಂದವು ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಉದ್ಯೋಗ ಸೃಷ್ಟಿಯ ವಿವಿಧ ಮಾರ್ಗಗಳನ್ನು ನಾಶಗೊಳಿಸುತ್ತದೆ ಎಂದು ಅದು ಅಭಿಪ್ರಾಯಿಸಿದೆ. ಈಗ ಲೋಕಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದೆ ಮತ್ತು ಆದ್ದರಿಂದ ಮೋದಿ ಸರ್ಕಾರವು SJM ನ ನಿರ್ದೇಶನಗಳನ್ನು ಪಾಲಿಸುತ್ತಿದೆ.






