SCO ಸಭೆಯಲ್ಲಿ (SCO meet) ಭಾರತದ (India) ಪಾರುಪತ್ಯ ಕಂಡು ಡೊನಾಲ್ಡ್ ಟ್ರಂಪ್ (Donald trump) ಅಕ್ಷರಶಃ ಕಂಗಾಲಾಗಿದ್ದಾರೆ. 50% ತೆರಿಗೆ ಮೂಲಕ ಭಾರತವನ್ನು ಕಟ್ಟಿ ಹಾಕಲು ಹವಣಿಸಿದ್ದ ಅಮೆರಿಕ ಇದೀಗ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಈ ಸಭೆಯಲ್ಲಿ ಭಾರತ ರಷ್ಯಾ ಮತ್ತು ಚೀನಾ ಒಟ್ಟಾಗಿ ಅಮೆರಿಕೆಗೆ ಸಂದೇಶ ರವಾನೆ ಮಾಡಿದೆ.

ಈ ಮಧ್ಯೆ ನಿನ್ನೆ (ಸೆ.1) ಚೀನಾದ SCO ಶೃಂಗಸಭೆಯ ನಂತರ ರಷ್ಯಾ ಅಧ್ಯಕ್ಷ ಪುಟಿನ್ ಪ್ರಧಾನಿ ನರೇಂದ್ರ ಮೋದಿಗಾಗಿ 10 ನಿಮೀಷ ಕಾರಿನಲ್ಲೆ ಕಾದಿದ್ದಾರೆ. ಆ ಬಳಿಕ ಭಾರತದ ಪ್ರಧಾನಿ ಮತ್ತು ರಷ್ಯಾ ಅಧ್ಯಕ್ಷ ಪುಟಿಲ್ ಒಂದೇ ಕಾರ್ ನಲ್ಲಿ ತೆರಳಿದ್ದಾಗಿ ವರದಿಯಾಗಿದೆ. ಪೂರ್ವನಿಗದಿಯಂತೆ ಮೋದಿ ಮತ್ತು ಪುಟಿನ್ ಪ್ರತ್ಯೇಕವಾಗಿ ಭಾರತ ಮತ್ತು ರಷ್ಯಾ ಬೈಲ್ಯಾಟ್ರಲ್ ಸಭೆ ನಡೆಯೋ ಸ್ಥಳಕ್ಕೆ ತೆರಳಬೇಕಿತ್ತು.ಆದರೆ ಪುಟಿನ್ ಮೋದಿಗಾಗಿ 10 ನಿಮೀಷ ಕಾದು ತಮ್ಮದೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಈ ಪ್ರಯಾಣದ ಸಂದರ್ಭದಲ್ಲಿ ಒಟ್ಟು 45 ನಿಮೀಷ ಉಭಯ ನಾಯಕರು ಕಾರಿನಲ್ಲೇ ಹಲವು ವಿಚಾರಗಳ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಇಬ್ಬರು ನಾಯಕರ ಈ ಪ್ರತ್ಯೆಕ ಭೇಟಿಯ ಬಗ್ಗೆ ಭಾರಿ ಚರ್ಚೆ ಗರಿಗೆದರಿದೆ.