ರಾಮನಗರದಲ್ಲಿ (Ramnagar ) ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ ರೈತರ (Farmers protest) ಸಮಸ್ಯೆಗಳನ್ನು ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಆಲಿಸಿದ್ದಾರೆ. ನಿನ್ನೆ(ಸೆ.5) ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಗಳನ್ನು ಆಲಿಸಿದ್ದು, ಈ ವೇಳೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ರೈತರ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ನಾನೇನು ಹೊರಗಡೆಯಿಂದ ಬಂದಿಲ್ಲ, ನಾನು ನಿಮ್ಮ ಜಿಲ್ಲೆಯವನು. ಇಂಡಸ್ಟ್ರಿಬಯಲ್ ಏರಿಯಾ ಆದಾಗಲೂ ಸಾವಿರಾರು ಎಕರೆ ಭೂಮಿ ಹೋಯ್ತು.ಈಗ 9600 ಎಕರೆಯಲ್ಲಿ ಸ್ವಾಧೀನ ಆಗ್ತಿದೆ.960 ಎಕರೆ ಭೂಮಿಯನ್ನು ರೈತರೇ ಕೊಟ್ಟಿದ್ದಾರೆ.ಅದು ರೈತರೋ, ಉದ್ಯಮಿಯೋ ಗೊತ್ತಿಲ್ಲ.ನಿಮಗೆ ಭೂಮಿ ಕೊಡಿ ಅಂತ ಯಾರು ಒತ್ತಡ ಹಾಕಿಲ್ಲ.ಈ ಹಿಂದೆ ಕಾನೂನು ಚೌಕಟ್ಟಿನಲ್ಲಿ ಏನು ಆಗಿತ್ತೋ ಅದು ಆಗ್ತಿದೆ ಎಂದಿದ್ದಾರೆ.

ಈ ಹಿಂದೆ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನದ ಆದಾಗಾ ನನ್ನದೂ 12 ಎಕರೆ ಜಮೀನು ಇತ್ತು.ನಾನು ವಿರೋಧ ಮಾಡಲಿಲ್ಲ ಭೂಮಿ ಕೊಟ್ಟೆ.ಈಗ ನಿಮ್ಮ ಶಾಸಕರು ನಿಮ್ಮ ಅನುಕೂಲಕ್ಕೆ ಮಾಡಿದ್ದಾರೆ ಅಷ್ಟೇ ಎಂದು ಡಿಕೆ ಶಿವಕುಮಾರ್ ರೈತರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಈ ವೇಳೆ ನಾವು ಭೂಮಿ ನೀಡಲ್ಲ, ಶಾಸಕರು ರೈತರ ಪರ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ರೈತರ ಮೇಲೆ ಡಿಸಿಎಂ ಡಿಕೆಶಿ ಗರಂ ಆಗಿದ್ದಾರೆ. ನೀವು ಧಿಕ್ಕಾರ ಕೂಗೋದು ಬಿಟ್ಟು ಏನು ಮಾಡೋಕೆ ಆಗಲ್ಲ.ರೈತರು ಹೋರಾಟ ಮಾಡಿ, ರಾಜಕೀಯ ಮಾಡಬೇಡಿ. ಹಿಂದೆ ಭೂಮಿ ಸ್ವಾಧೀನ ಮಾಡಿದ್ರಲ್ಲ ಅವರು ನಿಮ್ಮ ಪರ ಇದ್ರಾ.? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಶಾಸಕರು ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಅವರಿಗೆ ಅವಮಾನ ಮಾಡಬೇಡಿ.ರೈತರಿಗೆ ಅನ್ಯಾಯ ಆಗಬಾರದು ಅಂತ ಎಷ್ಟು ಸಭೆ ಮಾಡಿದ್ದೇವೆ ಗೊತ್ತಾ.?ಯಾವುದೇ ರೈತರಿಗೆ ಅನ್ಯಾಯ ಆಗಲು ಬಿಡಲ್ಲ.70% ಜನ ಈ ಯೋಜನೆಗೆ ಒಪ್ಪಿದ್ದಾರೆ, 30% ಜನ ಒಪ್ಪಿಗೆ ನೀಡಿಲ್ಲ.ಈ ಇದನ್ನ ಡಿನೋಟಿಫೈ ಮಾಡಿ ಬಿಎಸ್ ಯಡಿರೂರಪ್ಪ ತರ ನಾನು ಜೈಲಿಗೆ ಹೋಗಲ್ಲ.ನಿಮಗೆ ಏನು ಸಹಾಯ ಮಾಡಬೇಕೋ ಮಾಡ್ತೇನೆ.ಕಾನೂನು ಚೌಕಟ್ಟಿನಲ್ಲಿ ಏನು ಆಗಬೇಕೋ ಆಗುತ್ತೆ ಎಂದಿದ್ದಾರೆ.





