ಕಲಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವನಾತ್ಮಕ ಭಾಷಣ ಮಾಡಿದ್ದಾರೆ..

ನಾವು ಅಧಿಕಾರಕ್ಕೆ ಬಂದ್ರೆ ಮಂಗಳಸೂತ್ರ ಕಿತ್ತುಕೊಳ್ತೀವಿ ಅಂದಿದ್ದಾರೆ.. ನಾವು 55 ವರ್ಷ ಅಧಿಕಾರ ನಡೆಸಿದ್ವಿ, ಯಾರ ಮಂಗಳಸೂತ್ರ ಕಿತ್ತುಕೊಂಡಿದ್ದೀವಿ ತೋರಿಸ್ಲಿ ಅಂದ್ರು.. ಇನ್ನು ಕಳೆದ ಬಾರಿ ನನಗೆ ಸೋಲಾಯ್ತು. ಸೋಲಾದರೂ ಕೂಡ ನನಗೆ ದೊಡ್ಡ ಸ್ಥಾನ ಸಿಕ್ಕಿದೆ.

ಈ ಬಾರಿ ನಿಮ್ಮ ವೋಟು ಕಾಂಗ್ರೆಸ್‌ಗೆ ತಪ್ಪಬಾರದು, ನೀವು ಮತ ಹಾಕಲು ಬರದೇ ಇದ್ರೆ, ನಾನು ಸತ್ತ ಮೇಲೆ ಮಣ್ಣಿಗೆ ನೀವು ಬರಬೇಕು ಅಂದಿದ್ದಾರೆ.. ನಾನು ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ ಬನ್ನಿ.. ಹೂಳಿದ್ರೆ ಮಣ್ಣು ಹಾಕಲು ಬನ್ನಿ.. ಆಗ ಆತನ ಮಣ್ಣಿಗೆ ಎಷ್ಟು ಜನ ಬಂದ್ರು ಅಂತನಾದ್ರೂ ಜನ ಮಾತಾಡಬೇಕು ಅಂತ ಖರ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ.











