ಧರ್ಮಸ್ಥಳಕ್ಕೆ ನಾವು ರ್ಯಾಲಿ ಮುಖಾಂತರ ಹೋಗಿ ಬಂದಿದ್ವಿ, ಅಲ್ಲದೇ ಧರ್ಮಸ್ಥಳದ ಬಗ್ಗೆ ನಾನು ಮಾತಾಡಿದ್ದೆ. ಆದ್ರೆ ಜಗದೀಶ್ ಎಂಬ ವ್ಯಕ್ತಿ ಏನೇನೋ ಮಾತಾಡಿದ್ದಾರೆ. ಇದ್ರಿಂದ ನನ್ನ ಹಕ್ಕುಗಳಿಗೆ ಚ್ಯುತಿ ಆಗಿದೆ ಎಂದು ಸ್ಪೀಕರ್ ಅವರಿಗೆ ದೂರು ನೀಡಿದ್ದೆ, ನನ್ನ ದೂರು ಸ್ಪೀಕರ್ ಅವರು ಮಾನ್ಯ ಮಾಡಿದ್ದಾರೆ. ಮುಂದೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂದು ದಶಕ ಎಸ್.ಆರ್ ವಿಶ್ವನಾಥ್ ಮಾತನಾಡಿದ್ದಾರೆ.

ನಾನು ಧರ್ಮಸ್ಥಳಕ್ಕೆ ಹೋಗ್ತಿದ್ದೇನೆ ಎಂದು ಹೇಳಿದ್ದೆ.ಅದಕ್ಕೆ ಜಗದೀಶ್ ಮಾತಾಡಿದ್ದಾರೆ, ಅವರ ಬಗ್ಗೆ ಚರ್ಚೆ ಮಾಡಬಾರದು ಎಂದುಕೊಂಡಿದ್ದೆ, ಆದ್ರೆ ನನ್ನ ಮೇಲೆ ಎರಡು ಆರೋಪ ಮಾಡಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಕೋಟಿ ದುಡ್ಡನ್ನ ಲೂಟಿ ಮಾಡಿದ್ದೇನೆ ಎಂದಿದ್ದಾರೆ. ಹೀಗಾಗಿ ನಾನು ಅವರಿಗೆ ಚಾಲೆಂಜ್ ಮಾಡ್ತೇನೆ. ನನ್ನ ಮೇಲಿನ ಆರೋಪ ಒಂದು ವಾರದಲ್ಲಿ ಸಾಬೀತು ಮಾಡಬೇಕು ಎಂದು ಸವಾಲ್ ಹಾಕಿದ್ದಾರೆ.

ಒಂದು ವೇಳೆ ಆರೋಪ ಸಾಬೀತು ಮಾಡಿದ್ರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ, ಇಲ್ಲವಾದರೆ ಜಗದೀಶ್ ನನ್ನ ತೋಟದ ಮನೆಯ ಸಾಕು ನಾಯಿಯಾಗಿ ಇರಬೇಕು. ನೀನು ಹೇಳಿದ್ದು ಸುಳ್ಳಾದರೆ ನಿನ್ನನ್ನ ಯಾರು ಹೊಡೆಯುತ್ತಾರೆ ಗೊತ್ತಿಲ್ಲ. ನೀನು ಗಂಡಸೇ ಆಗಿದ್ರೆ ಈ ಸವಾಲ್ ಸ್ವೀಕಾರ ಮಾಡಬೇಕು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.