• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹಿಮಾಲಯದ ಒಡಲಲ್ಲಿ ಪರಿಸರ ನಾಶದ ಹಾದಿ

ಹಿಮಾಲಯ ಉಳಿಯಬೇಕಾದರೆ ಅಲ್ಲಿನ ನಿಸರ್ಗದತ್ತ ಸಂಪತ್ತು ಸಹ ಸುರಕ್ಷಿತವಾಗಿರಬೇಕು

ನಾ ದಿವಾಕರ by ನಾ ದಿವಾಕರ
February 24, 2026
in Top Story, ಕರ್ನಾಟಕ, ದೇಶ, ವಿಶೇಷ
0
ಹಿಮಾಲಯದ ಒಡಲಲ್ಲಿ ಪರಿಸರ ನಾಶದ ಹಾದಿ
Share on WhatsAppShare on FacebookShare on Telegram

ಭಾರತದಲ್ಲಿ ಪರಿಸರ ರಕ್ಷಣೆಗಾಗಿ ಹೋರಾಟಗಳು ಹಿಮಾಲಯ ಪರ್ವತ ಶ್ರೇಣಿಯಿಂದ ಕೇರಳದ ವಯನಾಡಿನವರೆಗೂ ವಿಸ್ತರಿಸುತ್ತವೆ. ಹಿಮಾಲಯದ ಪರ್ವತ ಶ್ರೇಣಿಯು ಭಾರತಕ್ಕೆ ಭೌಗೋಳಿಕವಾಗಿ ರಕ್ಷಣಾ ಗೋಡೆಯಂತಿರುವುದು ಕಣ್ಣಿಗೆ ಕಾಣುವ ಸತ್ಯ. ಹಾಗೆಯೇ ಇಲ್ಲಿ ಉಗಮಿಸುವ ಜಲಸಂಪನ್ಮೂಲಗಳು ಹಾಗೂ ಹಿಮಾಲಯದ ಒಡಲಲ್ಲಿರುವ ಹಸಿರು ಸಂಪತ್ತು ದೇಶದ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಿವೆ. ಆದರೂ ಚುನಾಯಿತ ಸರ್ಕಾರಗಳು ʼಹಿಮಾಲಯದ  ರಕ್ಷಣೆ ʼಯನ್ನು ಒಂದು ಆದ್ಯತೆಯಾಗಿ ಎಂದೂ ಸಹ ಪರಿಗಣಿಸಿಲ್ಲ. ಭಾವನಾತ್ಮಕ ದೇಶಭಕ್ತಿಯ ವ್ಯಾಖ್ಯಾನದಲ್ಲೂ ಸಹ ಹಿಮಾಲಯ ಕೇವಲ ಒಂದು ಪ್ರದೇಶವಾಗಿ ಕಂಡಬರುವುದೇ ಹೊರತು, ಪ್ರಾಕೃತಿಕ ಸಂಪತ್ತಿನ ಒಡಲಿನಂತೆ ಅಲ್ಲ.

ADVERTISEMENT
Rahul gandhi "ಮೋದಿ ಜೀ, ನೀವು ನಾಚಿಕೆಗೇಡಿನ ಬಗ್ಗೆ ಮಾತನಾಡುತ್ತಿದ್ದೀರಾ? #pratidhvani #rahulgandhi

ಆಧುನಿಕ ಜನ ಜೀವನ ಮತ್ತು ನವ ಉದಾರವಾದಿ ಆರ್ಥಿಕತೆಯ ಒತ್ತಡಗಳಲ್ಲಿ ಸಿಲುಕಿ ತನ್ನ ಅಂತಃಸತ್ವವನ್ನೇ ಕಳೆದುಕೊಳ್ಳುತ್ತಿರುವ ಹಿಮಾಲಯ ಪರ್ವತ ಶ್ರೇಣಿಯ ಸಂಕಟಗಳನ್ನು ಪರಿಸರವಾದಿಗಳು, ಪರಿಸರ ವಿಜ್ಞಾನಿಗಳು ಹಾಗೂ ಅರ್ಥಶಾಸ್ತ್ರಜ್ಞರೂ ಸಹ ಆಗಿಂದಾಗ್ಗೆ ವಿಶ್ಲೇಷಣೆಗೊಳಪಡಿಸುತ್ತಲೇ ಬಂದಿದ್ದಾರೆ. ಕನಿಷ್ಠ ಕಳೆದ ಐದು ದಶಕಗಳಿಂದೀಚೆಗೆ ಈ ವಿದ್ವಾಂಸರು ಸರ್ಕಾರಗಳನ್ನು, ಈ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ  ಹೆದ್ದಾರಿ, ಸೇತುವೆ, ಸುರಂಗ ಮತ್ತು ಕಾಂಕ್ರೀಟ್‌ ಉಪನಗರಗಳ ಬಗ್ಗೆ ಎಚ್ಚರಿಸುತ್ತಲೇ ಬಂದಿದ್ದಾರೆ. ನವಭಾರತದ ಆಳ್ವಿಕೆಯಲ್ಲಿ ಈ ಬೌದ್ಧಿಕ ಜ್ಞಾನಮೂಲಗಳು ಮತ್ತು ಸಂಪತ್ತು ನಿರ್ಲಕ್ಷಿಸಲ್ಪಟ್ಟಿರುವುದು ವಾಸ್ತವ. ಈ ಪ್ರತಿರೋಧಗಳನ್ನು ʼ ಅಭಿವೃದ್ಧಿ ವಿರೋಧಿ ʼ ಎಂಬ ಲೇಬಲ್‌ ಅಂಟಿಸಿ ದೂರ ಮಾಡಲಾಗುತ್ತದೆ.

ಈ ಹಿನ್ನೆಲೆಯಲ್ಲಿ 23 ಜನವರಿ 2026 ದ ಹಿಂದೂ ಪತ್ರಿಕೆಯ A dangerous march towards Himalayan Ecocide  – ಮಲ್ಲಿಕಾ ಭಾನೋಟ್‌ ಮತ್ತು ಸಿ.ಪಿ ರಾಜೆಂದ್ರನ್‌ – ಲೇಖನದ ಸಂಗ್ರಹಾನುವಾದ ಇಲ್ಲಿದೆ )

K Venkatesh : ನಮ್ಮ ಇಲಾಖೆಯಿಂದ ಯಾರನ್ನೂ ಟೂರ್​ಗೆ ಕಳುಹಿಸ್ತಿಲ್ಲ | Congress  #pratidhvani

2025ರ ಒಂದು ವರ್ಷದಲ್ಲೇ 331 ದಿನಗಳ ಕಾಲ ಬಹುತೇಕ ನಿರಂತರವಾಗಿ ಹವಾಮಾನವನ್ನು ಪ್ರಭಾವಿಸುವ ಘಟನೆಗಳು ನಡೆದಿದ್ದವು. ಈ ಒಂದು ವರ್ಷದಲ್ಲೇ ಹವಾಮಾನ ವೈಪರಿತ್ಯ ಮತ್ತು ವ್ಯತ್ಯಯಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದವು. ಹಿಮಾಚಲ ಪ್ರದೇಶ ಮತ್ತು ಉತ್ತರಖಂಡ್‌ ಅತಿ ಹೆಚ್ಚಿನ ಸಾವುಗಳನ್ನು ದಾಖಲಿಸಿದ್ದವು. ಧರಾಲಿ, ಹಾರ್ಸಿಲ್‌, ಉತ್ತರಕಾಶಿ, ಚಮೋಲಿ, ಕುಲ್ಲು, ಮಂಡಿ ಮತ್ತು ಕಿಶ್ತ್‌ವಾರ್‌ ಮುಂತಾದ ಪಟ್ಟಣಗಳು ಹಠಾತ್‌ ಮೇಘಸ್ಪೋಟ, ಭೂಕುಸಿತ, ಹಿಮಪಾತದ ಪರಿಣಾಮವಾಗಿ ಸಂಭವಿಸಿದ ಪ್ರವಾಹಗಳಿಗೆ ಸಿಲುಕಿ ನಲುಗಿಹೋಗಿದ್ದವು. ಸಾವಿರಾರು ಜನರ ಜೀವನ ಮತ್ತು ಜೀವನೋಪಾಯಕ್ಕೆ ಸಂಚಕಾರ ಒದಗಿಬಂದಿತ್ತು.

ಬಿರು ಬಿಸಿಲು, ವಿನಾಶಕಾರಿ ಪ್ರವಾಹಗಳು ಮತ್ತು ಭೂ ಕುಸಿತಗಳು ಈ ಪ್ರದೇಶದಲ್ಲಿ ಸಾಮಾನ್ಯ ಪ್ರಸಂಗಗಳಾಗಿಬಿಟ್ಟಿವೆ. ಆದಾಗ್ಯೂ ಇಲ್ಲಿನ ಸರ್ಕಾರಗಳು, ಇತ್ತೀಚಿನ ಹಿಮಪಾತದಿಂದ ಸಂಭವಿಸಿದ ಜಲಪ್ರಳಯದ ಹೊರತಾಗಿಯೂ,  ಧರಾಲಿ ಮತ್ತು ಹಾರ್ಸಿಲ್‌ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಯೋಜನೆಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಾಗಿ 7,000 ದೇವದಾರು ವೃಕ್ಷಗಳನ್ನು, ಸಾವಿರಾರು ಸ್ಥಳೀಯ ಸಸ್ಯ ತಳಿಗಳನ್ನೂ ನಾಶಪಡಿಸಲಾಗಿದೆ. ಕಳೆದ ನವಂಬರ್‌ 12ರಂದು ಉತ್ತರಖಂಡದ ಅರಣ್ಯ ಇಲಾಖೆಯು ಈ ಮರಗಳ ಹನನಕ್ಕೆ ಅನುಮತಿ ನೀಡಿದ್ದು 43 ಹೆಕ್ಟೇರ್‌ ವ್ಯಾಪ್ತಿಯ ಅರಣ್ಯ ಪ್ರದೇಶವನ್ನು ಚಾರ್‌ಧಾಮ್‌ ರಸ್ತೆ ಅಗಲೀಕರಣಕ್ಕೆ ಅವಕಾಶ ಕಲ್ಪಿಸಿದೆ.  ಇದರಲ್ಲಿ ಹತ್ತು ಹೆಕ್ಟೇರ್‌ ಭೂಮಿಯನ್ನು ತ್ಯಾಜ್ಯ ಸುರಿಯುವ ಸಲುವಾಗಿ ಮೀಸಲಿರಿಸಲಾಗಿದೆ.

Yatnal on Vijayendra: ವಿಜಯೇಂದ್ರ ಶಿಕಾರಿಪುರದಲ್ಲಿ ನಿಲ್ಲಲ್ಲ.. ಗೆಲ್ಲಲ್ಲ ಬರೆದಿಟ್ಟುಕೊಳ್ಳಿ ಯತ್ನಾಳ್ ಕಿಡಿ

 ಮೂಲ ಸೌಕರ್ಯಗಳ ವಿನಾಶಕಾರಿ ಹಾದಿ

ಈ ಪ್ರದೇಶವು ಮುಖ್ಯ ಕೇಂದ್ರ ಒತ್ತಡ ಪ್ರದೇಶಕ್ಕೆ (Main Central thrust) ಉತ್ತರ ದಿಕ್ಕಿನಲ್ಲಿದ್ದು̧  ಯಾವುದೇ ಮೂಲಸೌಕರ್ಯ ನಿರ್ಮಾಣ ಕಾರ್ಯಗಳಿಗೆ ನಿಷಿದ್ಧವಾದ ನಿರ್ಣಾಯಕ ವಲಯ ಎಂದು ವರ್ಗೀಕರಿಸಲ್ಪಟ್ಟಿದೆ. ಈ ಪ್ರದೇಶದಲ್ಲಿ ನೇತಾಡುವ ಹಿಮನದಿಗಳೂ (Hanging Glaciers) ಇವೆ.  ಈ ಪ್ರದೇಶಕ್ಕೆ ವಿಶ್ವದಲ್ಲೇ ಅತಿ ವೇಗವಾಗಿ ಕ್ಷೀಣಿಸುತ್ತಿರುವ ಗಂಗೋತ್ರಿ ಮೂಲ ಸೆಲೆಯಾಗಿದೆ.  ಗಂಗೋತ್ರಿಯು ಹಲವು ಅಸ್ಥಿರವಾದ, ಮೊರೈನ್‌ ತುಂಬಿದ ಹಿಮನದಿಗಳನ್ನು ಹೊಂದಿದೆ. (ಮೊರೈನ್‌ ಎಂದರೆ ಹಿಮನದಿಗಳು ಕರಗುವಾಗ  ಅಥವಾ ಚಲಿಸುವಾಗ ಜೊತೆಗೆ ಹೊತ್ತುತಂದು ಕೆಳಭಾಗದಲ್ಲಿ ಅಥವಾ ಬದಿಗಳಲ್ಲಿ ಶೇಖರಿಸುವ ಬಂಡೆಗಳು, ಜಲ್ಲಿಕಲ್ಲು, ಮರಳಿನ ರಾಶಿ ಇತ್ಯಾದಿ ) ಇದನ್ನು ಕನ್ನಡದಲ್ಲಿ ಹಿಮಸಂಚಿತ ಮಣ್ಣು ಕಲ್ಲುಗಳ ರಾಶಿ ಎಂದೂ ಹೇಳಲಾಗುತ್ತದೆ. ಇಂತಹ ಒಂದು ಹಿಮನದಿಯಲ್ಲಿ ಸಂಭವಿಸಿದ ಹಿಮಪಾತವೇ ಧರಾಲಿ ದುರಂತಕ್ಕೆ ಕಾರಣವಾಗಿತ್ತು.ಈ ದೃಷ್ಟಿಯಿಂದ ಇಲ್ಲಿರುವ ವೃಕ್ಷಗಳ ಮೌಲ್ಯ ಮತ್ತು ಮಹತ್ವದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ.

ಹಿಮಾಲಯದ ಸೂಕ್ಷ್ಮ ಪ್ರದೇಶದಲ್ಲಿ ದೇವದಾರು ಕಾಡುಗಳು ನಿರ್ಣಾಯಕವಾದ ಪರಿಸರ ಆಸ್ತಿಗಳಾಗಿವೆ. ಈ ವೃಕ್ಷಗಳ ಆಳವಾದ ಬೇರುಗಳು ಇಳಿಜಾರುಗಳನ್ನು ಸುಸ್ಥಿರವಾಗಿರಿಸುತ್ತವೆ , ಭೂಕುಸಿತಗಳನ್ನು ತಡೆಗಟ್ಟುತ್ತವೆ ಹಾಗೂ ಹಿಮಪಾತ ಮತ್ತು ಹಿಮನದಿಯ ಶಿಲಾಖಂಡರಾಶಿಗಳಿಗೆ (Glacial Debris) ಅಡ್ಡಗೋಡೆಗಳಾಗುತ್ತವೆ. ಹಾಗಾಗಿ ಕೆಳಭಾಗದಲ್ಲಿರುವ ಜನ ಸಮುದಾಯಗಳಿಗೆ ರಕ್ಷಾಕವಚಗಳಾಗಿ ಇರುತ್ತವೆ. ಈ ಕಾಡುಗಳು ಗಂಗಾನದಿಯ ನೀರಿನ ಗುಣಮಟ್ಟಕ್ಕೂ ಕಾರಣವಾಗುತ್ತವೆ. ಈ ಕಾಡುಗಳು ಭಾಗೀರಥಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯೊಳಗೇ ಇರುವುದರಿಂದ ಪ್ರಾಮುಖ್ಯತೆ ವಹಿಸುತ್ತವೆ. ಈ ವಲಯವನ್ನು 2012ರಲ್ಲಿ ನದಿಯ ಕಟ್ಟಕಡೆಯ ಪ್ರಾಚೀನ ತೊರೆಗಳನ್ನು ರಕ್ಷಿಸುವ ಸಲುವಾಗಿ 4,000 ಚದರ ಕಿಲೋಮೀಟರ್‌ ವ್ಯಾಪ್ತಿಯ ಬಫರ್‌ ಆಗಿ ರೂಪಿಸಲಾಗಿತ್ತು.

Kothur Manjunath: ಅಧಿಕಾರಿಗಳಿಗೆ ಶಾಸಕ ಕೊತ್ತನೂರು ಮಂಜುನಾಥ್ ಸಖತ್ ಕ್ಲಾಸ್ #pratidhvani

ದೇವದಾರು ವೃಕ್ಷಗಳಲ್ಲಿರುವ ಸೂಕ್ಷ್ಮಜೀವಿ ನಿರೋಧಕ (Antimicrobial ) ಲಕ್ಷಣಗಳು ನದಿ ಪರಿಸರವನ್ನು ಕಾಪಾಡುತ್ತವೆ. ಮರದ ತೊಗಟೆ ಮತ್ತು ರಾಳದಲ್ಲಿ ಕಂಡುಬರುವ ಟೆರ್ಪೆನಾಯ್ಡ್ಸ್ ಸಾರಭೂತ ತೈಲಗಳು ಫೀನಾಲಿಕ್ ಸಂಯುಕ್ತಗಳು ಈ ಮರಗಳಲ್ಲಿರುತ್ತವೆ.  ತ್ಯಾಜ್ಯ ಎಲೆಗಳು ಮತ್ತು ಸಾವಯವ ವಸ್ತುಗಳು ಬೆಟ್ಟದ ತೊರೆಗಳನ್ನು ಪ್ರವೇಶಿಸುತ್ತಿರುವಂತೆಯೇ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ನಿರ್ಬಂಧಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಉಪಕಾರಿಯಾಗುವ ಸೂಕ್ಷ್ಮಜೀವಿಗಳನ್ನು ಪ್ರೋತ್ಸಾಹಿಸುವುದರಿಂದ ಜೈವಿಕವಾಗಿ ಸಕ್ರಿಯವಾದ ನದಿ ವ್ಯವಸ್ಥೆಯನ್ನು ಪೋಷಿಸಲಾಗುತ್ತದೆ. ಮೇಲ್ಭಾಗದ ಪ್ರದೇಶಗಳಲ್ಲಿ ಕೈಗಾರಿಕಾ ಮಾಲಿನ್ಯ ಹೆಚ್ಚು ಇರುವೆಡೆ ಇದು ನೀರಿನ ಗುಣಮಟ್ಟವನ್ನು ಕಾಪಾಡಲು ಸಹಾಯಕವಾಗುತ್ತದೆ. ಈ ವೃಕ್ಷಗಳು ಶೀತಲ ಸೂಕ್ಷ್ಮಜೀವಿಗಳನ್ನೂ ಹೊಂದಿರುತ್ತವೆ, ಹಾಗಾಗಿ  ಕರಗಿದ ಹಿಮದಿಂದ ತುಂಬಿದ ಹೊಳೆಗಳನ್ನು ನಿಯಂತ್ರಿಸಿ ,ಜಲಚರಗಳಿಗೆ ಅತ್ಯವಶ್ಯವಾದ ಆಮ್ಲಜನಕ ಮಟ್ಟದ ಕುಸಿತವನ್ನು ತಡೆಗಟ್ಟುತ್ತವೆ.

ಈ ಅರಣ್ಯ ನಾಶದ ಪರಿಣಾಮ ಉಷ್ಣ ಹವೆ ಹೆಚ್ಚಾಗುವುದಲ್ಲದೆ ಆಮ್ಲಜನಕ ಪೂರೈಕೆ ಕಡಿಮೆಯಾಗುತ್ತದೆ. ಇದರಿಂದ  ನದಿಯ ಪರಿಸರ ಲಕ್ಷಣದಲ್ಲಿ ಸರಿಪಡಿಸಲಾಗದಂತಹ ಬದಲಾವಣೆಗಳು ಸಂಭವಿಸುತ್ತವೆ. ಇತ್ತೀಚಿನ ಅರಣ್ಯ ಇಲಾಖೆಯ ಶಿಫಾರಸುಗಳ ಅನ್ವಯ ಈ ಪ್ರಾಚೀನ ವೃಕ್ಷಗಳನ್ನು ಸ್ಥಳಾಂತರಗೊಳಿಸುವ ಯೋಜನೆಗಳಿವೆ. ಇದು ಪರಿಸರ ವಿಜ್ಞಾನದ ದೃಷ್ಟಿಯಿಂದ ದೋಷಪೂರಿತ ಆಲೋಚನೆಯಾಗಿದೆ. ಶತಮಾನಗಳಷ್ಟು  ಹಳೆಯದಾದ ದೇವದಾರು ವೃಕ್ಷಗಳನ್ನು ಬುಡಮೇಲು ಮಾಡುವುದು ಮರಗಳ ಹನನದಷ್ಟೇ ತಪ್ಪಾಗುತ್ತದೆ. ಈ ಮರಗಳ ನಿರ್ದಿಷ್ಟ ಪ್ರಾದೇಶಿಕ ಪರಿಸರ ಕ್ರಿಯೆಗಳು ಮತ್ತು ಸಂಕೀರ್ಣ ಲಕ್ಷಣಗಳು ಮತ್ತೊಂದು ಪ್ರದೇಶದಲ್ಲಿ ಅದೇ ಪ್ರಮಾಣದಲ್ಲಿ ಸಕ್ರಿಯವಾಗುವುದಿಲ್ಲ. ಹಾಗಾಗಿ ಈ ವೃಕ್ಷಗಳನ್ನು ಕಾಪಾಡುವುದು ಅನುಕೂಲಕ್ಕಾಗಿ ಅಲ್ಲ ಬದಲಾಗಿ ಪರಿಸರದ ಅಗತ್ಯತೆಯಾಗಿದೆ.

DK Shivkumar : ಡಿಕೆಶಿ ನೋಡಿದ ನೋಟಕ್ಕೆ ಬೆದರಿ ಪಕ್ಕದಿಂದ ದೂರ ಸರಿದ ಪ್ರದೀಪ್‌ ಈಶ್ವರ್ #pratidhvani

 ಮಿಥ್ಯೆಗಳನ್ನು ಆಧರಿಸಿದ ಯೋಜನೆ

ಚಾರ್‌ಧಾಮ್‌ ರಸ್ತೆ ಅಗಲೀಕರಣ ಯೋಜನೆಯನ್ನು ಹಲವಾರು ಮಿಥ್ಯೆಗಳನ್ನು ಆಧರಿಸಿ ರೂಪಿಸಲಾಗಿದೆ.  ಹಿಮಾಲಯದಲ್ಲಿ ರಸ್ತೆಯನ್ನು ಹೇಗೆ ನಿರ್ಮಿಸಕೂಡದು ಎನ್ನುವುದಕ್ಕೆ ಈ ಯೋಜನೆ ನಿದರ್ಶನವಾಗಿ ಕಾಣುತ್ತದೆ. ಸಮಗ್ರ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಕ್ರಿಯೆಯನ್ನು ಅಲಕ್ಷಿಸಿರುವುದು, ಯೋಜನೆಯನ್ನು ವಿಭಜನೆಗೊಳಪಡಿಸಿರುವುದು, ತನ್ನದೇ ನಿಯಮಗಳಿಗೆ ವಿರುದ್ಧವಾಗಿ ರಸ್ತೆಯ ಅಗಲದ ಮಾನದಂಡಗಳನ್ನು ಉಲ್ಲಂಘಿಸಿ ವಿಸ್ತೀರ್ಣವನ್ನು ನಿರ್ಧರಿಸಿರುವುದು ಪ್ರಮುಖ ದೋಷಗಳಾಗಿ ಕಾಣುತ್ತವೆ. ಅಷ್ಟೇ ಅಲ್ಲದೆ, ದುರ್ಬಲ ಇಳಿಜಾರುಗಳಲ್ಲಿ ಲಂಬಗತಿಯಲ್ಲಿ ಬೆಟ್ಟಗಳನ್ನು ಕಡಿಯುವ ಕ್ರಮವು ಇಡೀ ಪ್ರದೇಶವನ್ನು ಅಸ್ಥಿರಗೊಳಿಸುತ್ತದೆ. ಪ್ರಮುಖ ಜಲಮೂಲಗಳಲ್ಲಿ ತ್ಯಾಜ್ಯವನ್ನು ಸುರಿದಿರುವುದು ಇನ್ನೂ ಅಪಾಯಕಾರಿಯಾಗಿದೆ.

ಈ ಯೋಜನೆಯ ಪರಿಣಾಮಗಳನ್ನು ಗಮನಿಸಿದಾಗ, ಅಗಲೀಕರಣಕ್ಕೊಳಗಾದ 700 ಕಿಲೋಮೀಟರ್‌ ವ್ಯಾಪ್ತಿಯ ರಸ್ತೆಯುದ್ದಕ್ಕೂ 800ಕ್ಕೂ ಹೆಚ್ಚು ಸಕ್ರಿಯ ಭೂಕುಸಿತ ವಲಯಗಳು ಸೃಷ್ಟಿಯಾಗಿವೆ.  ವಿಳಂಬಿತ ಕಾಲದವರೆಗೆ ಪ್ರಮುಖ ಗಡಿ ರಸ್ತೆಗಳನ್ನು ಮುಚ್ಚಲಾಗಿದೆ.  ಸರ್ಕಾರದ All weather Road  ಅಂದರೆ ಎಲ್ಲ ರೀತಿಯ ಹವಾಮಾನಕ್ಕೂ ಹೊಂದುವ ರಸ್ತೆಗಳು ಸ್ಥಳೀಯರ ಅಭಿಪ್ರಾಯದಲ್ಲಿ All Paidal ಅಂದರೆ ಎಲ್ಲ ಕಾಲದಲ್ಲೂ ಪಾದಚಾರಿ ರಸ್ತೆಗಳಾಗಿವೆ. ಈ ಹಾನಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ರಸ್ತೆಯ ಅಗಲವನ್ನು ನಿರ್ಬಂಧಿಸುವುದಕ್ಕೆ ಆದ್ಯತೆ ನೀಡಿ, ಅತಿಯಾದ ಅಗಲೀಕರಣದ ಬದಲು ಸ್ಥಿರತೆಗೆ ಪ್ರಾಮುಖ್ಯತೆ ನೀಡಬೇಕಿತ್ತು. ಆದಾಗ್ಯೂ ಇತ್ತೀಚೆಗೆ ಕೇಂದ್ರ ಸರ್ಕಾರ ಸೂಚಿಸಿರುವ ಪರಿಹಾರಗಳು ಅಪಾರ ಪ್ರಮಾಣದ ಅಸ್ಥಿರತೆ ಸಂಭವಿಸಿ ಎಂಟು ವರ್ಷಗಳ ನಂತರ ತಡವಾಗಿ ಬಂದಿದ್ದು,  ಅಸಮರ್ಪಕವೂ ಆಗಿದೆ.

ಚಿಕ್ಕಬಳ್ಳಾಪುರದಲ್ಲಿ ಮನ್​ರೇಗಾ ಬಚಾವ್ ಆಂದೋಲನ ಸಮಾವೇಶ ವೇದಿಕೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟ Siddaramaiah

ಇಲ್ಲಿ ಮೂಲಭೂತ ದೋಷ ಇರುವುದು ಬಲವರ್ಧನೆಯ ಕೊರತೆಯಲ್ಲಿ ಅಲ್ಲ, ಬದಲಾಗಿ ಕಡಿದಾದ ಬೆಟ್ಟಗಳನ್ನು ಅತಿಯಾಗಿ ಕಡಿತ ಮಾಡಿರುವುದರಲ್ಲಿ. ಹಿಮಾಲಯದ ಭೂ ಪ್ರದೇಶದಲ್ಲಿ  ಸ್ವಾಭಾವಿಕ ʼ ವಿಶ್ರಾಂತಿ ಕೋನ ʼಗಳೆಂದೇ ಪರಿಗಣಿಸಲ್ಪಡುವ ಇಳಿಜಾರುಗಳಲ್ಲಿ ಬೆಟ್ಟಗಳನ್ನು ಕಡಿಯಲು ಅನುಮತಿ ನೀಡಿರುವುದು ಅಜ್ಞಾನದ ಪರಮಾವಧಿ ಎನ್ನಬಹುದು. ಆರಂಭದಿಂದಲೇ ಆಗಿರುವ ಈ ಆಂತರಿಕ ದೋಷಗಳನ್ನು ಸರಿಪಡಿಸುವುದು ಅಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ಪ್ರಸ್ತುತ ಅಭಿವೃದ್ಧಿ ಕ್ರಮಗಳು ́ ಹಿಮಾಲಯ ಪರಿಸರ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ರಾಷ್ಟ್ರೀಯ ಅಭಿಯಾನ ʼ (NMSHE)ಕ್ಕೆ ತದ್ವಿರುದ್ಧವಾಗಿವೆ.

2014ರಲ್ಲಿ ಅನುಮೋದಿಸಲಾದ ಈ ಯೋಜನೆಯಡಿ ದುರ್ಬಲವಾದ ಹಿಮಾಲಯದ ಪರಿಸರವನ್ನು ರಕ್ಷಿಸುವುದು ಪ್ರಧಾನ ಧ್ಯೇಯವಾಗಿತ್ತು. ಹಿಮನದಿಗಳ ಮೇಲ್ವಿಚಾರಣೆ,  ಜೀವ ವೈವಿಧ್ಯತೆಯ ನಿರ್ವಹಣೆ, ಪ್ರಾಕೃತಿಕ ಅಪಾಯಗಳನ್ನು ಹೋಗಲಾಡಿಸುವುದು, ಹಿಮಾಲಯದಲ್ಲಿ ವಾಸಿಸುವ ಸಮುದಾಯಗಳಿಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸುವುದು ಈ ಅಭಿಯಾನದ ಮೂಲ ಉದ್ದೇಶವಾಗಿತ್ತು.  ವೈಜ್ಞಾನಿಕ ಸಾಮರ್ಥ್ಯವನ್ನು ಸೃಷ್ಟಿಸಿ ಯೋಜನೆಗಳನ್ನು, ನೀತಿಗಳನ್ನು ನಿರೂಪಿಸುವವರಿಗೆ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಮಾರ್ಗದರ್ಶನ ನೀಡುವುದು ಈ ಅಭಿಯಾನದ ಉದ್ದೇಶವಾಗಿತ್ತು.

 ಅತಾರ್ಕಿಕ-ಅವೈಜ್ಞಾನಿಕ ಯೋಜನೆಗಳು

ಈ ದೃಷ್ಟಿಯಿಂದ, ಈಗ ಕೈಗೊಂಡಿರುವ ಕ್ರಮಗಳು ಏಕೆ ತನ್ನದೇ ಆದ ಪ್ರಮುಖ ಪರಿಸರ ನೀತಿಗೆ ತದ್ವಿರುದ್ಧವಾಗಿದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಿದೆ. ದೇವಭೂಮಿ ಎಂದು ಕರೆಯಲಾಗುವ ಈ ಪ್ರದೇಶವನ್ನು ದೇವದಾರು ಅರಣ್ಯಗಳ ವಿರುದ್ಧ ನಿರ್ವಹಿಸುವುದು ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ಇದು ಸಾಂಪ್ರದಾಯಿಕ ಸಂಸ್ಕೃತಿಗಳ, ಪರಿಸರ ವಿಜ್ಞಾನದ ಹಾಗೂ ವೈಜ್ಞಾನಿಕ ತರ್ಕದ ಉಲ್ಲಂಘನೆಯಾಗಿ ಕಾಣುತ್ತದೆ. ವಿಶ್ವದಲ್ಲೇ ಅತ್ಯಂತ  ಹವಮಾನ ಸೂಕ್ಷ್ಮ ಭೂ ಪ್ರದೇಶ ಎಂದೇ ಗುರುತಿಸಲ್ಪಟ್ಟಿರುವ ಹಿಮಾಲಯದ ದುರ್ಬಲತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಹಿಮರಹಿತ ಚಳಿಗಾಲ, ವ್ಯಾಪಿಸುತ್ತಿರುವ ಕಾಡಿನ ಬೆಂಕಿ ಇವೆಲ್ಲವೂ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನ ವರದಿಯೊಂದನ್ನು ಪುಷ್ಟೀಕರಿಸುತ್ತವೆ.  ಈ ಅಧ್ಯಯನದ ಪ್ರಕಾರ ಅತಿ ಎತ್ತರದ ಪ್ರದೇಶಗಳು 1950ರ ನಂತರದಲ್ಲಿ ಜಾಗತಿಕ ಸರಾಸರಿಯನ್ನೂ ಮೀರಿ ಶೇಕಡಾ 50ರಷ್ಟು ವೇಗವಾಗಿ ಉಷ್ಣಾಂಶವನ್ನು ದಾಖಲಿಸುತ್ತಿವೆ.  ಈ ಬೆಳವಣಿಗೆಗಲೇ ಧಾರಾಲಿಯಂತಹ ವಿಕೋಪಗಳಿಗೆ ಕಾರಣವಾಗಿರುತ್ತದೆ.  ಗಡಿ ರಕ್ಷಣೆ, ಸಂಪರ್ಕ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳೇ ಪ್ರಧಾನ ಧ್ಯೇಯವಾಗಿದ್ದರೆ ವಿಪತ್ತು ಪೀಡಿತ ಮೂಲ ಸೌಕರ್ಯಗಳ ಬದಲು ವಿಪತ್ತು ನಿರ್ಬಂಧಗಳು ನಮ್ಮ ಆದ್ಯತೆಯಾಗಬೇಕಿದೆ.  ಇದು ಸಿದ್ಧಾಂತದ ಪ್ರಶ್ನೆಯಲ್ಲ, ವೈಜ್ಞಾನಿಕ, ಪರಿಸರ ವಿಜ್ಞಾನದ ಆರ್ಥಿಕ ಅಗತ್ಯತೆಯಾಗಿ ನೋಡಬೇಕಿದೆ.

G.D.Harish Gowda | JDS 12 ಶಾಸಕರು ಕಾಂಗ್ರೆಸ್ ಗೆ, ಡಿಕೆಶಿಗೆ ಜೆಡಿಎಸ್ ಶಾಸಕ G.D.ಹರೀಶ್ ಗೌಡ ಖಡಕ್ ಟಾಂಗ್

ವಿಪತ್ತಿನ ಮೂಲಭೂತ ಕಾರಣ ಇರುವುದು ಅಸುರಕ್ಷಿತ ವಿಧಾನದ ರಸ್ತೆಯ ಬಳಕೆ. ಅಗಲದ ಹೆದ್ದಾರಿಗಳಿಗಾಗಿ ಅಸ್ಥಿರ ಇಳಿಜಾರುಗಳನ್ನು ಕಡಿಯುವುದು. ಸಮರ್ಪಕ ಭೂವಿಜ್ಞಾನ ಸಮೀಕ್ಷೆಗಳಿಲ್ಲದೆಯೇ ಬೃಹತ್‌ ಸುರಂಗಗಳನ್ನು ಕೊರೆಯುವುದು. ಬೃಹತ್‌ ಗಾತ್ರದ ಹೈಡ್ರೋ ಎಲೆಕ್ಟ್ರಿಕ್‌ ಯೋಜನೆಗಳನ್ನು ಸ್ಥಾಪಿಸುವುದು. ರಾಷ್ಟ್ರೀಯ ಹಸಿರು ನ್ಯಾಯಮಂಡಲಿ ಮತ್ತಿತರ ಸಂಸ್ಥೆಗಳು ಈ ಚಟುವಟಿಕೆಗಳ ಬಗ್ಗೆ ಎಚ್ಚರಿಸುತ್ತಲೇ ಇವೆ.  ಇದರ ಹೊರತಾಗಿಯೂ ಗುರುತಿಸಬಹುದಾದ ಲೋಪ ಎಂದರೆ, ದೇವದಾರು ಅರಣ್ಯಗಳ ತೆರವಿನ ಪರಿಣಾಮವಾಗಿ ದುರ್ಬಲ ಮಣ್ಣು-ಭೂಮಿಯನ್ನು ಬಂಧಿಸುವ ನೈಸರ್ಗಿಕ ಲಂಗರುಗಳು (Natural Anchors) ಇಲ್ಲವಾಗುತ್ತಿವೆ. ಇದು ಭೂಕುಸಿತ ಮತ್ತು ಪ್ರವಾಹದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

  ಹವಾಮಾನ ವೈಪರೀತ್ಯದ ಸವಾಲುಗಳು

ಈ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಹವಾಮಾನ ಬದಲಾವಣೆಯೂ ಅಪಾಯಗಳನ್ನು ಹೆಚ್ಚಿಸಲು ನೆರವಾಗುತ್ತವೆ. ವಿಪರೀತವಾದ ಮಳೆ ಸುರಿಯುವುದು, ಹವಾಮಾನದ ವರ್ತನೆಯಲ್ಲಿ ಏರುಪೇರುಗಳು, ಹಿಮನದಿಗಳು ಕರಗುವುದು ಈ ಅಪಾಯಗಳನ್ನು ಇಮ್ಮಡಿಗೊಳಿಸುತ್ತವೆ.  ಈ ನೈಸರ್ಗಿಕ ಒತ್ತಡಗಳು ಇನ್ನೂ ಹೆಚ್ಚು ಅಪಾಯಕಾರಿಯಾಗಲು ಕಾರಣ ಮಾನವ ಸಮಾಜದ ವರ್ತನೆಗಳು, ಅನಿಯಂತ್ರಿತ ಪ್ರವಾಸೋದ್ಯಮ, ದುರ್ಬಲ ರಸ್ತೆಗಳಲ್ಲಿ ಅನಿರ್ಬಂಧಿತ ವಾಹನ ಸಂಚಾರ , ಕ್ರಿಯಾಶೀಲ ಘನತ್ಯಾಜ್ಯ ನಿರ್ವಹಣೆಯ ಕೊರತೆ ಇತ್ಯಾದಿ. ಈ ಲಕ್ಷಣಗಳನ್ನು ಗಮನಿಸಿದಾಗ ಆಳವಾದ ಆಡಳಿತ ವೈಫಲ್ಯ ಕಣ್ಣಿಗೆ ರಾಚುತ್ತದೆ.  ಅಲ್ಪಕಾಲಿಕ ಆರ್ಥಿಕ ಲಾಭಗಳಿಕೆಗಾಗಿ ದೀರ್ಘಕಾಲಿಕ ವಿಪತ್ತು ನಿರ್ವಾಹಕ ಕ್ರಮಗಳನ್ನು ನಿರ್ಲಕ್ಷಿಸಲಾಗುತ್ತಿದೆ. ವೈಜ್ಞಾನಿಕವಾದ ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ಅನುಸರಿಸದೆ ಇರುವುದು ಸಹ ಪ್ರಮುಖ ಕಾರಣವಾಗಿದೆ.

BY Vijayendra On CM Siddaramaiah | ತಮ್ಮ ಕುರ್ಚಿ ಅಲ್ಲಾಡುವಾಗ ಸಮಾಜ ನೆನಪಾಗುತ್ತೆ #pratidhvani

ನೆಲದ ವಾಸ್ತವಗಳನ್ನು (Ground Realities) ಗಮನಿಸಿದಾಗ ʼ ಹಿಮಾಲಯ ಇಲ್ಲದಿದ್ದರೆ ಭಾರತ ಇರುವುದಿಲ್ಲ ʼ ಎಂಬ ನಾಣ್ಣುಡಿಯನ್ನು ದೃಢೀಕರಿಸಿದಂತೆ ಕಾಣುತ್ತದೆ.  ಈ ಪರ್ವತ ಶ್ರೇಣಿಯು ಕೇವಲ ಭೌಗೋಳಿಕ ಪ್ರದೇಶವಲ್ಲ. ಉಪಖಂಡದ ಅಸ್ತಿತ್ವವನ್ನು ನಿರ್ಧರಿಸುವ ಅಡಿಪಾಯವಾಗಿದೆ.  ಹಿಮಾಲಯ ಪರ್ವತ ಶ್ರೇಣಿಗಳು ಭಾರತವನ್ನು ಫಲವತ್ತಾದ, ಜನವಸತಿ ಯೋಗ್ಯವಾದ ಭೂಮಿಯನ್ನಾಗಿ ರೂಪಿಸಿವೆ. ಹಾಗೆಯೇ ಒಂದು ಸಮನ್ವಯ ಸಂಸ್ಕೃತಿಯ ನೆಲೆವೀಡಾಗಿ ನಿರ್ಮಿಸಿದ್ದು, ಈ ಪರ್ವತಗಳಷ್ಟೇ ದೀರ್ಘಕಾಲದ ಉದಾತ್ತ ಸಾಂಸ್ಕೃತಿಕ ಜಗತ್ತನ್ನು ನಿರ್ಮಿಸಿದೆ.  ಈ ವಲಯದಲ್ಲಿ ಪದೇಪದೇ ವಿಪತ್ತುಗಳು ಸಂಭವಿಸುತ್ತಿರುವುದನ್ನು ಗಮನಿಸುವಾಗ ನಮಗೆ ʼ ಹಿಮಾಲಯ ಇಲ್ಲದಿದ್ದರೆ ಭಾರತ ಇರುವುದಿಲ್ಲ ʼ ಎಂಬ ನಾಣ್ಣುಡಿ ನೆನಪಾಗುತ್ತಲೇ ಇರಬೇಕು.

 

Tags: HimalayaIndiaNatureSave Himalayaweather
Previous Post

Gilli Nata:ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿನ ಅನ್‌ಫಾಲೋ ಮಾಡಿದ ರಘು? ಕಾರಣ ಏನು?

Next Post

ಶುದ್ಧ ಕುಡಿಯುವ ನೀರಿಲ್ಲದೆ 6 ತಿಂಗಳು: ವಾಲೇತೋಪು ಜನರ ಕಷ್ಟ ಕೇಳೋರ‍್ಯಾರು?

Related Posts

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?
ಕರ್ನಾಟಕ

₹ 30 ಲಕ್ಷ ಪರಿಹಾರದ ಚೆಕ್ ವಿತರಿಸಿದ ಸಚಿವ ಪ್ರಿಯಾಂಕ್ ಖರ್ಗೆ: ಕಾರಣವೇನು?

by ಪ್ರತಿಧ್ವನಿ
March 4, 2026
0

ಕೋವಿಡ್-19‌ ಸೋಂಕು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಯೋಜಿಸಿದ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ತಗುಲಿ ನಿಧನರಾಗಿದ್ದ ಸರಡಗಿ (...

Read moreDetails
ನ್ಯಾಷನಲ್ ಹೆರಾಲ್ಡ್ ಪ್ರಕರಣ:ನಮಗೆ ಸಮನ್ಸ್ ನೀಡಿರುವುದು ಸರಿಯಲ್ಲ: ಡಿ.ಕೆ. ಶಿವಕುಮಾರ್

ಆಂಧ್ರಪ್ರದೇಶದವರು ಈ ಮಟ್ಟಕ್ಕೆ ಹೋಗುತ್ತಾರೆ ಎಂದು ನಾನು ಎಣಿಸಿರಲಿಲ್ಲ‌: ಡಿ.ಕೆ. ಶಿವಕುಮಾರ್

March 4, 2026
ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

ಖಮೇನಿ ಹತ್ಯೆಗೆ ಮಹಿಳೆಯರ ಸಂಭ್ರಮ: ಅಲ್ಲಿ ಮಹಿಳಾ ಕಾನೂನು ಎಷ್ಟು ಕಠಿಣವಾಗಿದೆ ಗೊತ್ತೆ ?

March 3, 2026
ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

ಪಾದಯಾತ್ರೆಯ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದನೆ : ಸಚಿವ ಜಾರ್ಜ್ ಮಾದರಿ ನಡೆಗೆ ಜನರ ಅಭಿನಂದನೆ..

March 3, 2026
ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

ಇರಾನ್‌ನಿಂದ ದಾಳಿಗೊಳಗಾದ ಮುಸ್ಲಿಂ ರಾಷ್ಟ್ರಗಳಿಗೆ ಮೋದಿ ಕರೆ : ಭಾರತದ ಬೆಂಬಲ ತಿಳಿಸಿದ ಪ್ರಧಾನಿ..

March 3, 2026
Next Post
ಶುದ್ಧ ಕುಡಿಯುವ ನೀರಿಲ್ಲದೆ 6 ತಿಂಗಳು: ವಾಲೇತೋಪು ಜನರ ಕಷ್ಟ ಕೇಳೋರ‍್ಯಾರು?

ಶುದ್ಧ ಕುಡಿಯುವ ನೀರಿಲ್ಲದೆ 6 ತಿಂಗಳು: ವಾಲೇತೋಪು ಜನರ ಕಷ್ಟ ಕೇಳೋರ‍್ಯಾರು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada