ದೇವೇಗೌಡರು ಎಲ್ಲಾ ಸಮುದಾಯವನ್ನ ಮೇಲೆತ್ತಿದವರು – MLC ರವಿಕುಮಾರ್
ಯೋಗೇಶ್ವರ್ ಜಂಪಿಗ್ ಸ್ಟಾರ್ ಎಂದು ಕಿಡಿ
ಎರಡು ಬಾರಿ ನಿಖಿಲ್ ಕುಮಾರಸ್ವಾಮಿ ಪೆಟ್ಟು ತಿಂದಿದ್ದಾರೆ. ಹಗಲು ದರೋಡೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಸ್ಪರ್ಧೆಗೆ ಎದೆಗಾರಿಕೆ ಬೇಕು. ಆ ಎದೆಗಾರಿಕೆ ಇರುವ ನಾಯಕ ಬೇಕು ಅಂತ ದೇವೆಗೌಡರು, ಮೋದಿ ಹಾಗೂ ಕುಮಾರಸ್ವಾಮಿ ಅವರನ್ನು ನಿಖಿಲ್ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಹೇಳಿದರು.
ಯೋಗೇಶ್ವರ್ ಜಂಪಿಗ್ ಸ್ಟಾರ್. ಒಳ ಒಪ್ಪಂದವನ್ನು ಮುರಿಯುತ್ತೇವೆ. ಒಳ ಒಪ್ಪಂದದ ವಿರುದ್ಧ ನಡೆಯುತ್ತಿರುವ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಬೇಕು ನಿಮಗೆ ದೀರ್ಘ ದಂಡ ನಮಸ್ಕಾರ ಹಾಕಿ ಚನ್ನಪಟ್ಟಣ ಜನತೆಗೆ ಅವರು ಮನವಿ ಮಾಡಿದರು.
ನಿಖಿಲ್ ಗೆದ್ದರೆ ನರೇಂದ್ರ ಮೋದಿ ಅವರಿಗೆ ಗೌರವ ಕೊಟ್ಟಂತೆ, ದೇವೇಗೌಡರು ಕಳೆದ ಒಂದು ವಾರದಿಂದ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಮ್ಮ ಬೂತ್ ನಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಗೆಲ್ಲಿಸ್ತೇವೆ, ಒಳ್ಳೆಯ ಲೀಡ್ ಕೊಡುತ್ತೇವೆ ಎಂದು ಅವರು ಹೇಳಿದರು.
ಎಲ್ಲಾ ಸಮಾಜದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಿ. ಕಾಡುಗೊಲ್ಲ ಜನಾಂಗದವರನ್ನು ಎಸ್ ಟಿ ಸಮುದಾಯಕ್ಕೆ ಸೇರಸಲು ದೇವೇಗೌಡರು ಪ್ರಯತ್ನಸುತ್ತಿದ್ದಾರೆ.
ಬೆಸ್ತರುಮತ್ತು ಗಂಗಾಮತ ಸಮಾಜದವರನ್ನ ಎಸ್ ಟಿ ಸೇರಿಸ್ತೇವೆ ಎಂದು ತಿಳಿಸಿದರು.
ಬೆಸ್ತ ಸಮಾಜದ ಎಲ್ಲಾ ಮತಗಳನ್ನು ಜೆಡಿಎಸ್ ನಿಖಿಲ್ ಕುಮಾರಸ್ವಾಮಿಗೆ ಹಾಕಬೇಕು. ದೇವೇಗೌಡರು ಎಲ್ಲಾ ಸಮುದಾಯವನ್ನ ಮೇಲೆತ್ತಿದವ್ರು. ಒಕ್ಕಲಿಗ ಸಮಾಜದವ್ರು ಮನಸ್ಸು ಮಾಡಿದ್ರೆ ಎಲ್ಲಾ ಸಮುದಾಯದವರನ್ನ ಒಟ್ಟಿಗೆ ಸೇರಿಸಿ NDA ಅಭ್ಯರ್ಥಿಯನ್ನ ಗೆಲ್ಲಿಸ ಬೇಕೆಂದು ಮನವಿ ಮಾಡಿದರು.