ಜಾತಿಗಣತಿ ಜಾರಿಗೆ (Caste census) ವಿರೋಧ ವ್ಯಕ್ತಪಡಿಸಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (chalavadi narayana swamy) ಮಾತನಾಡಿದ್ದಾರೆ. ಜಾತಿಗಣತಿ ವರದಿ ವಿರೋಧಕ್ಕೆ ಕಾರಣಗಳಿವೆ, ಹಾಗೇ ಸ್ವಾಗತ ಮಾಡಲು ಕಾರಣಗಳು ಇವೆ ಎಂದಿದ್ದಾರೆ.

ಮುಸ್ಲಿಂಮರನ್ನ ಒಲೈಕೆ (Muslim appeasement) ಮಾಡಲು ನಂಬರ್.1 ಅಂತ ಈ ವರದಿಯಲ್ಲಿ ತೋರಿಸಿದ್ದಾರೆ.ಮುಸ್ಲಿಂರನ್ನ ಡಿವಿಷನ್ ಮಾಡಿಲ್ಲ ಒಟ್ಟು ಮಾಡಿ ಗಣತಿ ಮಾಡಿದ್ದಾರೆ. ಆದ್ರೆ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ ಅವರನ್ನ ವಿಂಗಡಣೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ವರದಿಯ ಪ್ರಕಾರ ಮುಸ್ಲಿಂರ ಸಂಖ್ಯೆ ಜಾಸ್ತಿಯಿದ್ದರೆ ಅವರು ಹೇಗೆ ಮೈನಾರಿಟಿ ಆಗುತ್ತಾರೆ..? ಹಾಗಾದ್ರೆ ಮುಸ್ಲಿಂರು ಮೈನಾರಿಟಿ ಅಲ್ಲ ಅಂತ ಸರ್ಕಾರ ಘೋಷಣೆ ಮಾಡಲಿ ಎಂದು ಛಲವಾದಿ ನಾರಾಯಣಸ್ವಾಮಿ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.