ಕರ್ನಾಟಕದಲ್ಲಿ ಹಿಂದೂ ಸಮಾಜ ಮೇಲೆದ್ದರೆ ಮುಸ್ಲಿಂ ಗೂಂಡಾಗಳು ಉಳಿಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಮತ್ತು ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿವಮೊಗ್ಗದ ಬೆಳವಣಿಗೆಗಳ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಅವರ ನಿವಾಸದಲ್ಲಿ ಚರ್ಚಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಎಲ್ಲ ಮುಸ್ಲಿಮರೂ ಗೂಂಡಾಗಳು ಎಂದು ಹೇಳುವುದಿಲ್ಲ. ಆದರೆ ನಾಲ್ಕೈದು ದುಷ್ಕರ್ಮಿಗಳು ಮಾಡುತ್ತಿರುವ ಈ ಕೆಲಸವನ್ನು ಮುಸ್ಲಿಂ ಸಮಾಜದ ಪ್ರಮುಖರು ಖಂಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಸ್ಲಿಮ್ ಸಮಾಜದ ಪ್ರಮುಖರು ತಮ್ಮ ಸಮುದಾಯದ ಯುವಕರಿಗೆ ಬುದ್ಧಿ ಹೇಳಬೇಕು. ಈ ಘಟನೆಗೆ ಮುಖ್ಯ ಕಾರಣವಾಗಿರುವ ಎಸ್ಡಿಪಿಐ ಕಾರ್ಯಕರ್ತ ಶಿವಮೊಗ್ಗದ ಕಾಂಗ್ರೆಸ್ ಪಾಲಿಕೆ ಸದಸ್ಯೆಯ ಪತಿ. ಶಿವಮೊಗ್ಗ ಗಲಭೆಯ ಹಿಂದೆ ಕಾಂಗ್ರೆಸ್ ಇದೆ ಎಂದು ನೇರವಾಗಿ ಆರೋಪ ಮಾಡಿದರು.

ಗಣಪತಿ ಉತ್ಸವದ ವೇಳೆ ರಾಜ್ಯದಲ್ಲಿ ಎಲ್ಲಿಯೇ ಗಲಭೆ ನಡೆದರೂ, ಮುಸ್ಲಿಮರು ಹಿಂದೂಗಳ ಆಚರಣೆಗೆ ಅಡ್ಡಿಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಈಶ್ವರಪ್ಪ, ‘ನೀವು ನಿಮ್ ಹಬ್ಬ ಮಾಡಲ್ವಾ? ನಾವು ಬೆಂಬಲ ಕೊಡಲ್ವಾ? ನಮ್ ಹಬ್ಬದ ತಂಟೆಗೆ ಬರಬೇಡಿ’ ಎಂದು ಎಚ್ಚರಿಸಿದರು.