ಹಲಾಲ್ ಕಟ್ ಮಾಂಸ ಖರೀದಿಸುವ ವಿಚಾರ ರಾಯಕೀಯ ನಾಯಕರಿಗೆ ಈಗ ಚರ್ಚೆ, ಸವಾಲಿನ ವಿಷಯವಾಗಿದೆ. ಹಲಾಲ್ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗಂಡಸ್ತನದ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಹಲಾಲ್, ಧರ್ಮ ವ್ಯಾಪಾರದ ವಿವಾದ ವಿಚಾರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ ಇದನ್ನ ತಡೆಯಲಿ. ಸಿಎಂ ಬೊಮ್ಮಾಯಿಗೆ ಗಂಡಸ್ತನ ಇದ್ದರೆ ಇದನ್ನ ತಡೆಯಲಿ ಅಂತ ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಮೌನವಾಗಿ ಇದ್ದರೆ ಏನರ್ಥ? ನಾನು ಈ ಪದವನ್ನು ಉಪಯೋಗ ಮಾಡಬಾರದು. ಆದರೆ ನಾನು ತಡೆಯಲಾರದೆ ಈ ಪದ ಬಳಸಿದ್ದೇನೆ. ಸಮಾಜ ಒಡೆಯುವ ಹ್ಯಾಂಡ್ ಬಿಲ್ಗಳನ್ನ ಹಂಚುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.