ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ, ಅದರಲ್ಲಿ ತಪ್ಪೇನಿದೆ, ಯಾರಿಗೆ ಆಸೆ ಇರಲ್ಲ, ಎಲ್ಲರಿಗೂ ಆಸೆ ಇರುತ್ತೆ ಅಣ್ಣನನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದರಲ್ಲಿ ತಪ್ಪೇನಿದೆ ಅದರಲ್ಲಿ ಏನು ತಪ್ಪಿಲ್ಲ ಸಿಎಂ ಕುರ್ಚಿ ಖಾಲಿ ಇಲ್ಲ.

ಸಿಎಂ ಸ್ಥಾನ ಖಾಲಿ ಆದಮೇಲೆ ತಾನೇ ಅದರಲ್ಲಿ ತಪ್ಪಿಲ್ಲ, ತಪ್ಪು ಹುಡುಕುವ ಕೆಲಸ ನಾವು ಮಾಡಬಾರದು ಮನುಷ್ಯನಿಗೆ ಆಸೆ ಅನ್ನುವುದು ಇದ್ದೇ ಇರಬೇಕು ಆಸೆ ಇದ್ದರೆ ಮನುಷ್ಯನಾಗಿ ಜೀವನ ನಡೆಸಲು ಶಕ್ತಿ ಬರೋದು ಆಸೆ ಇಲ್ಲ ಅಂದರೆ ಅವನು ಸನ್ಯಾಸಿ ಆಗ್ತಾನೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ಪಕ್ಷಕ್ಕೆ ಶಾಸಕ ಸುರೇಶ್‌ಗೌಡ ಆಹ್ವಾನ ವಿಚಾರ

ಸುರೇಶ್‌ಗೌಡ ಹಿಂಭಾರನು ಅಲ್ಲ, ಮುಂಭಾರನು ಅಲ್ಲ, ಏಕೆ ಅವನ ಬಗ್ಗೆ ಮಾತಾಡುತ್ತೀರಾ ಸುರೇಶ್‌ಗೌಡ ನನ್ನ ಸ್ನೇಹಿತನೇ ಆ ಪ್ರಶ್ನೆ ಬೇರೆ ಅವರು ಬಿಜೆಪಿಗೆ ಆಹ್ವಾನ ಮಾಡಿದ್ರೆ ಇವರು ಹೋಗ್ತಾರಾ ನಾನೇ ಸುರೇಶ್‌ಗೌಡನನ್ನ ಕಾಂಗ್ರೆಸ್‌ಗೆ ಬಾರಪ್ಪ ಅಂತ ಕರೆದಿದ್ದೆ, ನನ್ನ ಮುಂದೆ ಒಪ್ಪಿಕೊಂಡಿದ್ದ ಬರ್ತಿನಿ ಅಂತಾ ಕಡೆಗಳಿಗೆಯಲ್ಲಿ ಬಿಟ್ಟು ಹೋಗ್ಬಿಟ್ಟ ಏನ್ ಮಾಡೋದು ರಾಜಕೀಯದಲ್ಲಿ ಅದು ಅವರವರ ಇಷ್ಟ.