ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಬಿ ಕೆ ಹರಿಪ್ರಸಾದ್ ಆಯ್ಕೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಬುಗಿಲೆದ್ದಿದೆ. ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಈಗ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ.
ಸಿಎಂ ಇಬ್ರಾಹಿಂ ಅವರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿಯಾಗಿದ್ದರು. ಆ ಸ್ಥಾನ ತಮಗೆ ತಪ್ಪಿದ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ಸಿಗೂ ನನಗೂ ಇಂದಿಗೆ ಸಂಬಂಧ ಮುಗಿಯಿತು. ಮೂರು ವರ್ಷದ ವಿಧಾನ ಪರಿಷತ್ ಸ್ಥಾನಕ್ಕೆ ಶೀಘ್ರ ರಾಜೀನಾಮೆ ನೀಡುವೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರು ನನಗೆ ಹೇಗೆ ಸ್ಥಾನ ತಪ್ಪಿದೆ ಎಂಬುದನ್ನು ವಿವರಿಸಬೇಕು. ದೆಹಲಿ ನಾಯಕರು ಈ ಬಗ್ಗೆ ಏನು ಹೇಳಿದ್ದಾರೆ ಎನ್ನುವುದಕ್ಕೆ ನನ್ನ ಬಳಿ ಸಾಕ್ಷಿಗಳಿವೆ. ತಬ್ಬಲಿ ಆದಂಥ ಸ್ಥಿತಿ ನನ್ನದಾಗಿದೆ. ಕೇವಲ ಸಿದ್ದರಾಮಯ್ಯಗೋಸ್ಕರ ದೇವೇಗೌಡರನ್ನು ಬಿಟ್ಟು ಬಂದೆ. ಮುಂದಿನ ದಿನದಲ್ಲಿ ರಾಜ್ಯದ ಜನತೆ ಸಿದ್ದರಾಮಯ್ಯಗೆ ಉತ್ತರ ಕೊಡುತ್ತಾರೆ. ನಿರೀಕ್ಷಿಸಿ ಆಕ್ರೋಶ ತೋರ್ಪಡಿಸಿದರು.
ಬಿ.ಕೆ. ಹರಿಪ್ರಸಾದ್ ಆಯ್ಕೆ ಮಾಡಿರುವ ಎಐಸಿಸಿ ತೀರ್ಮಾನವನ್ನು ಗೌರವಿಸುವೆ. ಡಿ.ಕೆ. ಶಿವಕುಮಾರ್ ಒಳ್ಳೆಯ ತಂಡದಲ್ಲಿ ಹರಿಪ್ರಸಾದ್ ಸೇರಿರುವುದು ಸಂತಷ. ಕೂಡಲೇ ಹಿತೈಷಿಗಳ ಸಭೆ ನಡೆಸಿ ಬೇಗೆ ನನ್ನ ಮುಂದಿನ ನಿರ್ಧಾರ ತಿಳಿಸುವೆ ಎಂದು ತಿಳಿಸಿದರು.













