‘ಆ ಮ್ಯಾನೇಜರ್ ಒಬ್ಬರ ಕಾರಣದಿಂದ ನಾವು ನಿಮ್ಮನ್ನು ಭೇಟಿಯಾಗಲು ಭಯಪಡುತ್ತಿದ್ದೆವು’ ಎಂದು ಅನೇಕರು ಅಮೀಷಾ ಪಟೇಲ್ಗೆ ಹೇಳಿದ್ದುಂಟು. ಇದೆಲ್ಲವೂ ಹಣೆಬರಹದಿಂದಲೇ ಆಗಿದೆ ಎಂದು ಅವರೀಗ ನಂಬಿದ್ದಾರೆ. ಆದರೆ ಈಗ ‘ಗದರ್ 2’ ಸಿನಿಮಾ ಭರ್ಜರಿ ತೆರೆ ಮೂಲಕ ಅಮೀಷಾ ಪಟೇಲ್ ಅವರ ಇಷ್ಟು ದಿನದ ಸೊರಗಿದ್ದ ಸಿನಿಮಾ ಭವಿಷ್ಯಕ್ಕೆ ಮತ್ತೆ ಮೆರುಗು ಸಿಕ್ಕಿದೆ. ತಮ್ಮ ಹಳೆಯ ಕಷ್ಟ ದಿನಗಳ ಬಗ್ಗೆ ಅವರು ಮನ ಬಿಚ್ಚಿ ಮಾತನಾಡಿದ್ದಾರೆ.

ಬಾಲಿವುಡ್ನ ‘ಗದರ್ 2’ ಸಿನಿಮಾ (Gadar 2) ಸೂಪರ್ ಹಿಟ್ ಆಗಿದೆ. ಈ ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ದೊಡ್ಡ ಯಶಸ್ಸು ಸಿಕ್ಕಿದೆ. ಅದೇ ರೀತಿ ಈ ಸಿನಿಮಾದ ನಾಯಕಿ ಅಮೀಷಾ ಪಟೇಲ್ (Ameesha Patel) ಕೂಡ ಸಖತ್ ಆಗಿ ಮಿಂಚುತ್ತಿದ್ದಾರೆ. ಈ ಗೆಲುವಿಗಾಗಿ ಅವರು ಬಹಳ ವರ್ಷಗಳಿಂದ ಕಾದಿದ್ದರು. ಅವರಿಗೆ ಈ ಮೊದಲೇ ಸಿಗಬೇಕಿದ್ದ ಅನೇಕ ಪ್ರಾಜೆಕ್ಟ್ಗಳು ತಪ್ಪಿ ಹೋಗಿದ್ದವು ಎಂಬುದು ಈಗ ಬಹಿರಂಗ ಆಗಿದೆ. ಆ ರೀತಿ ಆಗಲು ತಮ್ಮ ಮ್ಯಾನೇಜರ್ ಕಾರಣ ಎಂದು ಅಮೀಷಾ ಪಟೇಲ್ ಅವರು ಹೇಳಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali), ಶಾರುಖ್ ಖಾನ್ ಮುಂತಾದ ಘಟಾನುಘಟಿಗಳ ಜೊತೆ ಸಿನಿಮಾ ಮಾಡುವ ಅವಕಾಶವನ್ನು ಅಮೀಷಾ ಪಟೇಲ್ ಕಳೆದುಕೊಂಡಿದ್ದರು ಎಂಬುದು ಅಚ್ಚರಿಯ ವಿಚಾರ.
ಸೆಲೆಬ್ರಿಟಿಗಳು ಹಲವು ಕೆಲಸಕ್ಕೆ ಮ್ಯಾನೇಜರ್ಗಳನ್ನು ನೇಮಿಸಿಕೊಂಡಿರುತ್ತಾರೆ. ಸಂಭಾವನೆ, ಡೇಟ್ಸ್, ಅಗ್ರಿಮೆಂಟ್ ಇತ್ಯಾದಿ ವಿಚಾರಗಳ ಉಸ್ತುವಾರಿಯನ್ನು ಮ್ಯಾನೇಜರ್ಗಳೇ ನೋಡಿಕೊಳ್ಳುತ್ತಾರೆ. ಒಳ್ಳೆಯ ಮ್ಯಾನೇಜರ್ ಸಿಕ್ಕರೆ ಸೆಲೆಬ್ರಿಟಿಗಳ ಕೆಲಸ ಸುಲಭ ಆಗುತ್ತದೆ. ಆದರೆ ಅಮೀಷಾ ಪಟೇಲ್ ಅವರು ಮ್ಯಾನೇಜರ್ ಮಾಡಿದ ತಪ್ಪಿನಿಂದಾಗಿ ಅನೇಕ ಅವಕಾಶಗಳನ್ನು ಕಳೆದುಕೊಂಡಿದ್ದರು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ಕುರಿತು ಮಾತನಾಡಿದ್ದಾರೆ.
ಈ ಸುದ್ದಿಯನ್ನು ಸಹ ಓದಿ: ನಾನು ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟಿಲ್ಲ, ರಾಜಕೀಯವಾಗಿ ವಿಚಾರ ತಿರುಚುತ್ತಿದ್ದಾರೆ; ಸಚಿವ ಪರಮೇಶ್ವರ್ ಸ್ಪಷ್ಟನೆ .!
‘ಅನೇಕ ಒಳ್ಳೆಯ ಸಿನಿಮಾಗಳಿಗಾಗಿ ಮಾತುಕಥೆ ನಡೆದಿತ್ತು. ಈಗ ಅವುಗಳ ಹೆಸರು ಹೇಳುವುದು ಬೇಡ. ಯಾಕೆಂದರೆ ಆ ಸಿನಿಮಾಗಳು ಈಗಾಗಲೇ ಬಂದುಹೋಗಿವೆ. ದುರಾದೃಷ್ಟವಶಾತ್ ಆ ಸಮಯದಲ್ಲಿ ನನ್ನ ಮ್ಯಾನೇಜರ್ ಮತ್ತು ಸಂಜಯ್ ಲೀಲಾ ಬನ್ಸಾಲಿ ನಡುವೆ ಮನಸ್ತಾಪ ಆಗಿತ್ತು. ಆ ಮ್ಯಾನೇಜರ್ನಿಂದ ನಾನು ದೂರ ಆದ ಬಳಿಕವೇ ಈ ಎಲ್ಲ ಸಂಗತಿಗಳು ನನಗೆ ಗೊತ್ತಾದವು’ ಎಂದು ಅಮಿಷಾ ಪಟೇಲ್ ಹೇಳಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಮಾತ್ರವಲ್ಲದೇ ಯಶ್ ರಾಜ್ ಫಿಲ್ಮ್, ಸಾಜಿದ್ ನಾಡಿಯದ್ವಾಲಾ, ಶಾರುಖ್ ಖಾನ್ ಮುಂತಾದವರ ಜೊತೆಗೂ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಂಡ ಬಗ್ಗೆ ಅಮೀಷಾ ಪಟೇಲ್ ಮಾತನಾಡಿದ್ದಾರೆ.
‘ಆ ಮ್ಯಾನೇಜರ್ ಕಾರಣದಿಂದ ನಾವು ನಿಮ್ಮನ್ನು ಭೇಟಿಯಾಗಲು ಭಯಪಡುತ್ತಿದ್ದೆವು’ ಎಂದು ಅನೇಕರು ಅಮೀಷಾ ಪಟೇಲ್ಗೆ ಹೇಳಿದ್ದುಂಟು. ಇದೆಲ್ಲವೂ ಹಣೆಬರಹದಿಂದಲೇ ಆಗಿದೆ ಎಂದು ಅವರೀಗ ನಂಬಿದ್ದಾರೆ. ‘ಗದರ್ 2’ ಸಿನಿಮಾದಲ್ಲಿ ಸನ್ನಿ ಡಿಯೋಲ್ಗೆ ಜೋಡಿಯಾಗಿ ಅಮೀಷಾ ನಟಿಸಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಕ್ಕೆ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. ಈ ಗೆಲುವಿನಿಂದ ಅವರ ಮುಖದಲ್ಲಿ ನಗು ಮೂಡಿದೆ. ಅವರಿಗೆ ಇದ್ದ ಜನಪ್ರಿಯತೆ ಹೆಚ್ಚಾಗಿದೆ. ಅಮೀಷಾ ಪಟೇಲ್ ನಟಿಸಲಿರುವ ಮುಂಬರುವ ಸಿನಿಮಾಗಳ ಬಗ್ಗೆ ಕೌತುಕ ಹೆಚ್ಚಾಗಿದೆ.