ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಾನು ದರ್ಶನ್ ಸೇಫ್ ಮಾಡ್ತಿರೋದು ಸುಳ್ಳು ಎಂದಿದ್ದಾರೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ. ಶಾಸಕ ಸತೀಶ್ ರೆಡ್ಡಿ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಸತೀಶ್ ರೆಡ್ಡಿ ಜೊತೆಗೆ ದರ್ಶನ್ ಆತ್ಮೀಯ ಸಂಬಂಧ ಹೊಂದಿದ್ರಿಂದ ಸತೀಶ್ ರೆಡ್ಡಿ ದರ್ಶನ್ ಗ್ಯಾಂಗ್ ಪರ ಕೆಲಸ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿತ್ತು.

ದರ್ಶನ್ ಗ್ಯಾಂಗ್ ಬಗ್ಗೆ ಮಾತನಾಡಿರುವ ಶಾಸಕ ಸತೀಶ್ ರೆಡ್ಡಿ, ಇಂಡಸ್ಟ್ರಿಯ ಬಹುತೇಕರು ನನಗೆ ಕ್ಲೋಸ್ ಫ್ರೆಂಡ್ಸ್ ಇದ್ದಾರೆ. ನಾನು ದರ್ಶನ್ ಭೇಟಿಯಾಗಿ 3 ತಿಂಗಳು ಆಗಿದೆ. ದರ್ಶನ್ ವಿಚಾರದಲ್ಲಿ ನನ್ನ ಹೆಸರು ಥಳಕು ಹಾಕ್ತಿರೋದು ಸರಿಯಲ್ಲ. ತಪ್ಪು ಯಾರೇ ಮಾಡಿದ್ರು ಶಿಕ್ಷೆ ಆಗ್ಬೇಕು. ನಾನು ದರ್ಶನ್ ಸೇಫ್ ಮಾಡ್ತಿರೋದು ಸುಳ್ಳು. ನಾನು ಯಾರ ಬಳಿಯೂ ಕೇಳಿಲ್ಲ ಎಂದಿದ್ದಾರೆ.
ದರ್ಶನ್ ಬಿಡಿಸಲು ನಾನು ಒತ್ತಡ ಹಾಕ್ತಿದ್ದೀನಿ ಅನ್ನೋದು ಸುಳ್ಳು. ನನಗೆ ಕಾಲು ಮುರಿದಿದ್ದ ಸಂದರ್ಭದಲ್ಲಿ ದರ್ಶನ್ ನನ್ನನ್ನು ಭೇಟಿಯಾಗಿದ್ರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗ್ಬೇಕು. ನಾನು ಈ ವಿಚಾರವಾಗಿ ದರ್ಶನ್ ಪರ ನಿಲ್ಲಲ್ಲ. ದರ್ಶನ್ ತಪ್ಪು ಮಾಡಿದ್ದಾರಾ..? ಇಲ್ವಾ..? ಅನ್ನೋದು ನ್ಯಾಯಾಲಯದಲ್ಲಿ ಗೊತ್ತಾಗಲಿದೆ. ಮುಂದೆ ನೋಡೋಣ ಎನ್ನುವ ಮೂಲಕ ಜಾಣ ಉತ್ತರ ನೀಡಿದ್ದಾರೆ..
