ನಾನು ಗಾಯತ್ರಿ ಸಿದ್ಧೇಶ್ವರ್ ಬೆಂಬಲಿಸುವುದಿಲ್ಲ – ಮಾಡಾಳು ಪುತ್ರ
ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಬೆಂಬಲ ನೀಡುತ್ತಿಲ್ಲ ಎಂದು ಮಾಡಾಳು ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ. ನಾನು ಸುದ್ದಿಗೊಷ್ಠಿ ನಡೆಸಿದ ಪೋಟೋ ಇಟ್ಟುಕೊಂಡು ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ. ನಮ್ಮ ತಂಡವನ್ನ ಒಡೆಯಲು, ನಮ್ಮನ್ನ ವಿಚಲಿತರನ್ನಾಗಿ ಮಾಡಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಲಾಗ್ತಿದೆ. ಮಾಜಿ ಸಚಿವ ಎಸ್.ಎ ರವೀಂದ್ರನಾಥ್, ಕರುಣಾಕರ ರೆಡ್ಡಿ, ರೇಣುಕಾಚಾರ್ಯ, ಉತ್ತರ ಹಾಗು ದಕ್ಷಿಣ ಕ್ಷೇತ್ರದ ಅಭ್ಯರ್ಥಿಗಳು ಸೇರಿ ಸಭೆ ಮಾಡಿದ್ದೇವೆ. ನಮ್ಮ ಗುಂಪು ಒಡೆಯಬೇಕು ಅಂದುಕೊಂಡ್ರೆ ತಪ್ಪು. ನಾವೆಲ್ಲ ನೊಂದವರು ದೌರ್ಜನ್ಯಕ್ಕೆ ಒಳಾದವರು ಎಂದಿದ್ದಾರೆ.

ದಾವಣಗೆರೆ ಚನ್ನಗಿರಿಯಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ಮಾಡಾಳು ಮಲ್ಲಿಕಾರ್ಜುನ್, ಸಮಸ್ಯೆ ಸರಿಪಡಿಸಲು ರಾಜ್ಯ ನಾಯಕರು ಬರಬೇಕು. ಸರಿಬೇಕು ಅಂದಾಗ ನಾವು ಚುನಾವಣೆ ಕಣಕ್ಕೆ ಧುಮುಕುತ್ತೀವೆ ಎಂದಿದ್ದೇವೆ. ಈ ರೀತಿ ಗುಂಪು ಒಡೆಯುವಂತ ಕೆಲಸ ಮಾಡಬೇಡಿ. ಇದು ಪಕ್ಷಕ್ಕೂ ಒಳ್ಳೇದಲ್ಲ, ಯಾರಿಗೂ ಶೋಭೆ ತರುವಂತದ್ದಲ್ಲ. ಎಲ್ಲರೂ ಒಳ್ಳೇ ರೀತಿಯಲ್ಲಿ ಒಂದಾಗುವ ಕಡೆ ಪ್ರಯತ್ನ ಮಾಡಿ,

ನಮ್ಮ ರವೀಂದ್ರನಾಥ್ ಕೆಲವು ಬೇಡಿಕೆ ಇಟ್ಟಿದ್ದಾರೆ. ಅವುಗಳನ್ನ ರಾಷ್ಟ್ರ ಮತ್ತು ರಾಜ್ಯ ನಾಯಕರು ಎಷ್ಟು ಪ್ರಮಾಣದಲ್ಲಿ ಈಡೇರಿಸುತ್ತಾರೆ ನೋಡಬೇಕು, ಈ ರೀತಿ ಪೋಟೋ ಇಟ್ಕೊಂಡು ಸುಳ್ಳು ಸುದ್ದಿ ಹರಡಿಸುವುದು ತಪ್ಪು. ನಮ್ಮ ಗುಂಪು ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳುತ್ತೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ ಮಾಡಾಳು ಮಲ್ಲಿಕಾರ್ಜುನ.
