ಮಂಡ್ಯ :ಏ.೦೧: ಬಿಜೆಪಿಯಿಂದಲೇ ಚುನಾವಣಾ ಅಖಾಡಕ್ಕೆ ಧುಮುಕಲು ಸಚಿವ ನಾರಾಯಣಗೌಡ ಸಿದ್ಧತೆ. ಬಿಜೆಪಿ ಮುಖಂಡರ ಸಭೆ ನಡೆಸುವ ಮೂಲಕ ತಯಾರಿ ಆರಂಭಿಸಿದ ಸಚಿವ ನಾರಾಯಣಗೌಡ, ಜೆಡಿಎಸ್, ಕಾಂಗ್ರೆಸ್ಗೆ ತೊಡೆ ತಟ್ಟಿ ಅಖಾಡಕ್ಕಿಳಿದು ಪ್ರಚಾರ ಆರಂಭಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಸಚಿವ ನಾರಾಯಣಗೌಡ ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನ್ನನ್ನು ಬಾಂಬೆ ಕಳ್ಳ ಅಂತಾರೆ. ನಾನು ಯಾರಪ್ಪನ ಮನೆಯ ಹಣವನ್ನು ಕದ್ದಿಲ್ಲ. ಸಾಲ ತೆಗೆದುಕೊಂಡು ವಾಪಸ್ಸು ಕೊಟ್ಟಿದ್ದೇನೆ. ಹಾಸನ ಒಂದು ಕಣ್ಣು, ಕೆ.ಆರ್.ಪೇಟೆ ಒಂದು ಕಣ್ಣು ಅಂತಿದ್ರು. ಆದ್ರೆ, ಕೆ.ಆರ್.ಪೇಟೆಗೆ ಏನೂ ಮಾಡಿಲ್ಲ ಎಂದು ದೇವೇಗೌಡ್ರು ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮಾಜಿ ಶಾಸಕ ಚಂದ್ರಶೇಖರ್ ವಿರುದ್ದವೂ ವಾಕ್ ಪ್ರಹಾರ ನಡೆಸಿದ ಸಚಿವ ನಾರಾಯಣಗೌಡ, ಕೆ.ಆರ್.ಪೇಟೆಯಲ್ಲಿ ಸರ್ಕಾರಿ ಆಸ್ತಿಗಳನ್ನು ಕಬಳಿಸಿದ್ರು. ಅವರಿಂದ ಹೆಣ್ಣು ಮಕ್ಕಳು ಸುರಕ್ಷವಾಗಿ ಇರಲು ಆಗುತ್ತಿರಲಿಲ್ಲ. ತಾಲೂಕಿನಲ್ಲಿ ರೌಡಿಸಂ ಮಾಡಿಕೊಂಡು ಓಡಾಡುತ್ತಿದ್ರು. ನಾನು ಯಾವ ಮಗನಿಗೂ ಹೆದರೋದಿಲ್ಲ. ತಾಕತ್ತಿದ್ರೆ ಚುನಾವಣೆಯ ಅಖಾಡಕ್ಕೆ ಬನ್ನಿ ತೊಡೆ ತಟ್ಟೋಣ. ನಾನು ಸೋತ್ರೆ ನಿಮ್ಮ ಪಾದಕ್ಕೆ ಬಿದ್ದು ಶರಣಾಗಿ ಇರ್ತೀನಿ ಎಂದು ಸವಾಲು ಹಾಕಿದದ್ರು..