ನಿನ್ನೆಯಷ್ಟೇ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿದ್ದು, ಇನ್ನೆಡರು ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆ ಇಂದು ಅಥಣಿಯಲ್ಲಿ ಮಾತ್ನಾಡಿದ ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ʻನನಗೆ 1 ಲಕ್ಷ 20 ಸಾವಿರ ಮತಗಳು ನನಗೆ ಬರುವ ನಿರೀಕ್ಷೆ ಇದೆ. 40 ಸಾವಿರಕ್ಕೂ ಅಧಿಕ ಮತಗಳ ನಾನು ಅಂತರದಿಂದ ಗೆಲ್ಲುತ್ತೇನೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು. ʻಕಾಂಗ್ರೆಸ್ ಸೇರಿದ ಮೇಲೆ ಈ ಬಾರಿ ಉತ್ಸಾಹ ಹುಮ್ಮಸ್ಸಿನಿಂದ ಚುನಾವಣೆ ಎದುರಿಸಿದ್ದೇನೆ. ಕಾಂಗ್ರೆಸ್ ವೋಟ್ ಬ್ಯಾಂಕ್ ಜೊತೆಗೆ ಬಿಜೆಪಿ ತೊರೆದು ನನ್ನ ಬೆಂಬಲಿಗರು ಬಂದಿದ್ದಾರೆ ಎಂದರು.

ಈಗಾಗಲೇ ಅನೇಕ ಸಂಸ್ಥೆಗಳ ಸಮೀಕ್ಷೆಗಳು ಕಾಂಗ್ರೆಸ್ ಬಹುಮತ ಅಂತಾ ಹೇಳಿವೆ. ಬೇರೆ ಜಿಲ್ಲೆಗಳಿಂದ ನಾವು ಮಾಹಿತಿ ಪಡೆದಾಗ 127 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ನನ್ನ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 127 ರಿಂದ 130 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ ನಾಯಕರು ತಮ್ಮ ಪರವಾಗಿ ಸಮೀಕ್ಷೆ ಬಂದಾಗ ಸರಿಯಿದೆ ಎನ್ನುತ್ತಾರೆ. ಅವರ ವಿರುದ್ಧ ಬಂದಾಗ ಅದನ್ನ ವಿರೋಧಿಸುತ್ತಾರೆ ಅಂತ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ರು.