
ನವದೆಹಲಿ:ನವಿಲು ನಮ್ಮ ದೇಶದ ರಾಷ್ಟ್ರೀಯ ಪಕ್ಷಿಯಾಗಿದೆ.ಆ ಜೀವಿಯ ರಕ್ಷಣೆ ನಮ್ಮೆಲ್ಲರ ಹೊಣೆ. ಆದರೆ ಈ ವಿಡಿಯೋದಲ್ಲಿ ಕಾಣುತ್ತಿರುವ ಜನರು ಗಾಯಗೊಂಡು ರಸ್ತೆಯಲ್ಲಿ ಬಿದ್ದ ನವಿಲನ್ನು ರಕ್ಷಿಸುವ ಬದಲು ಸಾಯಿಸುತ್ತಿರುವುದು ಕಂಡು ಬಂದಿದೆ.
ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವ ನವಿಲಿಗೆ ಸಹಾಯ ಬೇಕಿದ್ದಲ್ಲಿ ಜನರು ಅದರ ಗರಿಗಳನ್ನು ಕಿತ್ತು ತಮ್ಮ ಮನೆಗಳಿಗೆ ಕೊಂಡೊಯ್ಯುವ ತಯಾರಿಯಲ್ಲಿ ನಿರತರಾಗಿದ್ದರು.

ಜನರು ನವಿಲಿನ ದೇಹದ ಮೇಲೆ ಕಾಣುವ ಪ್ರತಿಯೊಂದು ಗರಿಗಳನ್ನು ಕಿತ್ತು ರಸ್ತೆಯ ಮೇಲೆ ನವಿಲಿನ ದೇಹ ಎಸೆದಿದ್ದಾರೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.ಆದರೆ ಈ ಘಟನೆ ಎಲ್ಲಿ ನಡೆದಿದ್ದು ಎನ್ನುವ ಮಾಹಿತಿ ಇಲ್ಲ.
ಈ ವೀಡಿಯೊವನ್ನು @anitavladivoski X ನಲ್ಲಿ ಹಂಚಿಕೊಂಡಿದ್ದಾರೆ. ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದ ಪಕ್ಷಿಯನ್ನು ಕಂಡ ಜನರು ಅದಕ್ಕೆ ಸಹಾಯ ಮಾಡುವ ಬದಲು ಅದರ ದೇಹದಿಂದ ಗರಿಗಳನ್ನು ಕೀಳಲು ಆರಂಭಿಸಿದರು. ಗಾಯಗೊಂಡ ನವಿಲು ರಸ್ತೆಯ ಮೇಲೆ ಬಿದ್ದಿರುವುದು ಮತ್ತು ಅದರ ಸುತ್ತಲೂ ಜನರ ಗುಂಪು ಇರುವುದನ್ನು ವೀಡಿಯೊದಲ್ಲಿ ಕಾಣಬಹುದು.ಆ ನವಿಲಿಗೆ ಸಹಾಯ ಮಾಡಲು ಯಾರೂ ಸಿದ್ಧರಿಲ್ಲ.ನವಿಲಿನ ಗರಿಗಳನ್ನು ದೇಹದಿಂದ ಕೀಳುತ್ತಿದ್ದರು.
National Bird
— Dr. Anita Vladivoski (@anitavladivoski) September 12, 2024
जाहिल लोग pic.twitter.com/ofnOU06b7m
ವೀಡಿಯೋ ನೋಡಿದ ನಂತರ ಜನರ ಕೋಪ ತಾರಕಕ್ಕೇರಿದೆ. ಅಲ್ಲಿ ನವಿಲು ಗರಿಗಳನ್ನು ಲೂಟಿ ಮಾಡುವವರನ್ನು ಅನಕ್ಷರಸ್ಥರು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇದೇ ವೇಳೆ ಕೆಲವರು ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾನವೀಯತೆ ಸತ್ತಿದೆ ಎಂದು ಕಾಮೆಂಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.