ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (Mysuru) ರಸ್ತೆಯ ಮೇಲೆ ಅದ್ಭುತ ಕಲಾಕೃತಿಯೊಂದನ್ನು ಮೂಡಿಸಲಾಗಿದ್ದು, ರಂಗೋಲಿಯಲ್ಲಿ ರಾಮ ಮಂದಿರ (Ram mandir) ಮತ್ತು ರಾಮ ಭಂಟ ಹನುಮನ ಚಿತ್ರ ಮೂಡಿಬಂದಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಉತ್ತರಪ್ರದೇಶದ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ (Ayodhya) ರಾಮಲಲ್ಲ ಮೂರ್ತಿ ಪ್ರತಿಷ್ಟಾಪನೆಯಾಗಿ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಮೈಸೂರಿನ ಚಿತ್ರ ಕಲಾವಿದ ಪುನೀತ್ ಮತ್ತು ಸಂಗಡಿಗರು ಈ ಅಧ್ಬುತ ಚಿತ್ರಕಲೆಗೆ ಜೀವ ತುಂಬಿದ್ದಾರೆ. ಇದಕ್ಕಾಗಿ ಸತತ ಮೂರು ದಿನಗಳ ಕಾಲ ರಂಗೋಲಿಯಲ್ಲಿ ಚಿತ್ರ ಬಿಡಿಸಿರೋ ಕಲಾವಿದರು ಅವಿರತಾಭ್ಷರಾಮ ಹಾಕಿದ್ದಾರೆ.
ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಮ ಮಂದಿರ ಹಾಗೂ ಹನುಮನ ಚಿತ್ರ ರಂಗೋಲಿಯಲ್ಲಿ ಅರಳಿದೆ. ಸುಮಾರು 8 ಸಾವಿರ ಚದರ ಅಡಿಯಲ್ಲಿ 700 ಕೆ.ಜಿಗೂ ಹೆಚ್ಚು ರಂಗೋಲಿ ಬಳಸಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಬಿಜೆಪಿ ಶಾಸಕ ಶ್ರೀವತ್ಸ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿದ್ದು, ಕಲಾವಿದರ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.