
ಹುಬ್ಬಳ್ಳಿಯಲ್ಲಿ 5 ವರ್ಷದ ಪುಟ್ಟ ಬಾಲಕಿಯ ಮೇಲೆ (Hubli girl rape case) ಅತ್ಯಾಚಾರ ಯತ್ನ ಮಾಡಿ ಆ ನಂತರ ಕತ್ತು ಹಿಸುಕಿ ಕೊಂದ ಬಿಹಾರಿ ಮೂಲದ ನೀಚನನ್ನು ಪೊಲೀಸರು ಎನ್ಕೌಂಟರ್ ನಲ್ಲಿ (Encounter) ಮಣ್ಣು ಸೇರಿದ್ದಾನೆ. ಹುಬ್ಬಳ್ಳಿ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.

ಈ ನಡುವೆ ಪೊಲೀಸರ ಈ ಕಾರ್ಯಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Drug’a sarja) ಕೂಡ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ನಟ ಧ್ರುವ ಸರ್ಜಾ ಟ್ವೀಟ್ ಮಾಡಿ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಪೋಸ್ಟ್ ಮಾಡಿರುವ ಧ್ರುವ ಸರ್ಜಾ ಹುಬ್ಬಳ್ಳಿಯಲ್ಲಿ ಮಗುವನ್ನು ಅತ್ಯಾಚಾರ ಮಾಡಿ ಕೊಂದವನನ್ನು ಎನ್ ಕೌಂಟರ್ ಮಾಡಿದ ಪಿ. ಎಸ್. ಐ ಅನ್ನಪೂರ್ಣ ಮತ್ತು ಹುಬ್ಬಳ್ಳಿ-ಧಾರವಾಡ ಪೋಲಿಸ್ ಆಯಕ್ತರಾದ ಶ್ರೀ ಎನ್. ಶಶಿಕುಮಾರ ಅವರ ತಂಡಕ್ಕೆ ಅಭಿನಂದನೆಗಳು..ಜೈ ಆಂಜನೇಯ ಎಂದು ಪೋಸ್ಟ್ ಮಾಡಿದ್ದಾರೆ.
