ಎಲ್ಲೆಡೆ ವೈರಲ್ ಜ್ವರ ಹೆಚ್ಚಿತ್ತಿರುವ ಪ್ರಕರಣಗಳು ಮತ್ತು ಅದರ ತೀವ್ರತೆಯ ಕುರಿತು ಹುಬ್ಬಳ್ಳಿ ವೈದ್ಯರಿಗೆ ಹೊಸ ಸವಲಾಗಿ ಪರಿಣಮಿಸಿದೆ. ಕಳೆದ ಎರಡು ತಿಂಗಳಲ್ಲಿ ಸುಮಾರು 250ಕ್ಕೂ ಹೆಚ್ಚು ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿದ್ದು ತೀವ್ರ ರೋಗಲಕ್ಷಣವಿರುವ ಮಕ್ಕಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಳೆಗಾಲದಲ್ಲಿ ಅನೇಕ ಮಕ್ಕಳು ಮತ್ತು ವಯಸ್ಕರರಲ್ಲಿ ವೈರಲ್ ಜ್ವರ ಕಾಣಿಸಿಕೊಳ್ಳುತ್ತದೆ. ಈತರದ ಜ್ವರವನ್ನು ನಿಯಮಿತ ಔಷಧಿಗಳಿಂದ ಗುಣಪಡಿಸಲಾಗುತ್ತದೆ. ಆದರೆ, ಈ ವರ್ಷ ಮಕ್ಕಳಲ್ಲಿ ತೀವ್ರವಾದ ಕೆಮ್ಮು, ಕಫ ಮತ್ತು ಉಸಿರಾಟದ ತೊಂದರೆ ಕಂಡು ಬಂದಿರುವ ಕಾರಣ ವೈದ್ಯರನ್ನು ಚಿಂತೆಗೀಡುಮಾಡಿದೆ.
ಕಿಮ್ಸ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳುವ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಸುಮಾರು 163 ಮಕ್ಕಳು ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುಮಾರು 90 ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ. ಹೆಚ್ಚಿನವರು ತಮ್ಮ ಶ್ವಾಸಕೋಶದಲ್ಲಿ ಕಾಣಿಸಿಕೊಂಡಿರುವ ಸೋಂಕಿನಿಂದ ಮೃತಪಟ್ಟಿದ್ದಾರೆಯೇ ಹೊರತು ವೈರಲ್ ಸೋಂಕಿನಿಂದಲ್ಲ ಎಂದು ಹೇಳಿದ್ದಾರೆ.

ಸೋಂಕು ಹರಡುತ್ತಿರುವದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಅದಾಗ್ಯೂ, ಹಾಗಾಗ ಬದಲಾಗುತ್ತಿರುವ ಪರಿಸರ ಮತ್ತು ರೋಗ ನಿರೋಧಕ ಶಕ್ತಿಯ ಕೊರತೆಯಿಂದಾಗಿ ತೀವ್ರತೆಯನ್ನು ಉಂಟು ಮಾಡುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಕೋವಿಡ್ ಮತ್ತು ಲಾಕ್ಡೌನ್ ಕಾರಣದಿಂದಾಗಿ ಅನೇಕ ಮಕ್ಕಳು ಮತ್ತು ಬಾಣಂತಿಯರು ಹೊರಗಿನ ಪರಿಸರಕ್ಕೆ ಹೊಂದಿಕೊಳಲ್ಲಿಲ ಇದು ರೋಗ ನಿರೋಧಕ ಶಕ್ತಿಯ ಕೊರತೆಗೆ ಒಂದು ಕಾರಣವಾಗಿರಬಹುದು ಎಂದು ಕಿಮ್ಸ್ನ ಮಕ್ಕಳ ತಜ್ಞ ಡಾ. ಪ್ರಕಾಶ್ ವಾರಿ ಹೇಳಿದ್ದಾರೆ.