ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (reenukaswamy murder case) ಬಳ್ಳಾರಿ ಜೈಲು (bellary jail) ಸೇರಿರೋ ಆರೋಪಿ ದರ್ಶನ್‌ಗೆ ಬೆನ್ನು ನೋವು ಶುರುವಾಗಿದೆ. ಹೀಗಾಗಿ ಇಂಡಿಯನ್ ಟಾಯ್ಲೆಟ್ (Indian toilet) ಬಳಸಲು ಸಾಧ್ಯವಾಗುತ್ತಿಲ್ಲ. ವೆಸ್ಟರ್ನ್ ಟಾಯ್ಲೆಟ್ ಗಾಗಿ (western toilet) ದರ್ಶನ್ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

ದರ್ಶನ್ ರ (actor darshan) ಈ ಮನವಿ ಬಗ್ಗೆ, ಬೆನ್ನು ನೋವಿಗೆ ಸಂಬಂಧಪಟ್ಟಂತೆ ಜೈಲಾಧಿಕಾರಿಗಳು ಮೆಡಿಕಲ್ ರಿಪೋರ್ಟ್ (medical) ಕೇಳಿದ್ದಾರೆ. ಹೀಗಾಗಿ ನಿನ್ನೆಯೇ ದರ್ಶನ್ ಕುಟುಂಬಸ್ಥರು ಮೆಡಿಕಲ್ ರಿಪೋರ್ಟ್ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಜೈಲಿನ ವೈದ್ಯರ ಮೂಲಕ ವೈದ್ಯಕೀಯ ರಿಪೋರ್ಟ್‌ಗಳ ಪರಿಶೀಲನೆಗೆ ಜೈಲಾಧಿಕಾರಿಗಳು ಮುಂದಾಗಿದ್ದಾರೆ.
ಅಲ್ಲದೇ ದರ್ಶನ್ ಆರೋಗ್ಯ ತಪಾಸಣೆಯನ್ನೂ ಮಾಡಾಲಿದ್ದಾರೆ. ಬೆನ್ನು ನೋವಿನ ತೀವ್ರತೆ ಎಷ್ಟಿದೆ ಅಂತ ಪರೀಕ್ಷೆ ಮಾಡಿದ ಬಳಿಕ DIGಗೆ ರಿಪೋರ್ಟ್ ಸಲ್ಲಿಕೆ ಆಗಲಿದೆ. ಇನ್ನೂ ಬೆನ್ನು ನೋವಿದ್ದರೆ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಸಿಗುವ ಮೆಡಿಸಿನ್‌ಗಳನ್ನೇ ದರ್ಶನ್‌ಗೆ ನೀಡಲಿದ್ದಾರೆ.