ಕಾಫಿ ಶಾಪ್ ಗಳಲ್ಲಿ (Coffee shop)ರೆಸ್ಟ್ ರೂಮ್ ಬಳಸೋ ಹೆಣ್ನಕ್ಕಳೇ ಹುಷಾರ್. ಗೊತ್ತಿಲ್ದಂಗೆ ರೆಸ್ಟ್ ರೂಮ್ (Rest room)ನಲ್ಲಿ ಮೊಬೈಲ್ ಇಟ್ಟಿರ್ತಾರೆ ಕಿಡಿಗೇಡಿಗಳು. ಸದ್ಯ ಹೀಗೆ ಕಾಫಿ ಶಾಪ್ ವಾಶ್ ರೂಂ ನಲ್ಲಿ ಮೊಬೈಲ್ ಇಟ್ಟಿದ್ದ ಸಿಬ್ಬಂದಿ ಬಂಧನವಾಗಿದೆ.
BEL ರಸ್ತೆಯಲ್ಲಿರೋ ಥರ್ಡ್ ವೇವ್ ಕೆಫೆಯಲ್ಲಿ (Third wave cafe) ಈ ಘಟನೆ ನಡೆದಿದ್ದು,ವಾಶ್ ರೂಂನ ಡಸ್ಟ್ ಬಿನ್ ನಲ್ಲಿ ಹೋಲ್ ಮಾಡಿ ಮೊಬೈಲ್ ಇಟ್ಟಿದ್ದ ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ. ಫ್ಲೈಟ್ ಮೋಡ್ ನಲ್ಲಿ ರೇಕಾರ್ಡಿಂಗ್ ಆನ್ ಮಾಡಿ ಇಟ್ಟಿದ್ದ ಮೊಬೈಲ್ ಪತ್ತೆಯಾಗಿದ್ದು, ಮಹಿಳೆಯೊಬ್ಬರು ವಾಶ್ ರೂಮ್ ಗೆ ಹೋದಾಗ ಮೊಬೈಲ್ ಇರೋದು ಬೆಳಕಿಗೆ ಬಂದಿದೆ.
ತಕ್ಷಣವೇ ಮಹಿಳೆ ಪೊಲೀಸರಿಗೆ ವಿಚಾರ ತಿಳಿಸಿದ್ದು,ಸ್ಥಳಕ್ಕೆ ಬಂದ ಪೊಲೀಸರಿಂದ ಮೊಬೈಲ್ ಇಟ್ಟಿದ್ದ ಸಿಬ್ಬಂದಿ ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಮನೋಜ್, (23) ಬಂಧಿತ ಆರೋಪಿ. ಸದಾಶಿವನಗರ ಪೊಲೀಸರಿಂದ ಆರೋಪಿಯ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂ ಘಟನೆ ಬಗ್ಗೆ ಕ್ಷಮೆ ಕೇಳಿ, ಸಿಬ್ಬಂದಿಯನ್ನ ಥರ್ಡ್ ವೇವ್ ಕೆಫೆ ವಜಾ ಮಾಡಿದೆ.