ರಿಯಲ್ ಸ್ಟಾರ್ ಉಪೇಂದ್ರ (Real star upendra) ಅಭಿಮಾನಿಗಳ ಕಾತರತೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ರಿಯಲ್ ಸ್ಟಾರ್ ಉಪ್ಪಿ ನಿರ್ದೇಶನದ, ನಟನೆಯ ಯುಐ (UI) ಸಿನಿಮಾ ರಿಲೀಸ್ಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಈ ಸಂಬಂಧ ಫೋಸ್ಟರ್ ಒಂದನ್ನ ರಿಲೀಸ್ ಮಾಡುವ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಇದೇ ಅಕ್ಟೋಬರ್ (October) ತಿಂಗಳಿನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಗೆ ಬರೋದಾಗಿ ಚಿತ್ರತಂಡ ತಿಳಿಸಿದೆ. ಮತ್ತೊಂದೆಡೆ ತಮ್ಮದೇ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಯುಐ ಸಿನಿಮಾ ಇದೇ ಅಕ್ಟೋಬರ್ನಲ್ಲಿ ರಿಲೀಸ್ ಮಾಡೋದಾಗಿ ಖುದ್ದು ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.
ಉಪ್ಪಿ2 (Uppi 2) ನಂತರ ಮತ್ತೊಂದು ದೊಡ್ಡ ಗ್ಯಾಪ್ ತೆಗೆದುಕೊಂಡು ರಿಯಲ್ ಸ್ಟಾರ್ ಉಪೇಂದ್ರ ಯುಐ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದ ಟೈಟಲ್, ಟೀಸರ್, ಹಾಗೂ ಹಾಡಿನ ಮೂಲಕ ಅಭಿಮಾನಿಗಲ್ಲಿ ಉಪ್ಪಿ ಸಖತ್ ಕುತೂಹಸ ಸೃಷ್ಟಿಸಿದ್ದು, ಇದೀಗ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.