ಇಸ್ರೋ (ISRO) ಸಂಸ್ಥೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭೂಮಿಯ ವೀಕ್ಷಣಾ ಉಪಗ್ರಹ-8 (Satallite-8) ಅನ್ನು ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಎಸ್ಎಸ್‌ಎಲ್‌ವಿ- ಡಿ3 (SSLV-D3) ಲಾಂಚಿಂಗ್ ವೆಹಿಕಲ್ ಮೂಲಕ ಉಪಗ್ರಹ ಉಡಾವಣೆ ಮಾಡಲಾಗಿದೆ.

ತಮಿಳುನಾಡಿನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಭೂ ಪರಿವೀಕ್ಷಣಾ ತಿರು ಉಪಗ್ರಹವನ್ನು ಉಡವಾಣೆ ಮಾಡಲಾಯ್ತು.ಈ ಉಪಗ್ರಹ ಭೂಮಿಯಿಂದ 475 ಕಿ.ಮೀ ಎತ್ತರದಲ್ಲಿರುವ ಕೆಳಹಂತದ ಕಕ್ಷೆಯನ್ನ ತಲುಪಲಿದೆ. ಇಲ್ಲಿಂದ ಈ ಉಪಗ್ರಹ ಭೂಮಿಯ ವಾತಾವರಣದ ಕುರಿತು ಅಧ್ಯಯನ ನಡೆಸಲಿದೆ.
ಅಲ್ಲಿ ಈ ಉಪಗ್ರಹ ಭೂಮಿಯ ಸುತ್ತ ವೃತ್ತಾಕಾರದಲ್ಲಿ ಸುತ್ತಲಿದ್ದು ಹೀಗೆಯೆ ಒಂದು ವರ್ಷ ಕಾರ್ಯ ನಿರ್ವಹಿಸಲಿದೆ. ಈ ಮೂಲಕ ಚಂದ್ರಯಾನ-3ರ ಬಳಿಕ ಇಸ್ರೋ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಇಂದು ಬೆಳಗ್ಗೆ 9.17ರ ಸುಮಾರಿಗೆ ಈ ಉಪಗ್ರಹವನ್ನ ಯಶಸ್ವಯಾಗಿ ಬಾಹ್ಯಾಕಾಶ ತಲುಪಿಸಲಾಗಿದೆ.












