ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಜಾಲಿಯಾಗಿ ಕಾಫಿ ಕುಡಿತಾ, ಸಿಗರೇಟ್ ಸೇದುತ್ತಿರುವ ಫೋಟೋ ಒಂದು ಹೊರಬದ್ದಿದ್ದು, ಕೊಲೆ ಪ್ರಕರಣದ ಆರೋಪಿ ದರ್ಶನ್ ಜೈಲಿನನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರ ಎಂಬ ಸಂದೇಹಕ್ಕೆ ಕಾರಣವಾಗಿದೆ. ಜೈಲಿನಲ್ಲಿ ದರ್ಶನ್ ಗೆ ಎಲ್ಲಾ ಸೌಲತ್ತು ಸಿಕ್ಕಿದೆ ಎಮದು ಈ ಹಿಂದೆ ಉಹಾಪೋಹಗಳು ಕೇಳು ಬಂದಿದ್ದು, ಆದ್ರೆ ಇದೀಗ ಈ ಪೊಟೋಗಳು ಅಸಲು ಕತೆಯನ್ನ ತೆರೆದಿಡುತ್ತಿದೆ.
ಈ ಫೋಟೋದಲ್ಲಿ ಆರೋಪಿ ದರ್ಶನ್ ಯಾವುದೋ ಗಾರ್ಡನ್ ಏರಿಯಾದಲ್ಲಿ ಆರಾಮಾಗಿ ಚೇರ್ ಟೇಬಲ್ ಹಾಕಿಕೊಂಡು ರಿಲ್ಯಾಕ್ಸ್ ಮೂಡಿನಲ್ಲಿ ಇರೊದನ್ನ ನೋಡಬಹುದು. ಈ ಪೊಟೋದಲ್ಲಿ ದರ್ಶನ್ ಜೊತೆಗೆ, ಜೈಲಿನಲ್ಲಿರುವ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಮತ್ತು ದರ್ಶನ್ ಮ್ಯಾನೇಜರ್ ಕೂಡ ಜೊತೆಗಿರೋದನ್ನ ಕಾಣಬಹುದು.
ಈ ಫೋಟೋ ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕ್ರೈಂ ಮಾಡಿ ಜೈಲಿಗೆ ಬಂದವರಿಗೆ, ಜೈಲಿನಲ್ಲಿ ಈ ರೀತಿ ವ್ಯವಸ್ಥೆಗಳನ್ನ ಮಾಡಿಕೊಟ್ರೆ, ಜೈಲಿ ಅಂದ್ರೆ ಯಾರು ತಾನೇ ಹೆದರುತ್ತಾರೆ ? ಹಣ ಕೊಟ್ರೆ ಪರಪ್ಪನ ಅಗ್ರಹಾರದಲ್ಲಿ ಎಲ್ಲವೂ ಸಿಗುತ್ತದೆ ಎಂಬುದಕ್ಕೆ ಈ ಪೋಟೋನೆ ತಾಜಾ ಸಾಕ್ಷಿಯಾಗಿದೆ.