ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ತೀವ್ರ ವಾಗ್ದಾಳಿ ಮುಂದುವರೆಸಿದ್ದಾರೆ . ರಾಹುಲ್ ಗಾಂಧಿ ಹೆಸರೇಳಿ ಎಲೆಕ್ಷನ್ಗೆ ಹೋಗಲು ಅಥವಾ ಮತ ಕೇಳಲು ಕಾಂಗ್ರೆಸ್ನವರೇ ಸಿದ್ಧರಿಲ್ಲ ಅಂತ ಕಿಡಿಕಾರಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವ್ರು, ಕಾಂಗ್ರೆಸ್ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದೆ. ದೇಶದಲ್ಲಿ ಮೋದಿ ಪರ ಅಲೆ ಇದೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರ ಬಿಜೆಪಿ ಗೆಲ್ಲೋದು ನಿಶ್ಚಿತ ಅಂತ ಹೇಳಿದ್ರು. ರಾಜ್ಯ ಸರ್ಕಾರ ಆಶ್ವಾಸನೆ ನೀಡಿದ 10 ಕೆಜಿ ಅಕ್ಕಿಯಲ್ಲಿ ಒಂದು ಕಾಳು ನೀಡದೆ ಇರುವುದು ಸಾಧನೆ. 54 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 6 ಸಾವಿರ ನೀಡುತ್ತಿದೆ. ನಾನು 4000 ಸೇರಿಸಿ ಕೊಡುತ್ತಿದ್ದೆ. ಆದರೆ ಅದನ್ನು ಸಿದ್ದರಾಮಯ್ಯ ಸರ್ಕಾರ ನಿಲ್ಲಿಸಿದೆ. ಈ ಮೂಲಕ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸಿದರು. ಒಂದು ಪ್ರಾರ್ಥಮಿಕ ಆರೋಗ್ಯ ಕೇಂದ್ರ ಕೂಡಾ ಸ್ಥಾಪನೆ ಮಾಡದೆ ಇರುವುದು ಸಿದ್ದರಾಮಯ್ಯ ಸರ್ಕಾರದ ಸಾಧನೆಯಾಗಿದೆ. ಮೋದಿ ಸುಳ್ಳು ಆಶ್ವಾಸನೆ ನೀಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ಗೆ ನೀಡುವ ಓಟ್ ಅರಾಜಕತೆಗೆ ನೀಡುವ ಮತಯಾಗಿದೆ. ದೇಶದ ಭ್ರಷ್ಟಾಚಾರ, ಅಭದ್ರತೆಗೆ ನೀಡುವ ಮತವಾಗುತ್ತದೆ. ಆಂತರಿಕ ಸುರಕ್ಷತೆಯ ಅಪಾಯಕ್ಕೆ ನಾಂದಿ ಹಾಡುವ ಮತವಾಗುತ್ತದೆ ಎಂದರು.ಸುರಕ್ಷಿತ ಭಾರತ, ಸರ್ವಾಂಗಿನ ಅಭಿವೃದ್ದಿ, ಸುಧ್ರಡ ಆರ್ಥಿಕತೆ ಮೋದಿ ನಾಯಕತ್ವಕ್ಕೆ ಅರ್ಥಿಕ ಪ್ರಗತಿಗೆ ಬಿಜೆಪಿಗೆ ಮತ ನೀಡಬೇಕು. ದೇಶದ ವಿಭಜನೆ, ಭಾಷೆ, ಜಾತಿ, ಧರ್ಮದ ಮೂಲಕ ಒಡೆಯುವ ಇಂಡಿಯಾ ಮೈತ್ರಿಕೂಟವನ್ನು ಜನರು ತಿರಸ್ಕಾರ ಮಾಡಬೇಕು ಎಂದು ಮನವಿ ಮಾಡಿದರು.ದೇಶದಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿಯನ್ನು ಮೋದಿ ಸರ್ಕಾರ ನೀಡಿದೆ.ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕ, 14 ಕೋಟಿ ಮನೆಗಳಿಗೆ ಉಚಿತ ನಳ್ಳಿ ನೀರು, 11.88 ಕಿಸಾಸ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ಹಣ ನೀಡಲಾಗಿದೆ.
ವಿಶ್ವದ 5 ನೇ ದೊಡ್ಡ ಆರ್ಥಿಕತೆ ದೇಶ ಭಾತವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ, 7 ಹೊಸ ಐಐಟಿ ಸ್ಥಾಪನೆ, ಹೊಸ ಕಾಲೇಜು, ವಿವಿ ನಿರ್ಮಾಣ ಆಗಿದೆ. 29,200 ಕಿ ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನ, ರಾಮಮಂದಿರ ನಿರ್ಮಾಣ, ಸೋಮನಾಥ ದೇವಾಲಯ ಜೀರ್ಣೋದ್ಧಾರ ಮಾಡಲಾಗಿದೆ ಎಂದು ವಿವರಿಸಿದರು.
ಆಯುಷ್ಮಾನ್ ಭಾರತ್ ಅಡಿಯಲ್ಲಿ 37 ಕೋಟಿ ಜನರಿಗೆ ವಿಮೆ, 10000 ಜನೌಷಧಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಆರ್ಟಿಕಲ್ 370 ರದ್ದು, ರಕ್ಷಣಾ ವ್ಯವಸ್ಥೆಯಲ್ಲಿ ಆತ್ಮನಿರ್ಭರತೆ, ಒಂದು ಲಕ್ಷ ಕೋಟಿ ರಕ್ಷಣಾ ಉತ್ಪಾದನೆ ಮಾಡಲಾಗಿದೆ ಇದು ಮೋದಿ ಸಾಧನೆಯಾಗಿದೆ ಎಂದರು. ತೆರಿಗೆ ಹಂಚಿಕೆ 2.93 ಲಕ್ಷ ಕೋಟಿ 10 ವರ್ಷಗಳಲ್ಲಿ ನೀಡಲಾಗಿದೆ. ಯುಪಿಎ ಅವಧಿಯಲ್ಲಿ 60,000 ಕೋಟಿ ಅನುದಾನ ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 4.48 ಲಕ್ಷ ಮನೆ ನಿರ್ಮಾನ ಮಾಡಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 48 ಲಕ್ಷ ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.