ಗುತ್ತಿಗೆದಾರರ ಬಾಕಿ ಇರುವ ಬಿಲ್ ನ ಕೂಡಲೇ ಪಾವತಿ ಮಾಡಬೇಕೆಂದು ಆಗ್ರಹಿಸಿ ಇಂದು ಗುತ್ತಿಗೆದಾರರ ಸಂಘದಿಂದ (Contractors assolation) ಫ್ರೀಡಂ ಪಾರ್ಕ್ (Freedom park) ನಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.ಈ ಹಿಂದಿನ ಕೆಲಸಗಳು ಪೂರ್ಣಗೊಂಡಿದ್ದು, ಆದ್ರೆ ಬಿಬಿಎಂಪಿಯಿಂದ (BBMP) 25% ಬಿಲ್ ಬಾಕಿಯಿದೆ.

ಹೀಗಾಗಿ ಇವತ್ತು ಫ್ರೀಡಂ ಪಾರ್ಕ್ನಲ್ಲಿ ಗುತ್ತಿಗೆದಾರರು ಪ್ರತಿಭಟನೆ ನಡೆಸೋಕೆ ಮುಂದಾಗಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರ ಸಂಘ ಹಾಗೂ ಬಿಬಿಎಂಪಿ ಕಾರ್ಯ ನಿರತ ಗುತ್ತಿಗೆದಾರರ ಸಂಘದಿಂದ ಜಂಟಿಯಾಗಿ ಪ್ರತಿಭಟನೆ ಮಾಡಲಾಗ್ತಿದೆ. ಬಾಕಿ ಬಿಲ್ ಪಾವತಿಯಾಗೋವರೆಗೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಮಾಡೋದಾಗಿ ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ.
ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ (Dom dk shivakumar) 15 ದಿನಗಳಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳನ್ನ ಮುಚ್ಚಬೇಕು ಎಂದು ಬಿಬಿಎಂಪಿ ಗೆ ನಿರ್ದೇಶನ ನೀಡಿದ್ದರು. ಆದ್ರೆ ಬಾಕಿ ಪಾವತಿಯಾಗುವವರೆಗೆ ಯಾವುದೇ ಹೊಸ ಕೆಲಸಗಳನ್ನ ಆರಂಭಿಸೋದಿಲ್ಲ ಎಂದು ಗುತ್ತಿಗೆದಾರರು ಪ್ರೊಟೆಸ್ಟ್ ಮುಂದಾಗಿದ್ದಾರೆ.