ಮೂಡಾ ಹಗರಣ (MUDA scam) ಸಂಬಂಧ ರಾಜ್ಯಪಾಲ ಥಾವರ್‌ಚಂದ್ ಗೆಹಲೋಥ್ ಸಿಎಂ ಸಿದ್ದು ವಿರುದ್ಧ ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ಕೊಟ್ಟಿರೋ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಇಂದು ಹೈಕೋರ್ಟ್‌ನಲ್ಲಿ (Highcourt) ಈ ಪ್ರಾಸಿಕ್ಯೂಷನ್ ಅನುಮತಿಯನ್ನ ಪ್ರಶ್ನಿಸಿ ಅಧಿಕೃತವಾಗಿ ರಿಟ್ ಅರ್ಜಿ ಸಲ್ಲಿಸಲಿದ್ದಾರೆ. ಈ ಮೂಲಕ ಗವರ್ನರ್ (Governer) ಬಾಣಕ್ಕೆ ಕಾನೂನಾತ್ಮಕ ಪ್ರತ್ಯಸ್ತ್ರ ಹೂಡಲು ಸಿಎಂ ಮುಂದಾಗಿದ್ದಾರೆ.
ಮುಖ್ಯಮಂತ್ರಗಳ ಪರ ಇಬ್ಬರು ಘಟಾನಘಟಿ ಲಾಯರ್ಸ್ ವಾದ ಮಾಡಲಿದ್ದಾರೆ. ಹೀಗಾಗಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ (Abhishek manu singhwi), ಕಪಿಲ್ ಸಿಬಲ್ (Kapil sibal) ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ ಸಿಎಂ ಹಾಗೂ ವಕೀಲರು ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಬಳಿಕ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುತ್ತೆ