
ಜಂಜಗಿರ್ ಚಂಪಾ (ಛತ್ತೀಸ್‌ಗಢ): ಹೆಣ್ಣು ಮಕ್ಕಳಿಗೆ ಅವರ ತಂದೆಯೇ ಆದರ್ಶ, ಸೂಪರ್‌ಹೀರೋನಂತೆ. ಒಬ್ಬ ತಂದೆ ತನ್ನ ಹೆಣ್ಣುಮಕ್ಕಳ ಸುರಕ್ಷತೆಗಾಗಿ ಮತ್ತು ಅವರ ಜೀವನವನ್ನು ಉತ್ತಮಗೊಳಿಸಲು ಎಲ್ಲವನ್ನೂ ಪಣಕ್ಕಿಡುತ್ತಾನೆ. ಆದರೆ ಜಾಂಜ್ಗೀರ್ ಚಂಪಾದಲ್ಲಿ ವಿಕೃತ ತಂದೆಯೊಬ್ಬ ತನ್ನ ಹಿರಿಯ ಮಗಳನ್ನು ಹೊಡೆದು ಸಾಯಿಸಿದ್ದಾನೆ.

ಕಿರಿಯ ಮಗಳ ಮೇಲೂ ತಂದೆ ಹಲ್ಲೆ ಮಾಡಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.ಈ ಇಬ್ಬರೂ ಮಕ್ಕಳೂ ಆಟಿಕೆಗಳಿಗಾಗಿ ತಮ್ಮೊಳಗೆ ಜಗಳವಾಡುತ್ತಿದ್ದರು.ಹೆಣ್ಣು ಮಕ್ಕಳ ನಡುವಿನ ಜಗಳದಿಂದ ಕಂಟ್ರೋಲ್ ಕಳೆದುಕೊಂಡ ತಂದೆ ಕೋಪದ ಭರದಲ್ಲಿ ಅವರನ್ನು ಥಳಿಸಿದ್ದಾನೆ.ಘಟನೆಯ ದಿನ ಹಿರಿಯ ಮತ್ತು ಕಿರಿಯ ಹೆಣ್ಣು ಮಕ್ಕಳು ಆಟಿಕೆಗಳೊಂದಿಗೆ ಆಟವಾಡುತ್ತಿದ್ದರು. ಆಟವಾಡುವಾಗ ಇಬ್ಬರೂ ಒಂದೇ ಆಟಿಕೆಯಿಂದ ಆಟವಾಡಲು ಜಗಳವಾಡಿದರು.

ಇಬ್ಬರು ಸಹೋದರಿಯರ ನಡುವಿನ ಜಗಳದಿಂದ ಸಲ್ಮಾನ್ ಎಂದು ಗುರುತಿಸಲಾದ ವ್ಯಕ್ತಿ ಸಿಟ್ಟಿಗೆದ್ದಿದ್ದಾನೆ. ಕೆಲವೇ ನಿಮಿಷಗಳಲ್ಲಿ, ತಂದೆಗೆ ಕ್ರೂರತೆಯ ಪರಿ ಹೇಗಿತ್ತು ಎಂದರೆ ಅವನು ಇಬ್ಬರನ್ನೂ ನಿರ್ದಯವಾಗಿ ಹೊಡೆಯಲು ಪ್ರಾರಂಭಿಸಿದನು.ಸ್ಥಳೀಯರು ಇಬ್ಬರು ಹೆಣ್ಣು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಪಾಸಣೆ ಬಳಿಕ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾಗ ಮತ್ತೊಬ್ಬರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಪಂಚನಾಮ ಸಿದ್ಧಪಡಿಸಿದ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ’’ ಎಂದು ಚಂಪಾ ಎಸ್‌ಡಿಒಪಿ ಯದುಮಣಿ ಸಿದರ್ ತಿಳಿಸಿದ್ದಾರೆ.ಪೊಲೀಸರ ಆರಂಭಿಕ ತನಿಖೆಯ ಪ್ರಕಾರ, ಇವನ ವಿಕೃತಿ ಮತ್ತು ಕ್ರೂರತೆಗೆ ಜಿಗುಪ್ಸೆಗೊಂಡು ಅವನ ಹೆಂಡತಿ ಅವನನ್ನು ತೊರೆದು ಹೋಗಿದ್ದು ಆರೋಪಿ ಪ್ರತಿದಿನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಎಂದು ಪೊಲೀಸರು ತನಿಖೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಆಕೆ ಆತನನ್ನು ತೊರೆದಿದ್ದಾಳೆ ಎನ್ನಲಾಗಿದೆ. ಪತ್ನಿ ಹೋದ ಬಳಿಕ ಆರೋಪಿ ತಂದೆ ಇಬ್ಬರು ಹೆಣ್ಣು ಮಕ್ಕಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ. ಹೆಂಡತಿ ತನ್ನ ಹೆಣ್ಣು ಮಕ್ಕಳನ್ನು ಭೇಟಿಯಾಗಲು ಬರುತ್ತಿದ್ದಳು.