
ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿರುವ ಶಾಸಕ ಯತ್ನಾಳ್, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೇ ನಾನೇ ಮುಖ್ಯಮಂತ್ರಿಯಾಗುತ್ತೇನೆ. ಜಾತಿ ಜಾತಿ ಅಂತ ನೋಡದೆ, ದೇಶ ಉಳಿಸುವುದಕ್ಕಾಗಿ ಎಲ್ಲರೂ ಮತ ಹಾಕಿ ಎಂದರು.
ಜಾರಕಿಹೊಳಿ ಅವರ ಕಾಲಿಗೆ ನಮಸ್ಕರಿಸಿ, ಸಾಹುಕಾರ್ ಸಾಹುಕಾರ್ ಯಾಕೆ ಅನ್ನುತ್ತೀರಿ. ಅವರ ಮನೆಯ ತೊಟ್ಟಿಲನಲ್ಲಿರುವ ಕಂದಮ್ಮಗಳಿಗೂ ನಮಸ್ಕರಿಸುತ್ತೀರಿ. ಯಾಕೆ ನಿಮಗೆ ಸ್ವಾಭಿಮಾನ ಇಲ್ಲವೇ? ನಿಮ್ಮ ಜಮೀನಿನಲ್ಲಿ ಕಬ್ಬು ಬೆಳಯುತ್ತೀರಾ ಅಥವಾ ಅವರ ಜಮೀನಿನಲ್ಲಿ ಬೆಳೆಯುತ್ತೀರಾ? ಯಾರಿಗೂ ನಮಸ್ಕರಿಸಬೇಡಿ, ಸ್ವಾವಲಂಭಿಗಳಾಗಿ. ಪ್ರಧಾನಿ ನರೇಂದ್ರ ಮೋದಿಯವರೇ ಕಾಲಿಗೆ ನಮಸ್ಕಾರ ಮಾಡಿಸಿಕೊಳ್ಳುವುದಿಲ್ಲ. ಅಂದಮೇಲೆ ಇವರ ಕಾಲಿಗೆ ಏಕೆ ನಮಸ್ಕಾರ ಮಾಡುತ್ತೀರಿ ಎಂದು ಯತ್ನಾಳ್ ತಿಳಿಸಿದರು.
ಹಿರಿಯ ನಾಯಕ ಯತ್ನಾಳ್..
ಯತ್ನಾಳ್, ಬಿಜೆಪಿ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಕಳೆದ 30 ವರ್ಷದಿಂದ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ. BSY ಹಾಗೂ ವಿಜಯೇಂದ್ರ ಅವ್ರಿಗೆ ಸದಾ ಟಕ್ಕರ್ ಕೊಡೋ ಯತ್ನಾಳ್ ಈಗ ಮತ್ತೊಮ್ಮೆ ಮುಂದಿನ ಸಿಎಂ ಅನ್ನೋದ್ರ ಮೂಲಕ ಹೊಸ ರಾಜಕೀಯ ದಾಳ ಉರುಳಿಸಿದ್ದಾರೆ.