ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರಿಗೂ ಕೂಡ ಇದ್ದೇ ಇರುತ್ತೆ ಆದ್ರೆ ಕೆಲವೊಬ್ಬರಿಗೆ ಇನ್ನು ಕೆಲವರಿಗೆ ಸ್ವಲ್ಪ ಉದ್ರತ್ತದೆ ಆದರೆ ಕೂದಲು ಉದುರುವುದಕ್ಕೆ ಬರಿ ಒಂದೇ ಕಾರಣ ಅಲ್ಲ ಸಾಕಷ್ಟು ಕಾರಣಗಳಿರುತ್ತವೆ. ಕೂದಲು ಉದುರುವುದು ಬರಿ ಹುಡುಗಿಯರಿಗೆ ಮಾತ್ರ ಅಲ್ಲ ಹುಡುಗರು ಕೂಡ ಕಂಡುಬರುವಂತಹ ಕಾಮನ್ ಪ್ರಾಬ್ಲಮ್ ಆಗಿದೆ. ಕೂದಲು ಉದುರುವುದನ್ನು ತಪ್ಪಿಸಲು ಸಾಕಷ್ಟು ಪ್ರಯತ್ನವನ್ನ ಮಾಡ್ತೀವಿ. ಅದರ ಜೊತೆಗೆ ಈ ಕೆಳಕಂಡ ವಿಚಾರದ ಬಗ್ಗೆ ಸ್ವಲ್ಪ ಜಾಗೃತಿ ವಹಿಸಿದ್ರೆ ಕೂದಲು ಉದುರುವುದು ತನ್ನಷ್ಟಕ್ಕೆ ತಾನು ಕಡಿಮೆಯಾಗುತ್ತದೆ.
ಎಣ್ಣೆ ಹಚ್ಚುವುದು
ತಲೆಗೆ ಸ್ನಾನವನ್ನು ಮಾಡುವ ಮುನ್ನ ಎಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಒಂದೆರಡು ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ಸ್ನಾನ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ನಿವಾರಣೆಯಾಗುತ್ತದೆ ದಟ್ಟವಾಗಿ ಬೆಳೆಯುತ್ತದೆ.
ಪೋಷಕಾಂಶ ಇರುವಂತ ಆಹಾರ ಸೇವನೆ
ದೇಹದಲ್ಲಿ ಪೋಷಕಾಂಶಗಳ ಕೊರತೆ ಕಂಡರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಅದರಲ್ಲಿ ಕೂದಲು ಉದುರುವುದು ಕೂಡ ಒಂದು ಕಾರಣ. ಹಾಗಾಗಿ ನಿಮ್ಮ ಆಹಾರದಲ್ಲಿ ಪಾಲಕ್ ಸೊಪ್ಪು ,ಬೀಟ್ರೂಟ್, ಕ್ಯಾರೆಟ್ ನೆಲ್ಲಿಕಾಯಿ ,ಕರುಬೇವಿನ ಸೊಪ್ಪು ಇವೆಲ್ಲವನ್ನ ಸೇವಿಸಿ.ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಪೋಷಕಾಂಶಗಳು ನಿಮ್ಮ ದೇಹಕ್ಕೆ ದೊರೆಯುತ್ತದೆ.
ಹೆಚ್ಚು ಬಿಸಿ ನೀರನ್ನ ಬಳಸಬೇಡಿ
ತಲೆಕೆ ಸ್ನಾನ ಮಾಡುವಾಗ ಎಣ್ಣೆಯ ಜಿಡ್ಡನ್ನ ಹೋಗಿಸಲು ಕೆಲವರು ಹೆಚ್ಚು ಬಿಸಿ ಇರುವ ನೀರನ್ನು ಬಳಸುತ್ತಾರೆ ಇದರಿಂದ ಕೂದಲು ಸ್ಟ್ರೆಂತ್ ಅನ್ನ ಕಳೆದುಕೊಳ್ಳುತ್ತದೆ ಹಾಗೂ ಉದುರಲು ಶುರುವಾಗುತ್ತದೆ. ಕೂದಲ ಬೆಳವಣಿಗೆ ಚೆನ್ನಾಗಿರಬೇಕು ಅಂದ್ರೆ ಬೆಚ್ಚಗಿನ ನೀರನ್ನು ಬಳಸಿ ಇಲ್ಲವಾದರೆ ತಣ್ಣೀರಿನಿಂದ ತಲೆಯನ್ನು ತೊಳೆಯುವುದರಿಂದ ಕೂದಲು ಚೆನ್ನಾಗಿರುತ್ತೆ.
ಹಾರ್ಮೋನ್ ಚೇಂಜಸ್
ದೇಹದಲ್ಲಿ ಹಾರ್ಮೋನ್ ಬದಲಾವಣೆಯಾದಾಗ ಕೆಲವರಿಗೆ ಕೂದಲು ಉದುರುತ್ತದೆ ಅದಕ್ಕಿಂತ ಮುಖ್ಯವಾಗಿ ಔಷಧಿಗಳನ್ನ ಸೇವಿಸುವುದರಿಂದ ಅದರಲ್ಲೂ ಕೂಡ ಥೈರೊಯ್ಡ್ ಇದ್ದವರಿಗೆ ಕೂದಲು ಉದುರುವ ಸಮಸ್ಯೆ ಕಾಮನ್ ಆಗಿರುತ್ತದೆ. ಮುಖ್ಯವಾಗಿ ದೇಹದಲ್ಲಿ ಅನಾರೋಗ್ಯದ ಕೊರತೆಯಿಂದಾಆಂಟಿಬಯೋಟಿಕ್ ಮಾತ್ರೆಗಳನ್ನ ಸೇವಿಸಿದಾಗ ಹೇರ್ ಫಾಲ್ ಅನ್ನುವಂಥದ್ದು ಹೆಚ್ಚಾಗುತ್ತದೆ.