ಸಲಾರ್ (Salar) ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ಪ್ರಶಾಂತ್ ನೀಲ್ (Prashanth neel) ನಿರ್ದೇಶನದ ಮುಂದಿನ ಸಿನಿಮಾದ ಮುಹೂರ್ತ ನೆರವೇರಿದೆ. ತೆಲುಗಿನ ಖ್ಯಾತ ನಟ ಜೂ. ಎನ್‌ಟಿಆರ್ (Junior NTR) ನಟನೆಯಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಶುಕ್ರವಾರ ಹೈದರಾಬಾದಿನಲ್ಲಿ ಮುಹೂರ್ತ ನೆರವೇರಿಸಲಾಯ್ತು.
ಇದು ಜೂ. ಎನ್‌ಟಿಆರ್ ಅವರ 31ನೇ ಚಿತ್ರವಾಗಿದ್ದು, ಪ್ರಶಾಂತ್ ನೀಲ್ ಮತ್ತು ಜೂ.ಎನ್‌ಟಿಆರ್ ಕಾಂಬಿನೇಶನ್ ಸಖತ್ ಕುತೂಹಲ ಮತ್ತು ನಿರೀಕ್ಷೆಯನ್ನ ಹುಟ್ಟುಹಾಕಿದೆ. ಸದ್ಯ ಮುಹೂರ್ತವಷ್ಟೇ ನೆರವೇರಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಮೈತ್ರಿ ಮೂವೀಸ್ ಮೇಕರ್ (Mythri movie makers) ಈ ಚಿತ್ರದ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರಕ್ಕೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ನಾಯಕಿಯಾಗಿರಲಿದ್ದಾರೆ ಎಂದು ಊಹಿಸಲಾಗಿದೆ. ಇನ್ನು ಈ ಚಿತ್ರ 2026ರ ಜನವರಿ 9 ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.