ರಾಷ್ಟ್ರ ರಾಜಧಾನಿ ನದೆಹಲಿಯಲ್ಲಿ (New delhi) ಕೇಂದ್ರ ಚುನಾವಣಾ ಆಯೋಗ ಇಂದು ಸುದ್ದಿಗೋಷ್ಟಿ ನಡೆಸಲಿದ್ದು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣಾ (Assembly election) ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಇದೇ ವೇಳೆ, ಕರ್ನಾಟಕದ (karnataka) ಮೂರು ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳಾದ ಶಿಗ್ಗಾವಿ, ಸಂಡೂರು ಹಾಗೂ ಚನ್ನಪಟ್ಟಣ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಕೇಂದ್ರ ಚುನಾವಣಾ ಆಯೋಗ ಇಂದು ಮಧ್ಯಾಹ್ನ 3 ಗಂಟೆಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಿದೆ.
ಇನ್ನುಳಿದಂತೆ ಜಮ್ಮು-ಕಾಶ್ಮೀರ (Jammu & Kashmir) ಸೇರಿದಂತೆ ಇತರೆ ರಾಜ್ಯಗಳ ಸಾರ್ವತ್ರಿಕ ವಿಧಾನಸಭಾ ಚಚುನಾವಣೆಯ ದಿನಾಂಕಗಳು ಒಟ್ಟಿಗೆ ಘೋಷಣೆಯಾಗುವ ನಿರೀಕ್ಷೆಯಿದೆ. ಈಗಾಗಲೆ ಈ ಕುರಿತ ಎಲ್ಲಾ ತಯಾರಿ ನಡೆಸಿರುವ ಕೇಮದ್ರ ಚುನಾಣಾ ಆಯೋಗ ದಿನಾಂಕವನ್ನು ನಿಗದಿಗೊಳಿಸಿದೆ ಎನ್ನಾಗಿದೆ.