ಚಂದನವನದ ಸ್ಟಾರ್ ಡೈರೆಕ್ಟರ್ ತರುಣ್ ಕಿಶೋರ್ (Tarun kishore) ಸುಧೀರ್ ಹಾಗೂ ನಟಿ ಸೋನಲ್ ಮಂಥೆರೊ (Sonal montero) ಆಗಸ್ಟ್ 11ರಂದು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಅದಕ್ಕೂ ಮುನ್ನ ಸದ್ಯ ಈ ಸ್ಟಾರ್ ಜೋಡಿ ಹಳದಿ ಶಾಸ್ತ್ರವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದೆ.
ತರುಣ್ ಕಿಶೋರ್ ಹಳದಿ ಶಾಸ್ತ್ರದಲ್ಲಿ ನಟ ಶರಣ್, ನೆನಪಿರಲಿ ಪ್ರೇಮ್ (Nenapirali prem) ಸೇರಿ ಹಲವಾರು ಸ್ಟಾರ್‌ಗಳು ಭಾಗಿಯಾಗಿದ್ರು, ಹಳದಿ ಶಾಸ್ತ್ರಕ್ಕಾಗಿ ಸೋನಲ್, ತರುಣ್ ವಿಶೇಷವಾದ ಡ್ರೆಸ್ ಧರಿಸಿದ್ದರು. ಧರ್ಮ ಬೇರೆ ಬೇರೆಯಾಗಿದ್ರೂ ಹಿಂದೂ (Hindu) ಸಂಪ್ರದಾಯದ ಪ್ರಕಾರವೇ ಮದುವೆ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಜೋಡಿ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ತರುಣ್ ಹಾಗೂ ಸೋನಲ್ ಕುಟುಂಬಸ್ಥರು ಇವರ ಪ್ರೀತಿ ವಿಷಯ ಒಪ್ಪಿಕೊಂಡಿದ್ದು, ಮದುವೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು.ಅದರಂತೆ ಆಗಸ್ಟ್ 11ರಂದು ಮದುವೆ ನೆರವೇರಲಿದೆ.