ಮೈತ್ರಿ ಪಾಳಯದಲ್ಲಿ ಗೊಂದಲಕ್ಕೆ ಕಾರಣವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ (channapattana by eletion) ವಿಚಾರಕ್ಕೆ ಸಂಬಂಧಿಸಿದಂತೆ ಸಿ.ಪಿ.ಯೋಗೇಶ್ವರ್ (Cp yogeshwar) ರಾಜ್ಯ ನಾಯಕರನ್ನು ಬಿಟ್ಟು ರಾಷ್ಟ್ರ ನಾಯಕರ ಮೊರೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೇನು ಕೆಲವೇ ದಿನಗಳಲ್ಲೇ ಎದುರಾಗಲಿರುವ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ, ಸಿಪಿ ಯೋಗೇಶ್ವರ್ ತಾವೇ ಬಿಜೆಪಿ ಟಿಕೆಟ್ (Bjp tiket) ಆಕಾಂಕ್ಷಿ ಎಂದು ಯೋಗೇಶ್ವರ್ ತಿಳಿಸಿದ್ದಾರೆ.ಹೀಗಾಗಿ ಇತ್ತ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಸೇರಿದಂತೆ ಎಲ್ಲಾ ನಾಯಕರನ್ನ ಒಲಿಸಿಕೊಂಡಿದ್ದು, ಬಿಜೆಪಿ ಕೂಡ ಡಾ.ಸಿ.ಎನ್ ಅಶ್ವತ್ಥನಾರಾಯಣ್ ನೇತೃತ್ವದಲ್ಲಿ ಸಮಿತಿ ರಚಿಸಿ ಯೋಗೇಶ್ವರ್ ಅವರನ್ನೇ ಅಂತಿಮಗೊಳಿಸಲಾಗಿದೆ.
ಒಂದುವೇಳೆ ಯೋಗೇಶ್ವರ್ ಅಭ್ಯರ್ಥಿಯಾಗುವುದಾದ್ರೆ, ಜೆಡಿಎಸ್‌ನಿಂದಲೇ ಅಭ್ಯರ್ಥಿ (Jds candidate) ಆಗಲಿ ಎಂದು ಜೆಡಿಎಸ್ ಪಕ್ಷ ಪಟ್ಟು ಹಿಡಿದಿದೆ. ಆದ್ರೆ ಯೋಗೇಶ್ವರ್‌ಗೆ ಜೆಡಿಎಸ್‌ಗೆ ಹೋಗಲು ಮನಸ್ಸಿಲ್ಲ.ಈ ಹಿನ್ನಲೆ ಬಿಜೆಪಿ ಯೋಗೇಶ್ವರ್ ರಾಜ್ಯ ನಾಯಕರನ್ನು ಬಿಟ್ಟು ನೇರವಾಗಿ ಹೈಕಮಾಂಡ್ ನಾಯಕರನ್ನೇ ಒಲಿಸಿಕೊಳ್ಳಲು ಮುಂದಾಗಿದ್ದಾರೆ.


