ಸಿಎಂ ಸಿದ್ದರಾಮಯ್ಯ (cm siddaramaiah) ರಾಜೀನಾಮೆಗೆ ಪಟ್ಟು ಹಿಡಿದು ಮೈತ್ರಿ ಪಡೆ ಕೈಗೊಂಡಿರುವ ಮೈಸೂರು ಚಲೋ (Mysore halo), ಮಂಡ್ಯ (mandya) ಗಡಿಭಾಗವನ್ನು ತಲುಪಿದೆ. ಕಳೆದ ಮೂರು ದಿನಗಳಿಂದ ಪಾದಯಾತ್ರೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇವತ್ತು 4ನೇ ದಿನದ ಪಾದಯಾತ್ರೆ ನಿಡುಘಟ್ಟದಿಂದ ಮಂಡ್ಯದವರೆಗೆ ಸಾಗಲಿದೆ.
ಹೆಚ್ಡಿ ಕುಮಾರಸ್ವಾಮಿ (HD kumaraswamy) ಮಂಡ್ಯದಿಂದ ಸಂಸದರಾಗಿ ಕೇಂದ್ರ ಸಚಿವರಾಗಿರುವ ಕಾರಣ ಇವತ್ತು ಪಾದಯಾತ್ರೆಯಲ್ಲಿ ದಳಪತಿ ಭಾಗಿಯಾಗುವ ನಿರೀಕ್ಷೆ ಇದೆ. ಅಷ್ಟೇ ಅಲ್ಲ, ಒಕ್ಕಲಿಗರ ಕೋಟೆ ಮಂಡ್ಯದಲ್ಲೇ ಡಿಸಿಎಂ ಡಿಕೆಶಿಯ (Dom Dk Shivakumar) ಪ್ರತಿಯೊಂದು ಆರೋಪಕ್ಕೂ ಕೇಂದ್ರ ಸಚಿವ ಹೆಚ್ಡಿಕೆ ತಿರುಗೇಟು ನೀಡುವ ಸಾಧ್ಯತೆ ಇದೆ.
ಈ ಎಲ್ಲದರ ಮಧ್ಯೆ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಬಹಳ ಸಕ್ರಿಯವಾಗಿ ಪಾಲ್ಗೊಂಡು ಮಿಂಚು ಹರಿಸುತ್ತಿದ್ದಾರೆ. ಹೀಗಾಗಿ ಜೆಡಿಎಸ್ ನ (Jds) ಮುನ್ನಡೆಸುವ ಜವಾಬ್ದಾರಿಯನ್ನ ಸದ್ಯದಲ್ಲಿಯೇ ನಿಖಿಲ್ ಹೆಗಲಿಗೆ ನೀಡಬಹುದು ಎಂಬ ಚರ್ಚೆಗಳೂ ವ್ಯಾಪಕವಾಗಿದೆ.