ವಾಲ್ಮೀಕಿ ನಿಗಮದ ಹಗರಣ (Valmiki board scam) ಮೂಡ ಹಗರಣ (MUDA scam) ಭ್ರಷ್ಟಾಚಾರದ ಆರೋಪ ಇಷ್ಟೆಲ್ಲಾ ವಿವಾದಗಳ ನಡುವೆ ಸಿಎಂ ಸಿದ್ದರಾಮಯ್ಯ (Cm siddaramiah) ನೇತೃತ್ವದ ಸರ್ಕಾರ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಮೈಸೂರಿನ ಚಾಮುಂಡಿ ಬೆಟ್ಟದ (Chamundi hill) ಆಡಳಿತ ಮತ್ತು ಆಚರಣೆಗಳಿಗೆ ಸಂಬಂಧಪಟ್ಟಂತೆ ಸರ್ಕಾರ ಹೊರಡಿಸಿರುವ ಅಧಿನಿಯಮ ಇದೀಗ ವಿವಾದಕ್ಕೆ ಕಾರಣವಾಗಿದೆ.
ನಾಡ ಅಧಿದೇವತೆ ಚಾಮುಂಡೇಶ್ವರಿ ಒಡೆಯರ್ ವಂಶಸ್ಥರ ಕುಲದೇವತೆ. ಚಾಮುಂಡಿ ಬೆಟ್ಟದ ದೇವಸ್ಥಾನದ ನಿರ್ಮಾಣ ಅಭಿವೃದ್ಧಿ ಮತ್ತು ಆಡಳಿತದಲ್ಲಿ ರಾಜ ವಂಶಸ್ಥರ ಕೊಡುಗೆ ಅಪಾರ. ಆದರೆ ಇದೀಗ ಚಾಮುಂಡಿ ಬೆಟ್ಟದ ಸಂಪೂರ್ಣ ಆಡಳಿತದ ಅಧಿಕಾರವನ್ನು ಸರ್ಕಾರ ಕಸಿದುಕೊಳ್ಳುವ ನಿಟ್ಟಿನಲ್ಲಿ ಹೊರಡಿಸಿರುವ ಅಧಿನಿಯಮ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ಚಾಮುಂಡಿ ಬೆಟ್ಟದ ಆಡಳಿತದ ಹಕ್ಕನ್ನು ರಾಜ ವಂಶಸ್ಥರಿಂದ ಕಸಿದುಕೊಂಡು ,ಅದರ ಬದಲಾಗಿ ಪ್ರಾಧಿಕಾರ ರಚನೆ ಮಾಡುವುದು ಸರ್ಕಾರದ ಉದ್ದೇಶ. ಈ ಪ್ರಾಧಿಕಾರದಲ್ಲಿ ರಾಜವಂಶಸ್ಥರಿಗೆ ಯಾವುದೇ ಸ್ಥಾನಮಾನವಿರುವುದಿಲ್ಲ. ಸ್ಥಳೀಯ ಶಾಸಕರು , ಅಧಿಕಾರಿಗಳು ಈ ಪ್ರಾಧಿಕಾರದಲ್ಲಿ ಇರುತ್ತಾರೆ.
ಖುದ್ದು ಮುಖ್ಯಮಂತ್ರಿ ಈ ಪ್ರಾಧಿಕಾರದ ಅಧ್ಯಕ್ಷರಾಗಿದ್ದು,ಸಂಪೂರ್ಣ ಅಧಿಕಾರ ಮುಖ್ಯಮಂತ್ರಿಯ ಕೈಯಲ್ಲಿರಲಿದೆ. ಈ ಮೂಲಕ ಅಧಿಕಾರ ,ಆಡಳಿತ ನಿರ್ವಹಣೆಯಿಂದ ರಾಜವಂಶಸ್ಥರನ ಸಂಪೂರ್ಣವಾಗಿ ಹೊರಗಿಡುವ ಅಧಿನಿಯಮ ಇದಾಗಿದೆ.
ಕೇವಲ ಚಾಮುಂಡಿ ಬೆಟ್ಟದ ಆಡಳಿತದ ಹಕ್ಕು ಪ್ರತಿಪಾದನೆ ಮಾತ್ರವಲ್ಲದೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರಾಜ ವಂಶಸ್ಥರಿಗೆ ಸೇರಿದ ಸಾಕಷ್ಟು ಆಸ್ತಿಗಳನ್ನು ಸರ್ಕಾರ ತನ್ನದಾಗಿ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರವನ್ನು ಈ ಅಧಿನಿಯಮದಲ್ಲಿ ಪ್ರಕಟ ಮಾಡಿದ್ದು ,ಇದಕ್ಕೆ ರಾಜಮಾತೆ ಪ್ರಮೋದಾದೇವಿ (Pramoda Devi) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ಪ್ರಮೋದಾದೇವಿ ಹೈಕೋರ್ಟ್ ನಲ್ಲಿ (Highcourt) ರಿಟ್ ಅರ್ಜಿ ಸಲ್ಲಿಕೆ ಮಾಡಿದರು ಇದೀಗ ಹೈಕೋರ್ಟ್ ಈ ಪ್ರಾಧಿಕಾರ ಆಡಳಿತ ನಿರ್ವಹಿಸದ ಹಾಗೆ ತಡೆಯಾಜ್ಞೆ ನೀಡಿತು ಸರ್ಕಾರಕ್ಕೆ ತೀವ್ರ ಮುಜುಗರ ಮತ್ತು ಹಿನ್ನಡೆಯನ್ನು ಉಂಟು ಮಾಡಿದೆ.
ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗಲೆಲ್ಲ ರಾಜವಂಶಸ್ಥರು,ಅರಮನೆ(Mysore palace),ಚಾಮುಂಡಿ ಬೆಟ್ಟ,ದಸರಾ (Dussera) ಮಹೋತ್ಸವದ ವಿಚಾರಗಳಲ್ಲಿ ಇಂತಹ ವಿವಾದಗಳು ಆಗಾಗ್ಗೆ ಸೃಷ್ಟಿಯಾಗುತ್ತದೆ.ಈಗ ಮತ್ತೆ ಅಂತದ್ದೇ ಮತ್ತೊಂದು ವಿವಾದ ಸೃಷ್ಟಿಯಾಗಿದ್ದು, ಕಾನೂನಾತ್ಮಕವಾಗಿ ಇದನ್ನ ಎದುರಿಸಲು ಸಿದ್ಧರಿದ್ದೇವೆ ಎಂದು ಸಂಸದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (yaduveer krishnadatta chamaraja odeyar) ಪ್ರತಿಕ್ರಿಯಿಸಿದ್ದಾರೆ.